ಬಳ್ಳಾರಿ: ಸ್ಫೋಟಕ ತಯಾರಿಸಲು ಅಮೋನಿಯಂ ನೈಟ್ರೇಟ್ ಖರೀದಿಸಿದ ಇಬ್ಬರು ಶಂಕಿತ ಉಗ್ರರ ಬಂಧನ

ಎನ್‌ಐಎ ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ನಗರದ ರಸಗೊಬ್ಬರ ಅಂಗಡಿಯಿಂದ ಅಮೋನಿಯಂ ನೈಟ್ರೇಟ್ ಖರೀದಿಸಿದ್ದರು ಎಂದು ವರದಿಯಾಗಿದೆ. ಆರೋಪಿಗಳಾದ ಮೊಹಮ್ಮದ್ ಸುಲೇಮಾನ್ ಮತ್ತು ಸೈಯದ್ ಸಮೀರ್ ಅವರು ಅ. 22ರಂದು ಒಂದು ಕೆಜಿ ಅಮೋನಿಯಂ ನೈಟ್ರೇಟ್ ಖರೀದಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಎನ್‌ಐಎ ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ನಗರದ ರಸಗೊಬ್ಬರ ಅಂಗಡಿಯಿಂದ ಅಮೋನಿಯಂ ನೈಟ್ರೇಟ್ ಖರೀದಿಸಿದ್ದರು ಎಂದು ವರದಿಯಾಗಿದೆ.

ಆರೋಪಿಗಳಾದ ಮೊಹಮ್ಮದ್ ಸುಲೇಮಾನ್ ಮತ್ತು ಸೈಯದ್ ಸಮೀರ್ ಅವರು ಅಕ್ಟೋಬರ್ 22 ರಂದು ಒಂದು ಕೆಜಿ ಅಮೋನಿಯಂ ನೈಟ್ರೇಟ್ ಖರೀದಿಸಿರುವುದಾಗಿ ಎನ್‌ಐಎ ಅಧಿಕಾರಿಗಳ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೊಬ್ಬರ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಅಮೋನಿಯಂ ನೈಟ್ರೇಟ್ ಅನ್ನು ಸ್ಫೋಟಕ ಏಜೆಂಟ್ ಆಗಿಯೂ ಬಳಸಬಹುದು.

ಪ್ರಯೋಗಾತ್ಮಕ ಸ್ಫೋಟಕವನ್ನು ತಯಾರಿಸಲು ಈ ವಸ್ತುವನ್ನು ಬಳಸುವ ಯೋಜನೆ ಇತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆದಾಗ್ಯೂ, ಆ ದಿನಾಂಕದಂದು ಯಾವುದೇ ಬಿಲ್ ಅಂಗಡಿಯಲ್ಲಿ ಕಂಡುಬಂದಿಲ್ಲ ಮತ್ತು ಅವರ ಭೇಟಿಯ ಯಾವುದೇ ದಾಖಲೆಗಳಿಲ್ಲ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 18 ರಂದು, ಎನ್ಐಎ ಅಧಿಕಾರಿಗಳು ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ನಿಷೇಧಿತ ಪಿಎಫ್ಐ ಮತ್ತು ಐಎಸ್ಐಎಸ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತರ ಮೇಲೆ ದಾಳಿ ನಡೆಸಿದರು. ಈ ವೇಳೆ ಸುಲೇಮಾನ್ ಮತ್ತು ಸಮೀರ್ ಸೇರಿದಂತೆ ಬಳ್ಳಾರಿ ಮೂಲದ ನಾಲ್ವರನ್ನು ಬಂಧಿಸಿದ್ದರು. ಮೊಹಮ್ಮದ್ ಸುಲೇಮಾನ್ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಸೈಯದ್ ಸಮೀರ್ ಬಳ್ಳಾರಿಯಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ.

ಸಮೀರ್ ಕಾಲೇಜು ಯುವಕರನ್ನು ಭಯೋತ್ಪಾದಕ ಸಂಘಟನೆಯತ್ತ ಸೆಳೆಯುವ ಗುರಿ ಹೊಂದಿದ್ದ ಎಂದು ಆರೋಪಿಸಲಾಗಿದೆ. ಅವರು ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರುವಂತೆ ಯುವಕರನ್ನು ಪ್ರೇರೇಪಿಸಲು ಪ್ರಯತ್ನಿಸಿದರು ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com