ಕೋವಿಡ್ -19: ರಾಜ್ಯದಲ್ಲಿ ಇಂದು 173 ಹೊಸ ಸೋಂಕು ಪ್ರಕರಣ ಪತ್ತೆ, 2 ಸಾವು

ಕರ್ನಾಟಕದಲ್ಲಿ ಶುಕ್ರವಾರ 173 ಹೊಸ ಕೋವಿಡ್ -19 ಸೋಂಕು ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಎರಡು ಕೊರೋನವೈರಸ್ ಸಂಬಂಧಿತ ಸಾವುಗಳು ವರದಿಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ 173 ಹೊಸ ಕೋವಿಡ್ -19 ಸೋಂಕು ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಎರಡು ಕೊರೋನವೈರಸ್ ಸಂಬಂಧಿತ ಸಾವುಗಳು ವರದಿಯಾಗಿವೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಶುಕ್ರವಾರ 173 ಹೊಸ ಕೋವಿಡ್ -19 ಸೋಂಕು ಪ್ರಕರಣಗಳ ದಾಖಲಾತಿಯೊಂದಿಗೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 702ಕ್ಕೆ ಏರಿದೆ. ಈ ಪೈಕಿ 649 ಜನರು ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ ಮತ್ತು ಉಳಿದ 53 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂತೆಯೇ ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೇರಿದೆ. ಮೃತರು ಕ್ರಮವಾಗಿ 59 ಮತ್ತು 69 ವರ್ಷ ವಯಸ್ಸಿನವರಾಗಿದ್ದಾರೆ, ಇಬ್ಬರೂ ಬೆಂಗಳೂರು ನಗರ ಜಿಲ್ಲೆಯಲ್ಲಿ ದಾಖಲಾಗಿದ್ದಾರೆ. ಇಬ್ಬರಿಗೂ ಜ್ವರ ಮತ್ತು ಕೆಮ್ಮಿನ ಲಕ್ಷಣಗಳಿತ್ತು ಎಂದು ಹೇಳಲಾಗಿದೆ.

ಕಳೆದ 24 ಗಂಟೆಗಳಲ್ಲಿ 37 ಸೋಂಕಿತರು ಚೇತರಿಸಿಕೊಂಡಿದ್ದು, ಒಟ್ಟು 8,349 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 6,400 RTPCR ಮತ್ತು 1,949 ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಸಂಖ್ಯೆಯ ಪರೀಕ್ಷೆಗಳನ್ನು ನಡೆಸಲಾಗಿದೆ. ನಡೆಸಿದ 2,616 ಪರೀಕ್ಷೆಗಳಲ್ಲಿ, 82 ಪಾಸಿಟಿವ್ ಬಂದಿದ್ದು, ಇದು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚಿನದ್ದಾಗಿದೆ. ರಾಜ್ಯದಲ್ಲಿ ಸೋಂಕು ಸಕಾರಾತ್ಮಕತೆಯ ಪ್ರಮಾಣವು 2.07 ಪ್ರತಿಶತದಷ್ಟಿದ್ದರೆ, ಪ್ರಕರಣದ ಸಾವಿನ ಪ್ರಮಾಣವು 1.15 ಪ್ರತಿಶತದಷ್ಟಿದೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳು ಮಾಹಿತಿ ನೀಡಿವೆ.

ರಾಜ್ಯದಲ್ಲಿ ಪ್ರಕರಣಗಳ ಹೆಚ್ಚಳ ಮತ್ತು JN.1 ಸೋಂಕುಗಳ ಪತ್ತೆಯ ನಡುವೆ, ಕರೋನವೈರಸ್ ಕುರಿತು ಕರ್ನಾಟಕ ಸರ್ಕಾರದ ಸಂಪುಟ ಉಪಸಮಿತಿ ಕೋವಿಡ್ ಮಾರ್ಗಸೂಟಿ ಬಿಡುಗಡೆ ಮಾಡಿದ್ದು, ಜನರಿಗೆ ಮಾಸ್ಕ್ ಧರಿಸಲು ಸಲಹೆ ನೀಡಿದೆ. ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ, ಸಾಮಾಜಿಕ ಅಂತರದಂತಹ COVID ಸೂಕ್ತ ನಡವಳಿಕೆಯನ್ನು ಅನುಸರಿಸಲು ಸೂಚಿಸಿದೆ.

ಅಂತೆಯೇ ಸೋಂಕಿತ ರೋಗಿಗಳಿಗೆ ಮನೆಯ ಪ್ರತ್ಯೇಕತೆ ಅನುಸರಿಸಲು ಸೂಚಿಸಿದ್ದು, ಏಳು ದಿನಗಳ ರಜೆ ಘೋಷಿಸಿದೆ. ಅಂತೆಯೇ ವಯಸ್ಸಾದವರಿಗೆ ಮತ್ತು ಕೊಮೊರ್ಬಿಡಿಟಿ (ಇತರೆ ಅನಾರೋಗ್ಯ ಸಮಸ್ಯೆ ಇರುವವರು) ಇರುವವರಿಗೆ "ಮುನ್ನೆಚ್ಚರಿಕೆ ಲಸಿಕೆ" ನೀಡಲು ಮತ್ತು ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ 30,000 ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ಪಡೆಯಲು ಇಲಾಖೆ ನಿರ್ಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com