ಭಟ್ಕಳ: ಅಕ್ರಮ ಗೋಮಾಂಸ ಮಾರಾಟದ ವಿರುದ್ಧ ಫತ್ವಾ ಹೊರಡಿಸಿದ ತಂಝೀಮ್‌

ರಾಜ್ಯದಲ್ಲಿ ಗೋಹತ್ಯೆ ನಿಷೇಧಗೊಂಡು ಮೂರು ವರ್ಷಗಳ ನಂತರ ಅಕ್ರಮ ಗೋಮಾಂಸ ಸಾಗಾಟ ಮತ್ತು ಮಾರಾಟದ ವಿರುದ್ಧ ಭಟ್ಕಳದ ತಂಝೀಮ್ ಫತ್ವಾ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾರವಾರ: ರಾಜ್ಯದಲ್ಲಿ ಗೋಹತ್ಯೆ ನಿಷೇಧಗೊಂಡು ಮೂರು ವರ್ಷಗಳ ನಂತರ ಅಕ್ರಮ ಗೋಮಾಂಸ ಸಾಗಾಟ ಮತ್ತು ಮಾರಾಟದ ವಿರುದ್ಧ ಭಟ್ಕಳದ ತಂಝೀಮ್ ಫತ್ವಾ ಹೊರಡಿಸಿದೆ.

ಅಕ್ರಮ ಜಾನುವಾರು ಸಾಗಣೆ ಮತ್ತು ಗೋಮಾಂಸ ಮಾರಾಟದ ವಿವಾದವನ್ನು ಕೊನೆಗೊಳಿಸುವ ಗುರಿಯನ್ನು ಈ ಫತ್ವಾ ಹೊಂದಿದೆ ಎಂದು ತಿಳಿದುಬಂದಿದೆ.

ಈ ವಾರದ ಆರಂಭದಲ್ಲಿ ಫತ್ವಾವನ್ನು ಹೊರಡಿಸಲಾಗಿತ್ತು. ಅಕ್ರಮ ಗೋಸಾಗಣೆ ಮತ್ತು ಮಾರಾಟ ಮಾಡುವವರ ಬಳಿ ಗೋಮಾಂಸವನ್ನು ಖರೀದಿಸದಂತೆ ಭಟ್ಕಳದ ಜನರಿಗೆ ತಿಳಿಸಲಾಗಿದೆ ಎಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದರ್ ಅವರು ಹೇಳಿದ್ದಾರೆ.

ಇಸ್ಲಾಂನಲ್ಲಿ ಇಂತಹ ಕಾನೂನುಬಾಹಿರ ಕೃತ್ಯಗಳಿಗೆ ಅವಕಾಶವಿಲ್ಲ, ಜಾನುವಾರುಗಳನ್ನು ಬೀದಿಯಿಂದ ಹೊತ್ತುಕೊಂಡು ಬಂದು ಮಾರಾಟ ಮಾಡಿದ ನಿದರ್ಶನಗಳಿವೆ. “ಜಾನುವಾರುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಸಾಗಿಸಿದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಜ್ಯದ ಹಾವೇರಿ, ಉಡುಪಿ ಮತ್ತಿತರ ಕಡೆ ಜಾನುವಾರು ಮಾರುಕಟ್ಟೆಗಳಿವೆ. ಈ ಮಾರುಕಟ್ಟೆಗಳಿಂದ ಜಾನುವಾರುಗಳನ್ನು ಖರೀದಿಸಬಹುದು ಎಂದು ತಿಳಿಸಿದರು.

ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವ ಮತ್ತು ಗೋಮಾಂಸ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದೇವೆಂದು ಹೇಳಿದ್ದಾರೆ.

ಪೊಲೀಸರು 2020 ರಿಂದ ನವೆಂಬರ್ 2023 ರವರೆಗೆ ಅಕ್ರಮ ಗೋಮಾಂಸ ಸಾಗಣೆ ಸಂಬಂಧ ಒಟ್ಟು 179 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com