Garlic Price: ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆ: ಪ್ರತಿ ಕೆಜಿ 400 ರೂ. ಗೆ ಏರಿಕೆ
ಬೆಂಗಳೂರು: ಈರುಳ್ಳಿ ನಂತರ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 300 ರಿಂದ 400 ರೂ.ಗೆ ತಲುಪಿದೆ. ಒಂದು ತಿಂಗಳಲ್ಲಿ ಬೆಳ್ಳುಳ್ಳಿ ಬೆಲೆ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
ಒಂದು ತಿಂಗಳ ಹಿಂದೆ ಚಿಲ್ಲರೆ ಬೆಲೆ ಕೆಜಿಗೆ 200 ರಿಂದ 250 ರೂಪಾಯಿ ಇತ್ತು. ಈ ವರ್ಷ ಬೆಳ್ಳುಳ್ಳಿ ಬೆಳೆ ಕೈಕೊಟ್ಟಿದ್ದರಿಂದ ಬೆಲೆ ಏರಿಕೆಯಾಗಿದೆ.
ಬೆಳ್ಳುಳ್ಳಿ ಬೆಲೆ ಏರಿಕೆಗೆ ಎರಡು ಕಾರಣಗಳಿವೆ. ಮೊದಲನೆಯದು- ಹವಾಮಾನ ವೈಪರೀತ್ಯದಿಂದ ಬೆಳ್ಳುಳ್ಳಿ ಬೆಳೆ ಹಾಳಾಗಿದೆ. ಎರಡನೆಯ ಕಾರಣ ಕಡಿಮೆ ಉತ್ಪಾದನೆಯಿಂದಾಗಿ, ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿಯ ಪೂರೈಕೆಯಲ್ಲಿ ಭಾರಿ ಕಡಿತ ಕಂಡುಬಂದಿದೆ.
ಇದರಿಂದಾಗಿ ಅದರ ಬೆಲೆ ಹೆಚ್ಚಾಗಿದೆ. ನಾಸಿಕ್ ಮತ್ತು ಪುಣೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಉತ್ಪಾದಿಸಲಾಗುತ್ತದೆ. ಹೊಸ ಬೆಳೆ ಮಾರುಕಟ್ಟೆಗೆ ಬರಲು ಸಮಯ ಹಿಡಿಯಲಿದ್ದು ಅಲ್ಲಿಯವರೆಗೆ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ.
ಬೆಳ್ಳುಳ್ಳಿಯ ಕೊರತೆಯಿಂದಾಗಿ, ಕಳೆದ ಕೆಲವು ವಾರಗಳಲ್ಲಿ ಅದರ ಬೆಲೆ ಹೆಚ್ಚಾಗಿದೆ. ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುವ ಸಾಧ್ಯತೆಯಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಬೆಳ್ಳುಳ್ಳಿ ಬೆಲೆ ಏರಿಕೆ ಗ್ರಾಹಕರ ಕೈ ಸುಡಲಿದೆ.
ಬೀದರ್ ನಲ್ಲಿ ಬೆಳ್ಳುಳ್ಳಿ ಬೆಲೆ 400 ರುಪಾಯಿ ಇದ್ದು ಬೆಂಗಳೂರಿನಲ್ಲಿ 300 ರಿಂದ 350 ರೂಪಾಯಿ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ