7ನೇ ವೇತನ ಆಯೋಗಕ್ಕೆ ವರದಿ ಸಲ್ಲಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಶುಕ್ರವಾರ ರಾಜ್ಯದ 7ನೇ ವೇತನ ಆಯೋಗಕ್ಕೆ ತಮ್ಮ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತು ವರದಿಯನ್ನು ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಶುಕ್ರವಾರ ರಾಜ್ಯದ 7ನೇ ವೇತನ ಆಯೋಗಕ್ಕೆ ತಮ್ಮ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತು ವರದಿಯನ್ನು ಸಲ್ಲಿಸಿದೆ.

ನೌಕರರು ಕೇಂದ್ರ ಸರ್ಕಾರದ ನೌಕರರಿಗೆ ಸರಿಸಮಾನವಾಗಿ ವೇತನ ಮತ್ತು ಭತ್ಯೆಗಳನ್ನು ಪಡೆಯಬೇಕು ಮತ್ತು ಅವರ ಸೇವಾ ಅವಧಿಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಬಡ್ತಿ ಅವಕಾಶಗಳನ್ನು ಹೊಂದಿರಬೇಕು ಎಂಬ ಸಲಹೆಗಳನ್ನು ವರದಿ ಒಳಗೊಂಡಿದೆ.

ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತ್ತು. ಇದು 2023ರ ಜನವರಿ 17 ರಂದು ಸಂಘಕ್ಕೆ ಪ್ರಶ್ನಾವಳಿಗಳನ್ನು ನೀಡಿ ಉತ್ತರಗಳು, ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು. 

ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ನೇತೃತ್ವದ ನಿಯೋಗ 65 ಪುಟಗಳ ವರದಿ ಸಲ್ಲಿಸಿತು. ಪ್ರಶ್ನಾವಳಿಗಳಲ್ಲಿ ಕೇಳಲಾಗಿಲ್ಲದ 2,50,363 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಅವರ ಮಕ್ಕಳಿಗೆ ಪ್ರೋತ್ಸಾಹಧನ ಮತ್ತು ಶಿಕ್ಷಣ ಭತ್ಯೆ ಸೇರಿದಂತೆ ಇತರೆ ಅಂಶಗಳನ್ನು ಸಂಘವು ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com