ಚೀನಾದ 21 ಮಂದಿ ತಾಂತ್ರಿಕ ಸಿಬ್ಬಂದಿ ಕೈತಲುಪಿದ ವೀಸಾ: ಚಾಲಕ ರಹಿತ ಮೊದಲ ಮೆಟ್ರೋ ರೈಲು ಸಂಚಾರ ಶೀಘ್ರದಲ್ಲೇ ಆರಂಭ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಿಲ್ಲದ ಮೊದಲ ಮೆಟ್ರೋ ರೈಲು ಶೀಘ್ರದಲ್ಲೇ ತನ್ನ ಸಂಚಾರವನ್ನು ಆರಂಭಿಸಲಿದೆ.
ರೈಲು.
ರೈಲು.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಿಲ್ಲದ ಮೊದಲ ಮೆಟ್ರೋ ರೈಲು ಶೀಘ್ರದಲ್ಲೇ ತನ್ನ ಸಂಚಾರವನ್ನು ಆರಂಭಿಸಲಿದೆ.

ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ)ನ ಲೋಕೋ-ಪೈಲಟ್‌ಗಳು, ತಂತ್ರಜ್ಞರು ಮತ್ತು ಎಂಜಿನಿಯರ್‌ಗಳನ್ನು ಒಳಗೊಂಡ 21 ಮಂದಿ ಚೀನಾದ ತಾಂತ್ರಿಕ ಸಿಬ್ಬಂದಿಗಳಿಗೆ ಭಾರತಕ್ಕೆ ಭೇಟಿ ನೀಡಲು ವೀಸಾ ದೊರೆತಿದ್ದು, ಅಂದುಕೊಂಡಂತೆ ಆದರೆ, ಚಾಲಕ ರಹಿತ ಮೊದಲ ಮೆಟ್ರೋ ರೈಲು ಮುಂದಿನ ವಾರ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ.

ಚೀನಾ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ) ರೈಲನ್ನು ಸಿದ್ಧಪಡಿಸಿದ್ದು, ಡಿಸೆಂಬರ್ 15ರಂದು ಈ ರೈಲು ಭಾರತಕ್ಕೆ ರವಾನೆಯಾಗಲಿದೆ. ಮೊದಲಿಗೆ ರೈಲು ಚೆನ್ನೈ ಬಂದರನ್ನು ತಲುಪಲಿದ್ದು, ಮಕರ ಸಂಕ್ರಾಂತಿಗೂ ಮೊದಲು (ಜನವರಿ 15) ಬೆಂಗಳೂರಿನ ಹೆಬ್ಬಗೋಡಿಗೆ ತಲುಪುವ ನಿರೀಕ್ಷೆಗಳಿವೆ ಎಂದು ಬಿಎಂಆರ್‌ಸಿಎಲ್'ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ಬಿಎಂಆರ್'ಸಿಎಲ್ ತಂಡ ಚೀನಾಗೆ ಭೇಟಿ ನೀಡಿತ್ತು. ಭೇಟಿ ಬೆನ್ನಲ್ಲೇ ನವೆಂಬರ್ 20ರಂದು ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಸಾಧ್ಯವಾಗಿರಲಿಲ್ಲ.

ಮೊದಲ ರೈಲಿನ ಪರೀಕ್ಷಾ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಪರಿಣತರ ಅಗತ್ಯವಿರುತ್ತದೆ. ಉಳಿದ ರೈಲುಗಳ ನಿರ್ವಹಣೆಗೂ ಮಾರ್ಗದರ್ಶನದ ಅಗತ್ಯವಿರುತ್ತದೆ. ಇದಕ್ಕೆ ಚೀನಾದ ತಾಂತ್ರಿಕ ಸಿಬ್ಬಂದಿ ನೆರವಾಗಲಿದ್ದಾರೆಂದು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೂಲಕ ಆರ್ ವಿ ರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಚೀನಾದ ತಾಂತ್ರಿಕ ಸಿಬ್ಬಂದಿಯ ಮೊದಲ ಬ್ಯಾಚ್ ನಲ್ಲಿರುವ 21 ಮಂದಿಗೆ ಭಾರತಕ್ಕೆ ಭೇಟಿ ನೀಡಲು ಈಗಾಗಲೇ ವೀಸಾ ತಲುಪಿದೆ. ಮೊದಲು ಚೀನಾದ ತಾಂತ್ರಿಕ ಸಿಬ್ಬಂದಿಗಳು ಈ ರೈಲಿನಲ್ಲಿ ಸಂಚರಿಸಲಿದ್ದಾರೆ. ನಂತರ ಉಳಿದವರು ಸಂಚರಿಸಲಿದ್ದಾರೆ. ರೈಲು ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ ಹೊಂದಿರಲಿದೆ. ಅದನ್ನು ನಾವು ನಿರ್ವಹಿಸುವುದಿಲ್ಲ.

ಕೋಲ್ಕತ್ತಾ ಬಳಿಯ ಉತ್ತರ ಪರಗಣದಲ್ಲಿರುವ ಟಿಟಾಗರ್‌ ರೈಲಿನ ವ್ಯಾಗನ್ ಉತ್ಪಾದನಾ ಘಟಕದಲ್ಲಿ ಸಿದ್ಧಗೊಳ್ಳುತ್ತಿರುವ ರೈಲುಗಳಿಗೂ ಚೀನಾದ ತಂತ್ರಜ್ಞರ ಅಗತ್ಯವಿದೆ. ಅಲ್ಲಿ 32 ಹೊಸ ರೈಲುಗಳ ತಯಾರಿಕೆಗೆ ಅವರ ಸಹಾಯದ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ರೈಲುಗಳ ಸಂಚಾರಕ್ಕೆ ಸಿವಿನ್ ಕಾಮಗಾರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೇ.93ರಷ್ಟು ಹಳಿಗಳು ಸಿದ್ಧವಾಗಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com