KSRTC ಅಪಘಾತ ಪರಿಹಾರ 3 ಲಕ್ಷ ದಿಂದ 10 ಲಕ್ಷ ರೂ. ಗೆ ಹೆಚ್ಚಳ; ಹೊಸ ವರ್ಷದಿಂದ ಜಾರಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಪಘಾತ ಪರಿಹಾರ ನಿಧಿ ಟ್ರಸ್ಟ್ ನೀಡುವ ಪರಿಹಾರವನ್ನು ಜನವರಿ 1, 2024 ರಿಂದ ಜಾರಿಗೆ ಬರುವಂತೆ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಿದೆ.
ಕೆಎಸ್ ಆರ್ ಟಿಸಿ (ಸಾಂದರ್ಭಿಕ ಚಿತ್ರ)
ಕೆಎಸ್ ಆರ್ ಟಿಸಿ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಪಘಾತ ಪರಿಹಾರ ನಿಧಿ ಟ್ರಸ್ಟ್ ನೀಡುವ ಪರಿಹಾರವನ್ನು ಜನವರಿ 1, 2024 ರಿಂದ ಜಾರಿಗೆ ಬರುವಂತೆ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಿದೆ.

ಅಪಘಾತಕ್ಕೀಡಾದವರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ನೀಡಲು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ 50 ರಿಂದ 99 ರೂ ಮತ್ತು 100 ರೂ ಟಿಕೆಟ್ ಮೌಲ್ಯದ ಪ್ರಯಾಣಿಕರಿಂದ ತಲಾ 1 ರೂ ಮತ್ತು ಅದಕ್ಕಿಂತ ಮೇಲ್ಟಟ್ಟ ಟಿಕೆಟ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ತಲಾ 2 ರೂ  ಸಂಗ್ರಹಿಸಲಾಗುತ್ತದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 1, 2024 ರಿಂದ ಅಪಘಾತ ಪರಿಹಾರ ನಿಧಿ ಟ್ರಸ್ಟ್‌ಗೆ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. ಈ ಹಿಂದೆ, 100 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಟಿಕೆಟ್ ಮೌಲ್ಯದೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಂದ 1 ರೂಪಾಯಿ ಮೊತ್ತವನ್ನು ಪರಿಹಾರ ನಿಧಿಗೆ ಸಂಗ್ರಹಿಸಲಾಗುತ್ತಿತ್ತು. ಅಂತೆಯೇ ರೂ 1 ರಿಂದ ರೂ 49 ರ ಟಿಕೆಟ್ ಮೌಲ್ಯದೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಯಾವುದೇ ಅಪಘಾತ ಪರಿಹಾರ ನಿಧಿಯ ಕೊಡುಗೆಯನ್ನು ಸಂಗ್ರಹಿಸಲಾಗುವುದಿಲ್ಲ ಎಂದು ನಿಗಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com