ಸಂಚಾರಿ ಪೊಲೀಸರು
ರಾಜ್ಯ
ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಫೈನ್ ಕಟ್ಟುವವರಿಗೆ ಶೇ. 50ರಷ್ಟು ರಿಯಾಯಿತಿ; ಕಟ್ಟಲು ಅಂತಿಮ ಗಡವು ಫೆಬ್ರವರಿ 11!
ತಿಳಿದೋ ತಿಳಿಯದೆಯೋ ಸಂಚಾರಿ ನಿಯಮ ಉಲ್ಲಂಘಿಸಿರುವವರಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯ್ತಿ ನೀಡಿದೆ.
ಬೆಂಗಳೂರು: ತಿಳಿದೋ ತಿಳಿಯದೆಯೋ ಸಂಚಾರಿ ನಿಯಮ ಉಲ್ಲಂಘಿಸಿರುವವರಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯ್ತಿ ನೀಡಿದೆ.
ದಂಡ ಕಟ್ಟದೆ ಬಾಕಿ ಇಳಿಸಿಕೊಂಡಿರುವವರು ಮತ್ತು ಪ್ರಕರಣ ಕೋರ್ಟ್ ನಲ್ಲಿ ಇದ್ದರೆ ಅಂತಹವರು ಇದೇ ಫೆಬ್ರವರಿ 11ರೊಳಗೆ ದಂಡ ಪಾವತಿಸಿದರೆ ಶೇಕಡಾ 50ರಷ್ಟು ರಿಯಾಯ್ತಿ ಸಿಗಲಿದೆ.
ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನಲೆ ದಂಡ ಪಾವತಿಯಲ್ಲಿ ರಿಯಾಯ್ತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ಮನವಿ ಮಾಡಿದ್ದರು.
ಅದರಂತೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಶೇಕಡ 50ರಷ್ಟು ರಿಯಾಯ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಇನ್ನು ಫೆಬ್ರವರಿ 11ರೊಳಗೆ ಕಟ್ಟಲು ಸಾಧ್ಯವಾಗದಿದ್ದರೆ ಫೆಬ್ರವರಿ 11ರ ನಂತರ ಸಂಪೂರ್ಣ ದಂಡದ ಮೊತ್ತ ಪಾವತಿಸಬೇಕಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ