ಹಿನ್ನೋಟ 2023: ನಮ್ಮನ್ನಗಲಿದ ಗಣ್ಯರು, ಪ್ರಮುಖರು

ಸಾವು ಎಂತಹ ವ್ಯಕ್ತಿ, ಸಮಾಜವನ್ನೇ ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ದೇಶದಲ್ಲಿ ಹಲವು ಗಣ್ಯರು, ಸಾಧಕರು ನಮ್ಮನಗಲಿದ್ದಾರೆ.
ನಮ್ಮನಗಲಿದ ಗಣ್ಯರು, ಸಾಧಕರು
ನಮ್ಮನಗಲಿದ ಗಣ್ಯರು, ಸಾಧಕರು

ಸಾವು ಎಂತಹ ವ್ಯಕ್ತಿ, ಸಮಾಜವನ್ನೇ ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ದೇಶದಲ್ಲಿ ಹಲವು ಗಣ್ಯರು, ಸಾಧಕರು ನಮ್ಮನಗಲಿದ್ದಾರೆ. ರಾಷ್ಟ್ರ ರಾಜಕಾರಣ, ಸಿನಿಮಾ ಹಾಗೂ ಇತರೆ ವಲಯಗಳಲ್ಲಿ ಮೇರು ವ್ಯಕ್ತಿಗಳ ಸಾವು ಸಾಕಷ್ಟು ನೋವು ತಂದಿದೆ. ಈ ವರ್ಷ ಇಹಲೋಕ ತ್ಯಜಿಸಿದವರು ಯಾರು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿವೆ...

ಸಿದ್ಧೇಶ್ವರ ಸ್ವಾಮೀಜಿ


ಕನ್ನಡ ನಾಡು ಕಂಡ ಅಪರೂಪದ ಸಂತ, ಭಕ್ತರ ಪಾಲಿನ ‘ನಡೆದಾಡುವ ದೇವರು’ ಎಂದು ಪ್ರಸಿದ್ಧರಾಗಿದ್ದ ಪ್ರವಚನಕಾರ, ವಿಜಯನಗರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ಅವರು 2023ರ ಜನವರಿ 2ರಂದು ವಿಧಿವಶರಾಗಿದ್ದರು.

ನಟಿ ಲೀಲಾವತಿ


ಕನ್ನಡ ಚಿತ್ರರಂಗದ ಹಿರಿಯ ನಟಿ, ನಿರ್ಮಾಪಕಿ ಲೀಲಾವತಿ ಅವರು 8 ಡಿಸೆಂಬರ್ ರಂದು ಕೊನೆ ಉಸಿರೆಳೆದರು.

ಸ್ಪಂದನಾ ವಿಜಯ್


ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು  ಥಾಯ್ಲೆಂಡ್ ಪ್ರವಾಸದಲ್ಲಿದ್ದಾಗ ಹೃದಯಘಾತವಾಗಿ, ಆಗಸ್ಟ್ 7 ರಂದು ನಿಧನ ಹೊಂದಿದ್ದರು.

ಶರದ್‌ ಯಾದವ್


ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕಾರಣಿ, ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಶರದ್ ಯಾದವ್‌ (75) ಅವರು ಜನವರಿ 12ರಂದು ನವದೆಹಲಿಯಲ್ಲಿ ನಿಧನರಾದರು.

ಜಾಲಿ ಬಾಸ್ಟಿನ್


ಕರ್ನಾಟಕ ಮೂಲದವರಲ್ಲವಾದರೂ ಕನ್ನಡದ ನೂರಾರು ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ದಶಕಗಳಿಂದಲೂ ಕೆಲಸ ಮಾಡಿದ್ದ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಡಿಸೆಂಬರ್ 26ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಸಿವಿ ಶಿವಶಂಕರ್


ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಲ್ಲಿ ಒಬ್ಬರಾಗಿದ್ದ ಸಿವಿ ಶಿವಶಂಕರ್ ಅವರು ಜೂನ್ 27ರಂದು ನಿಧನರಾದರು.

ಕೆಸಿಎನ್ ಮೋಹನ್


ಬೆಂಗಳೂರಿನ ಶ್ರೀಮಂತ ಚಿತ್ರಮಂದಿರ ಮಾಲೀಕರಲ್ಲಿ ಒಬ್ಬರಾಗಿದ್ದ ಕೆಸಿಎನ್ ಮೋಹನ್ ಅವರು, ಜುಲೈ 2 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು.

ಕೆ.ವಿ. ತಿರುಮಲೇಶ್


ಕನ್ನಡ ಪ್ರಸಿದ್ಧ ಕವಿ, ವಿಮರ್ಶಕ, ಭಾಷಾ ಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ (82) ಅವರು ಜನವರಿ 30ರಂದು ಹೈದರಾಬಾದ್‌ನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ನಿಧನರಾದರು.

ಶಾಂತಿಭೂಷಣ್‌


ಕೇಂದ್ರದ ಮಾಜಿ ಕಾನೂನು ಸಚಿವ, ಕಾನೂನು ತಜ್ಞ ಶಾಂತಿಭೂಷಣ್‌ (97) ಜನವರಿ 31ರಂದು ನಿಧನರಾದರು.

ನಿರ್ದೇಶಕ ಭಗವಾನ್


ನಿರ್ದೇಶಕ ಭಗವಾನ್ ಅವರು ವಯೋಸಹಜ ಕಾಯಿಲೆಯಿಂದ ಫೆಬ್ರವರಿ 20ರಂದು ನಿಧನ ಹೊಂದಿದ್ದರು.

ಪ್ರಕಾಶ್‌ ಸಿಂಗ್ ಬಾದಲ್‌


ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್‌ ಸಿಂಗ್ ಬಾದಲ್‌ (95) ಅವರು ಏಪ್ರಿಲ್ 25ರಂದು ನಿಧನರಾದರು.

ಶ್ರೀಚಂದ್ ಹಿಂದುಜಾ


ಭಾರತ ಮೂಲದ ಕೋಟ್ಯಧಿಪತಿ, ಬ್ರಿಟನ್‌ನ ಶ್ರೀಮಂತ ಕುಟುಂಬದ ಶ್ರೀಚಂದ್ ಪರಮಾನಂದ ಹಿಂದುಜಾ (87) ಅವರು ಮೇ 17ರಂದು ನಿಧನರಾದರು.

ಅರುಣ್‌ ಗಾಂಧಿ


ಮಹಾತ್ಮ ಗಾಂಧಿ ಅವರ ಮೊಮ್ಮಗ ಅರುಣ್‌ ಗಾಂಧಿ (89) ಅವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮೇ 23ರಂದು ನಿಧನರಾದರು.

ಉಮ್ಮನ್‌ ಚಾಂಡಿ


ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಉಮ್ಮನ್‌ ಚಾಂಡಿ (79) ಅವರು ಬೆಂಗಳೂರಿನಲ್ಲಿ ಜುಲೈ 18ರಂದು ನಿಧನರಾದರು.

ಎಂ.ಎಸ್. ಸ್ವಾಮಿನಾಥನ್


ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ (98) ಅವರು ಸೆಪ್ಟೆಂಬರ್ 28ರಂದು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾದರು.

ನಟ ಸಂಪತ್ ಜಯರಾಂ


ಕಿರುತೆರೆ ಮೂಲಕ ಜನಪ್ರಿಯವಾಗಿ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದ ಸಂಪತ್ ಜಯರಾಂ ಇದೇ ವರ್ಷದ ಆರಂಭದಲ್ಲಿ ನಿಧನ ಹೊಂದಿದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ಟಪೋರಿ ಸತ್ಯ


ಕನ್ನಡದ ಕೆಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ, ಸಿನಿಮಾ ನಿರ್ದೇಶಕನಾಗಿಯೂ ಹೆಸರು ಮಾಡಿದ್ದ ಟಪೋರಿ ಸತ್ಯ ಏಪ್ರಿಲ್​ ತಿಂಗಳಿನಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು. ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.

ನಟ ಶರತ್ ಬಾಬು


ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ನಟ ಶರತ್ ಬಾಬು ಅನಾರೋಗ್ಯದಿಂದಾಗಿ ಮೇ.22 ರಂದು ಕೊನೆಯುಸಿರೆಳೆದಿದ್ದರು.

ವಾಣಿ ಜಯರಾಂ


ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜೈರಾಮ್ ಅವರು ಫೆಬ್ರವರಿ 4 ರಂದು ಅಸ್ತಂಗತರಾಗಿದ್ದರು.

ನಟ ಲಕ್ಷ್ಮಣ್


ಕನ್ನಡದ ಖ್ಯಾತ ಖಳನಟ ಲಕ್ಷ್ಮಣ್ ಅವರು ಜನವರಿ 23 ರಂದು ಹೃದಯಾಘಾತದಿಂದ ನಿಧನರಾಗಿದ್ದು. ಲಕ್ಷ್ಮಣ್ ಅವರಿಗೆ 74 ವರ್ಷ ವಯಸ್ಸಾಗಿತ್ತು.

ನಿತಿನ್ ಗೋಪಿ


ಬಾಲ ನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಹಾಗೂ ಇತ್ತೀಚೆಗೆ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದ ನಿತಿನ್ ಗೋಪಿ ಅವರು ಜೂನ್ 2 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ವಿಜಯ್ ಕಾಂತ್


ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯ್ ಕಾಂತ್ ಡಿ.28ರಂದು ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಸುಬ್ರತಾ ರಾಯ್‌


ಸಹಾರಾ ಗ್ರೂಪ್‌ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತ ರಾಯ್‌ ಅವರು ಅನಾರೋಗ್ಯದಿಂದಾಗಿ ನವೆಂಬರ್ 14 ರಂದು ನಿಧನರಾಗಿದ್ದರು. ಸುಬ್ರತ ರಾಯ್‌ ಅವರಿಗೆ 75 ವರ್ಷ ವಯಸ್ಸಾಗಿತ್ತು.

ಬಂಗಾರು ಅಡಿಗಳಾರ್


ತಮಿಳುನಾಡಿನ ಖ್ಯಾತ ಆಧ್ಯಾತ್ಮಿಕ ಗುರು ಬಂಗಾರು ಅಡಿಗಳಾರ್ ಅವರು ಅಕ್ಟೋಬರ್ 19 ರಂದು ವಿಧಿವಶರಾಗಿದ್ದರು. ಅಡಿಗಳಾರ್​ ಅವರಿಗೆ 82 ವರ್ಷ ವಯಸ್ಸಾಗಿತ್ತು.

ಆರ್.ಧ್ರುವನಾರಾಯಣ

ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಆರ್. ಧ್ರುವ ನಾರಾಯಣ ಅವರು ಮಾರ್ಚ್ 11 ರಂದು ವಿಧಿವಶರಾಗಿದ್ದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com