ನೆಲಮಂಗಲ ATM ಗೆ ಕನ್ನ; ಗ್ಯಾಸ್ ಕಟರ್ ಬಳಸಿ ಎಟಿಎಂ ತೆರೆಯುವ ವೇಳೆ ಅಪಾರ ಪ್ರಮಾಣದ ಹಣ ಸುಟ್ಟು ಕರಕಲು!

ಎಟಿಎಂಗೆ ಕನ್ನ ಹಾಕಿದ್ದ ಕದೀಮರು ಎಟಿಎಂ ತೆರೆಯಲು ಗ್ಯಾಸ್  ಕಟರ್ ಬಳಸಿದ ಪರಿಣಾಮ ಅದರ ಬೆಂಕಿಗೆ ಎಟಿಎಂ ಮಶೀನ್ ನಲ್ಲಿದ್ದ ಅಪಾರ ಪ್ರಮಾಣದ ಹಣ ಸುಟ್ಟು ಕರಕಲಾಗಿದೆ.
ಎಟಿಎಂನಲ್ಲಿ ಕಳ್ಳರು (ಸಾಂದರ್ಭಿಕ ಚಿತ್ರ)
ಎಟಿಎಂನಲ್ಲಿ ಕಳ್ಳರು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಎಟಿಎಂಗೆ ಕನ್ನ ಹಾಕಿದ್ದ ಕದೀಮರು ಎಟಿಎಂ ತೆರೆಯಲು ಗ್ಯಾಸ್  ಕಟರ್ ಬಳಸಿದ ಪರಿಣಾಮ ಅದರ ಬೆಂಕಿಗೆ ಎಟಿಎಂ ಮಶೀನ್ ನಲ್ಲಿದ್ದ ಅಪಾರ ಪ್ರಮಾಣದ ಹಣ ಸುಟ್ಟು ಕರಕಲಾಗಿದೆ.

ಬೆಂಗಳೂರು ನಗರದ ಹೊರವಲಯದ ನೆಲಮಂಗಲದಲ್ಲಿ ಗುರುವಾರ ಗ್ಯಾಸ್‌ ಕಟ್ಟರ್‌ ಬಳಸಿ ಕಳ್ಳರ ತಂಡವೊಂದು ಸ್ವಯಂಚಾಲಿತ ಟೆಲ್ಲರ್‌ ಮೆಷಿನ್‌ (ಎಟಿಎಂ) ಒಡೆದು ತೆರೆಯಲು ಯತ್ನಿಸಿದ ಬಳಿಕ ಅದರಲ್ಲಿ ಸಂಗ್ರಹಿಸಿಟ್ಟಿದ್ದ ಹಲವು ಕರೆನ್ಸಿ ನೋಟುಗಳು ಸುಟ್ಟು ಬೂದಿಯಾದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಮುಂಬೈನಿಂದ ಬ್ಯಾಂಕ್ ಅಧಿಕಾರಿಗಳು ಎಟಿಎಂ ಅಳವಡಿಸಿರುವ ಕಟ್ಟಡದ ಮಾಲೀಕರಿಗೆ ಕರೆ ಮಾಡಿ ಪರಿಶೀಲಿಸಿದರು. ಕಟ್ಟಡದ ಮಾಲೀಕರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಕಳ್ಳರು ತಮ್ಮ ಸಲಕರಣೆಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಯಲ್ಲಿ ಇಬ್ಬರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com