ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಗುರಿ: ಐಐಎಸ್ಸಿ ಜೊತೆ ಟ್ರಾಫಿಕ್ ಪೊಲೀಸರ ಒಪ್ಪಂದ

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ (ಬಿಟಿಪಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ನಡುವೆ ಮಾಡಿಕೊಂಡಿರುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ (ಬಿಟಿಪಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ನಡುವೆ ಮಾಡಿಕೊಂಡಿರುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಒಪ್ಪಂದದ ಪ್ರಕಾರ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಸಂಚಾರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ ಜೊತೆಗೆ ಹಂಚಿಕೊಳ್ಳಲಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಗತ್ಯ ಕೃತಕ ಬುದ್ಧಿಮತ್ತೆ ಮತ್ತು ಸಂಚಾರ ಪೊಲೀಸ್ ವಿಭಾಗವು ನೀಡುವ ದತ್ತಾಂಶಗಳನ್ನು ಬಳಸಿಕೊಂಡು ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ. ಅಂತೆಯೇ ರಸ್ತೆ ಸುರಕ್ಷತಾ ಆಡಿಟ್ ತರಬೇತಿ ಮತ್ತು ಇಲಾಖೆಯ ಬಲವರ್ಧನೆಗೆ ಸಹಕಾರ ನೀಡಲಿದ್ದಾರೆ.

ಎಂ.ಎನ್. ಅನುಚೇತ್ ಮಾತನಾಡಿ, ಬೆಂಗಳೂರು ನಗರವು ಪ್ರತಿ ತಿಂಗಳು 30 ಪೆಟಾ ಬೈಟ್‌ಗಳಿಗಿಂತ ಹೆಚ್ಚು ಡೇಟಾವನ್ನು ಉತ್ಪಾದಿಸುತ್ತಿದೆ. ಹೆಚ್ಚಾಗಿ ಬಳಕೆಯಾಗದ ಈ ಪೊಲೀಸ್ ಡೇಟಾದಿಂದ ನಗರದಲ್ಲಿನ ಸಂಚಾರ ಸುರಕ್ಷತೆ ಮತ್ತು ಸವಾಲುಗಳನ್ನು ನಿವಾರಿಸಲು ಅನುಕೂಲಕರವಾಗುವಂತಹ ಒಳನೋಟಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ ಎಂದು ಹೇಳಿದರು.

ಅಲ್ಲದೆ, ಸಂಚಾರ ಸುರಕ್ಷತೆಯನ್ನು ಸುಧಾರಿಸಲು ನಮ್ಮ ಸಿಬ್ಬಂದಿಗೆ ಸರಿಯಾದ ಜ್ಞಾನದ ಮೂಲವನ್ನು ಒದಗಿಸಲು ಅನುಕೂಲಕರವಾಗುವಂತಹ ತರಬೇತಿಯನ್ನ ನಾವು ಐಐಎಸ್‌ಸಿಯಿಂದ ಎದುರು ನೋಡುತ್ತಿದ್ದೇವೆಂದು ತಿಳಿಸಿದರು.

ಐಐಎಸ್‌ಸಿಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ (ಸಿಐಎಸ್‌ಟಿಯುಪಿ) ಕೇಂದ್ರದ ಅಧ್ಯಕ್ಷ ಪ್ರೊ.ಅಬ್ದುಲ್ ರವೂಫ್ ಪಿಂಜಾರಿ "ಬೆಂಗಳೂರು ಸಂಚಾರಿ ಪೊಲೀಸರು ನಗರದಲ್ಲಿನ ಚಲನಶೀಲತೆ ಮತ್ತು ಸಂಚಾರ ಸುರಕ್ಷತೆಯ ಮಾಪನ ಮತ್ತು ಮೇಲ್ವಿಚಾರಣೆಯಲ್ಲಿ ಗಣನೀಯ ಪ್ರಯತ್ನಗಳನ್ನ ಮಾಡುತ್ತಿರುವುದು ಹರ್ಷದಾಯಕವಾಗಿದೆ. ಈ ಡೇಟಾವು ನಗರದ ಸಂಚಾರ ಸುರಕ್ಷತೆಯನ್ನು ಸುಧಾರಿಸಲು ಅನುಕೂಲವಾಗುವ ಸಂಶೋಧನಾ ಯೋಜನೆಗಳು ಮತ್ತು ಸೂಕ್ತವಾದ ತರಬೇತಿ ಕಾರ್ಯಕ್ರಮಗಳ ನೀಡುವ ನಿಟ್ಟಿನಲ್ಲಿ ನಮಗೆ ಮುಖ್ಯವಾಗಲಿದೆ'' ಎಂದರು.

ಐಐಎಸ್ಸಿಯ ಪ್ರೊ. ಅಬ್ದುಲ್ ರವೂಪ್ ಪಿಂಜಾರಿ, ಸಂಚಾರ ಪೊಲೀಸರೊಂದಿಗೆ ಮಾಡಿಕೊಳ್ಳುತ್ತಿರುವ ಈ ಒಪ್ಪಂದದ ಬಗ್ಗೆ ಬಹಳ ಉತ್ಸುಕರಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಂಚಾರ ಪೊಲೀಸರು ನೀಡುವ ದತ್ತಾಂಶಗಳನ್ನು ಸೂಕ್ತವಾಗಿ ವಿಶ್ಲೇಷಿಸಿ ಬೆಂಗಳೂರು ನಗರದ ಸುಗಮ ಸಂಚಾರಕ್ಕೆ ಅಗತ್ಯವಿರುವ ಯೋಜನೆಗಳನ್ನು ಸಂಚಾರಕ್ಕೆ ಅಗತ್ಯವಿರುವ ಯೋಜನೆಗಳನ್ನು ನೀಡಲು ಸಹಕರಿಸಲಿದ್ದೇವೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com