ವಿಡಿಯೋ ಕಾಲ್ ನಲ್ಲಿ ಪತ್ನಿ ತೋರಿಸಲಿಲ್ಲ ಎಂದು ಸ್ನೇಹಿತನಿಗೇ ಇರಿದ ಭೂಪ

ವಿಡಿಯೋ ಕಾಲ್ (Video Call) ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಆಕ್ರೋಶಗೊಂಡು ಸ್ನೇಹಿತನಿಗೆ ಕತ್ತರಿಯಿಂದ ಇರಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಡಿಯೋ ಕಾಲ್ (Video Call) ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಆಕ್ರೋಶಗೊಂಡು ಸ್ನೇಹಿತನಿಗೆ ಕತ್ತರಿಯಿಂದ ಇರಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಲೆನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮಿಶ್ರಾ ತನ್ನ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತಾಡುತ್ತಿದ್ದ. ಈ ವೇಳೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ಅಲ್ಲಿಗೆ ಬಂದಿದ್ದ. ರಾಜೇಶ್ ಮಿಶ್ರಾ ಫೋನ್ ನಲ್ಲಿ ಮಾತಾಡುತ್ತಿದ್ದನ್ನು ನೋಡಿ, ವಿಡಿಯೋ ಕಾಲ್ ಮಾಡು, ನಿನ್ನ ಹೆಂಡತಿಯನ್ನು (Wife) ನೋಡ್ಬೇಕು ಎಂದು ಹೇಳಿದ್ದಾನೆ.

ಸ್ನೇಹಿತನ ವಿಚಿತ್ರ ಬೇಡಿಕೆಗೆ ಆಕ್ರೋಶಗೊಂಡ ರಾಜೇಶ್ ಮಿಶ್ರಾ, ನನ್ನ ಹೆಂಡತಿಯನ್ನು ನಿನಗ್ಯಾಕೆ ತೋರಿಸಬೇಕು ಎಂದು ಹೇಳಿ ಜಗಳ ಮಾಡಿದ್ದಾನೆ. ಈ ವೇಳೆ ರಾಜೇಶ್ ಮಿಶ್ರಾ ಮತ್ತು ಸುರೇಶ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮಾತು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸುರೇಶ್ ರಾಜೇಶ್ ಮಿಶ್ರಾಗೆ ಅಂಗಡಿಯಲ್ಲಿದ್ದ ಕತ್ತರಿಯನ್ನು ತೆಗೆದುಕೊಂಡು ಇರಿದಿದ್ದಾನೆ. 

ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್.ಎಸ್.ಆರ್ ಲೇಔಟ್ ಪೊಲೀಸರು ಆರೋಪಿ ಸುರೇಶ್ ನನ್ನ ಬಂಧಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com