ಸ್ಪೈಸ್‌ಜೆಟ್ ವಿಮಾನ 14.5 ತಾಸು ವಿಳಂಬ: ಸಿಬ್ಬಂದಿ ವಿರುದ್ಧ ಕೋಪೋದ್ರಿಕ್ತ ಪ್ರಯಾಣಿಕರ ವಾಗ್ವಾದ!

ಬೆಂಗಳೂರಿನಿಂದ ಮುಂಬೈಗೆ ತೆರಳಬೇಕಾಗಿದ್ದ ಸ್ಪೈಸ್‌ಜೆಟ್ ವಿಮಾನ ಹಾರಾಟಕ್ಕೆ ಅಗತ್ಯವಾದ ನಿರ್ಣಾಯಕ ಉಪಕರಣಗಳು ಲಭ್ಯ ಇಲ್ಲದಿದ್ದು ಮತ್ತು ಸಿಬ್ಬಂದಿ ಪಾಳಿ ಅವಧಿ ಮುಗಿದಿದ್ದ ಕಾರಣ 14.5 ಗಂಟೆಗಳ ವಿಳಂಬವಾಯಿತು. ಇದರಿಂದಾಗಿ ಆಕ್ರೋಶಗೊಂಡ ಪ್ರಯಾಣಿಕರು, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. 
ಸ್ಪೈಸ್ ಜೆಟ್ ವಿಮಾನ
ಸ್ಪೈಸ್ ಜೆಟ್ ವಿಮಾನ

ಬೆಂಗಳೂರು: ಬೆಂಗಳೂರಿನಿಂದ ಮುಂಬೈಗೆ ತೆರಳಬೇಕಾಗಿದ್ದ ಸ್ಪೈಸ್‌ಜೆಟ್ ವಿಮಾನ ಹಾರಾಟಕ್ಕೆ ಅಗತ್ಯವಾದ ನಿರ್ಣಾಯಕ ಉಪಕರಣಗಳು ಲಭ್ಯ ಇಲ್ಲದಿದ್ದು ಮತ್ತು ಸಿಬ್ಬಂದಿ ಪಾಳಿ ಅವಧಿ ಮುಗಿದಿದ್ದ ಕಾರಣ 14.5 ಗಂಟೆಗಳ ವಿಳಂಬವಾಯಿತು. ಇದರಿಂದಾಗಿ ಆಕ್ರೋಶಗೊಂಡ ಪ್ರಯಾಣಿಕರು, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. 

ಟರ್ಮಿನಲ್ 1 ರಿಂದ ಬೆಳಿಗ್ಗೆ 6 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ SG-385 ಫ್ಲೈಟ್ ಅಂತಿಮವಾಗಿ ಬೆಂಗಳೂರಿನಿಂದ ರಾತ್ರಿ 8.30 ಕ್ಕೆ ಹೊರಟಿತು. ಇಷ್ಟು ಹೊತ್ತು ತಡವಾಗಿದ್ದಕ್ಕೆ ಸ್ಪೈಸ್ ಜೆಟ್ ಯಾವುದೇ ಕಾರಣ ತಿಳಿಸಿರಲಿಲ್ಲ. ಈ ಕುರಿತು ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಗೇಟ್ ನಂಬರ್ 15ರ ಹೊರಗಡೆ ಸ್ಪೈಸ್ ಜೆಟ್ ಕೌಂಟರ್ ಸಿಬ್ಬಂದಿ ಸುತ್ತುವರೆದಿರುವ ಪ್ರಯಾಣಿಕರು ಗಲಾಟೆ ಮಾಡುತ್ತಿರುವುದನ್ನು ತೋರಿಸಿದೆ.

ಪ್ರಯಾಣಿಕರು ವಿಮಾನ ಹತ್ತಿದ ನಂತರ ಅದು ಟೇಕ್ ಆಫ್ ಆಗುವ ಹಂತದಲ್ಲಿದ್ದಾಗ, ತಾಂತ್ರಿಕ ದೋಷ ಉಂಟಾಗಿದೆ. ಅದರ ಪ್ರಮುಖ ಭಾಗವು ಬೆಂಗಳೂರಿನಲ್ಲಿ ಲಭ್ಯವಿಲ್ಲದ ಕಾರಣ ಮುಂಬೈನಿಂದ ಸಾಗಿಸಬೇಕಾಗಿದ್ದ ಕಾರಣ, ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗಿದೆ.

ತಾಂತ್ರಿಕ ದೋಷ ಕಾರ್ಯ ಸರಪಡಿಸುವ ಹೊತ್ತಿಗೆ ಕ್ಯಾಬಿನ್ ಸಿಬ್ಬಂದಿಯ ಡ್ಯೂಟಿ ಅವಧಿ ಮುಗಿದಿದೆ. ಅವರು ಶಿಫ್ಟ್ ನಲ್ಲಿ ಗರಿಷ್ಠ 10 ಗಂಟೆಗಳವರೆಗೆ ಮಾತ್ರ ಕೆಲಸ ಮಾಡಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಅವಧಿ ಕೆಲಸ ಮಾಡುವಂತಿಲ್ಲ. ಇದರಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com