ಬೆಂಗಳೂರು: ಇಂದಿನಿಂದ ಗುರುವಾರದವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ; ಹೆಚ್ಚಿನ ವಿವರ ತಿಳಿಯಿರಿ

ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಂಡಿರುವುದರಿಂದ ಇಂದಿನಿಂದ ಗುರುವಾರದವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತವನ್ನು ಎದುರಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಂಡಿರುವುದರಿಂದ ಇಂದಿನಿಂದ ಗುರುವಾರದವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತವನ್ನು ಎದುರಿಸುವ ಸಾಧ್ಯತೆಯಿದೆ.

ನಗರದಲ್ಲಿ ಜಂಗಲ್ ಕ್ಲಿಯರೆನ್ಸ್, ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಗತಕ್ಕೆ ಕೇಬಲ್‌ಗಳನ್ನು ಬದಲಾಯಿಸುವುದು, ರಿಂಗ್ ಮುಖ್ಯ ಘಟಕ (ಆರ್‌ಎಂಯು) ನಿರ್ವಹಣೆ, ಟ್ರೀ ಟ್ರಿಮ್ಮಿಂಗ್, ಜಲಸಿರಿ 24x7 ನೀರು ಸರಬರಾಜು ಕೆಲಸ ಮತ್ತು ಭೂಗತ ಕೇಬಲ್ ಹಾನಿ ಸರಿಪಡಿಸುವಿಕೆ ಸೇರಿದಂತೆ ಹಲವು ಕೆಲಸಗಳನ್ನು ವಿದ್ಯುತ್ ಸರಬರಾಜು ಕಂಪನಿಗಳು ಕೈಗೊಂಡಿವೆ.

ಹೆಚ್ಚಿನ ಕಡೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ವಿದ್ಯುತ್ ಕಡಿತವಾಗುವ ನಿರೀಕ್ಷೆಯಿದೆ. ಆದಾಗ್ಯೂ, ಕೆಲವು ದುರಸ್ತಿ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುವ ಸಾಧ್ಯತೆಯಿದೆ. ವಿದ್ಯುತ್ ಕಡಿತದಿಂದ ತೊಂದರೆಗೊಳಗಾಗಬಹುದಾದ ಪ್ರದೇಶಗಳ ಪಟ್ಟಿ ಇಲ್ಲಿದೆ.

ಇಂದು ಎಲ್ಲೆಲ್ಲಿ ವಿದ್ಯುತ್ ಕಡಿತ

ವಿಧಾನಸೌಧ, ಗಣೇಶ ದೇವಸ್ಥಾನ ಆರ್‌ಎಂಯು, ಮಿಲ್ಲರ್ ರಸ್ತೆ, ಜಯಮಹಲ್, ಎಂಕೆ ಸ್ಟ್ರೀಟ್, ಕನ್ನಿಂಗ್‌ಹ್ಯಾಮ್ ರಸ್ತೆ, ಕೆಂಪ್ ರಸ್ತೆ, ಬೆನ್ಸನ್ ಟೌನ್, ಸ್ಪೆನ್ಸರ್ ರಸ್ತೆ, ಎಸ್‌ಜಿ ರಸ್ತೆ, ಆರ್‌ಎಂಜೆಡ್ ಮಿಲೇನಿಯಾ, ಬಿ ಅಂಡ್ ಎಲ್‌ಸಿ ಆಸ್ಪತ್ರೆ, ಚಿಕ್ಕಬಜಾರ್ ರಸ್ತೆ, ಜಿನೀವಾ ಹೌಸ್, ತಿಮ್ಮಯ್ಯ ರಸ್ತೆ, ಟಾಸ್ಕರ್ ಟೌನ್, ಪಿಜಿ ಹಳ್ಳಿ, ಹೈನ್ಸ್ ರಸ್ತೆ, ಚಂದ್ರಯ್ಯ, ಮುನೇಶ್ವರ ನಗರ, ಶಿವಾಜಿ ನಗರ, ಹಿರೇಕೋಗಲೂರು, ಸೋಮನಹಳ್ಳಿ, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಭೀಮನಾರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಸಂತೆಬೆನ್ನೂರು, ಅರಳಿಕಟ್ಟೆ, ದೊಡ್ಡೇರಿಕಟ್ಟೆ, ಕುಳೇನೂರು, ಶಿವಕುಳೇನೂರು, ಕೊಂಡದಹಳ್ಳಿ, ಚಿಕ್ಕೋಡ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಹಿರೇಹಳ್ಳಿ, ಬಿಎಂ ಪಾಳ್ಯ, ಕರೆಕಲ್ಲು ಪಾಳ್ಯ, ಬಸವಪಟ್ಟಣ, ಬಸವೇಶ್ವರ ಬಡಾವಣೆ, ಎಸ್.ಎಸ್. ಮಟ್ಟು, ಚಿಕ್ಕಹಳ್ಳಿ, ಸಣ್ಣಪ್ಪನ ಪಾಳ್ಯ, ಸಂಗಾಪುರ, ಕೋಳಿಹಳ್ಳಿ, ನಂದಿಹಳ್ಳಿ, ಪೆಮ್ಮನಹಳ್ಳಿ ಮತ್ತು ಬಂಡಿಹಳ್ಳಿಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಬುಧವಾರ ಈ ಪ್ರದೇಶಗಳಳ್ಳಿ ವಿದ್ಯುತ್ ಕಡಿತ

ಅಂಗವಿಕಲಾ ಆಶಾಕಿರಣ ಟ್ರಸ್ಟ್, ಎಸ್‌ಎಸ್ ಲೇಔಟ್ ಎ ಬ್ಲಾಕ್, ಬಸವನಗುಡಿ, ಎಸ್‌ಎಸ್ ಮಾಲ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡಾವಣೆ, ಕುವೆಂಪು ನಗರ, ಮಾವಿನ ತೋಪು, ಜಿಎಚ್- ಪಾರ್ಕ್, ಗ್ಲೋಬಲ್ ಮಾಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಓಕಳಿಪುರಂ, ಬೇವಿನಹಳ್ಳಿ, ನಂದಿಹಳ್ಳಿ, ಬಹದ್ದೂರಘಟ್ಟ ಮತ್ತು ಕೋಗುಂಡೆಗಳಲ್ಲಿ ಬುಧವಾರ ವಿದ್ಯುತ್ ಕಡಿತವಾಗುವ ನಿರೀಕ್ಷೆಯಿದೆ.

ಗುರುವಾರ ಎಲ್ಲೆಲ್ಲಿ ವಿದ್ಯುತ್ ಕಡಿತ

ಮೌನೇಶ್ವರ ಬಡಾವಣೆ, ಜಯನಗರ, ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂಬಿ ಕೇರಿ, ಚಲುವಾದಿ ಕೇರಿ, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ನಗರ, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್, ಟೊಯೊಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಲುಮೋಸ್ ಅಪಾರ್ಟ್‌ಮೆಂಟ್, ಐಗೂರು, ಲಿಂಗದಹಳ್ಳಿ ಮತ್ತು ಒಡ್ಡನಹಳ್ಳಿಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com