ಬೆಳಗಾವಿ: ಸವದತ್ತಿ ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಸಂಗೀತಾ ಪರಶುರಾಮ ಲಮಾಣಿ, ಮಹಾದೇವ ಗಂಗಪ್ಪ ಮಾದರ, ಸಚಿನ್ ಗೌಡಪ್ಪ ಲಮಾಣಿ, ನಾಗೇಶ ರಾಮಪ್ಪ ಲಮಾಣಿ, ವಿಠ್ಠಲ್ ಗುರಪ್ಪ ಕಾರಬಾರಿ ಎಂದು ಗುರ್ತಿಸಲಾಗಿದೆ.
ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆಯ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆಂದು ತಿಳಿದುಬಂದಿದೆ. ಆರೋಪಿಗಳಿಂದ ಒಟ್ಟು 23.85 ಲೀಟರ್ ಮದ್ಯ ಹಾಗೂ ಬೈಕ್'ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement