ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಆಗ್ರಹ: 'ಕರವೇ' ಪ್ರತಿಭಟನೆ, ಇಂಗ್ಲೀಷ್​ ಜಾಹೀರಾತುಗಳ ಹರಿದು ಆಕ್ರೋಶ!

ಕನ್ನಡ ನಾಮಫಲಕಗಳ ಕಡ್ಡಾಯಗೊಳಿಸಿ, ಕನ್ನಡ ನೆಲ, ಜಲ, ಅನ್ನ ತಿಂದುಂಡು ಕನ್ನಡಕ್ಕೆ ಅಗೌರವ ತೋರುವ ವ್ಯಾಪಾರಿಗಳ ಮೇಲೆ ಕೂಡಲೇ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ದೇವಹಳ್ಳಿಯಲ್ಲಿ ರ್ಯಾಲಿ ನಡೆಸಿದ್ದಾರೆ.
ಪ್ರತಿಭಟನೆ ನಡೆಸುತ್ತಿರವ ಕರವೇ ಕಾರ್ಯಕರ್ತರು.
ಪ್ರತಿಭಟನೆ ನಡೆಸುತ್ತಿರವ ಕರವೇ ಕಾರ್ಯಕರ್ತರು.

ಬೆಂಗಳೂರು: ಕನ್ನಡ ನಾಮಫಲಕಗಳ ಕಡ್ಡಾಯಗೊಳಿಸಿ, ಕನ್ನಡ ನೆಲ, ಜಲ, ಅನ್ನ ತಿಂದುಂಡು ಕನ್ನಡಕ್ಕೆ ಅಗೌರವ ತೋರುವ ವ್ಯಾಪಾರಿಗಳ ಮೇಲೆ ಕೂಡಲೇ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ದೇವಹಳ್ಳಿಯಲ್ಲಿ ರ್ಯಾಲಿ ನಡೆಸುತ್ತಿದ್ದು. ಈ ವೇಳೆ ಇಂಗ್ಲೀಷ್​ ಭಾಷೆಯಲ್ಲಿದ್ದ ಜಾಹೀರಾತುಗಳ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿಯ ಸಾದಹಳ್ಳಿ ಟೋಲ್​ನಿಂದ ಬೆಂಗಳೂರು ಕಬ್ಬನ್ ಪಾರ್ಕ್​ವರೆಗೆ ರ‍್ಯಾಲಿ ನಡೆಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ರ‍್ಯಾಲಿ ಆರಂಭವಾಗಿದ್ದು, ಸಾದಹಳ್ಳಿ ಟೋಲ್ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದೆ.

ರ್ಯಾಲಿ ವೇಳೆ ಕೆಲ ಕಾರ್ಯಕರ್ತರು ಬೇರೆ ಭಾಷೆಗಳಲ್ಲಿದ್ದ ನಾಮಫಲಕ, ಜಾಹೀರಾತುಗಳನ್ನು ಹರಿದು ಹಾಕಿದ್ದಾರೆ. ಸಾದಹಳ್ಳಿಯ ಬ್ಲೂಮ್ ಹೋಟೆಲ್ ಬಳಿ ದ್ವಂಸ ‌ಲೈಟಿಂಗ್ ಬೋರ್ಡ್ ಒಡೆದು ಹಾಕಿದ್ದಾರೆ.

ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಒಬ್ಬರು ಎಸಿಪಿ, 6 ಮಂದಿ ಇನ್ಸ್​ಪೆಕ್ಟರ್, 12 ಸಬ್ ಇನ್ಸ್​ಪೆಕ್ಟರ ಸೇರಿದಂತೆ 500 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಟೋಲ್ ಗೇಟ್ ಸಮೀಪ ಅಡಿಷನಲ್ ಕಮಿಷನರ್ ರಮಣ್ ಗುಪ್ತಾ ಅವರು ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ನಡುವೆ ಕರವೇ ಪ್ರತಿಭಟನಾ ರ‍್ಯಾಲಿ ತಡೆಯಲು ಪೊಲೀಸ್ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಈಗಾಗಲೇ ಬೆಂಗಳೂರು ಏರ್​ಪೋರ್ಟ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ, ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ನಾಲ್ಕು ಬಸ್​ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಪೊಲೀಸ್ ಆಯುಕ್ತ ದಯಾನಂದ್

ಈ ನಡುವೆ ಏರ್ಪೋಟ್ ಟೋಲ್ ಬಳಿಗೆ ಕಮಿಷನರ್ ದಯಾನಂದ್ ಭೇಟಿ ನೀಡಿದ್ದು, ಪೊಲೀಸರ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮ ಪರಿಶೀಲಿಸಿದರು. ಇನ್ನು ಇದೇ ವೇಳೆ ಭದ್ರತೆ ಬಗ್ಗೆ ಡಿಸಿಪಿ ಲಕ್ಷ್ನೀ ಪ್ರಸಾದ್ ಅವರಿಂದ ಮಾಹಿತಿ ಪಡೆದುಕೊಂಡರು. ಇದಕ್ಕೂ ಮೊದಲು ಮಾಲ್ ಆಫ್ ಏಷಿಯಾ ಬಳಿ ತೆರಳಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com