ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದ ಮಹಿಳೆ ಬಂಧನ
ರಾಮನಗರ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಭಾವಿಸಿದ ತಾಯಿಯೊಬ್ಬರು ತನ್ನ ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದ ಸಂಬಂಧ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಚನ್ನಪಟ್ಟಣ ಸಮೀಪದ ಬನಗಳ್ಳಿ ಗ್ರಾಮದ ನಿವಾಸಿ 21 ವರ್ಷದ ಭಾಗ್ಯಮ್ಮ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಭಾಗ್ಯಮ್ಮ ತನ್ನ ಪತಿಯನ್ನು ತೊರೆದು ತನ್ನ ಮಗ ದೇವರಾಜ್ (1.3 ವರ್ಷ) ನೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದಳು.
ಪೊಲೀಸರ ಪ್ರಕಾರ, ಆಕೆ ವ್ಯಕ್ತಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಆಕೆಯ ತಾಯಿ ಕೂಡ ವಿರೋಧಿಸಿದ್ದರು.
ಭಾಗ್ಯಮ್ಮ ತನ್ನ ಮಗುವನ್ನು ಮನೆಯಲ್ಲಿ ಬಿಟ್ಟು, ತನ್ನ ಸಂಗಾತಿಯೊಂದಿಗೆ ಹೊರಗೆ ಹೋಗುತ್ತಿದ್ದದ್ದರ ಬಗ್ಗೆ ಟೀಕಿಸಿದ್ದಾರೆ. ಆಕೆಯ ಸಂಗಾತಿಯೂ ಮಗನನ್ನು ಇಷ್ಟಪಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಮಂಗಳವಾರ ರಾತ್ರಿ ಬಟ್ಟೆ ಒಗೆಯುವ ನೆಪದಲ್ಲಿ ಕಣ್ವ ನದಿಯ ಬಳಿ ತನ್ನ ಮಗುವನ್ನು ಕರೆದೊಯ್ದು ನೀರಿಗೆ ಎಸೆದಿದ್ದಾರೆ. ತನ್ನ ಮಗ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾನೆ ಎಂದು ಬಿಂಬಿಸಲು ಸಹಾಯಕ್ಕಾಗಿ ಕಿರುಚಿದ್ದಾರೆ.
ಬುಧವಾರ ಬೆಳಗ್ಗೆ ಶವವನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ.
ಆರೋಪಿ ಮಹಿಳೆಯ ಅನೈತಿಕ ಸಂಬಂಧ ಹಾಗೂ ಇದರ ಸಲುವಾಗಿ ಆಕೆಯ ತಾಯಿಯೊಂದಿಗೆ ನಡೆದ ಜಗಳದ ಬಗ್ಗೆ ಪೊಲೀಸರಿಗೆ ತನಿಖೆಯ ವೇಳೆ ತಿಳಿದುಬಂದಿದೆ.
ವಿಚಾರಣೆ ಬಳಿಕ ಭಾಗ್ಯಮ್ಮ ತನ್ನ ಸಂಬಂಧದ ಹಿನ್ನಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ