ರಾಜ್ಯದಲ್ಲಿ ಹೊಸ ಏರೋಸ್ಪೇಸ್‌ ನೀತಿ ಜಾರಿಗೆ ತಂದು ಯುವಜನರನ್ನು ವೈಮಾನಿಕ ಕ್ಷೇತ್ರದಲ್ಲಿ ಮಹಾಸಾಧನೆಗೆ ಸಿದ್ಧಪಡಿಸುತ್ತೇವೆ: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಹೊಸ ಏರೋಸ್ಪೇಸ್‌ ನೀತಿಯನ್ನು ಜಾರಿಗೆ ತಂದು ಸುಮಾರು 45 ಸಾವಿರಕ್ಕೂ ಹೆಚ್ಚು ಯುವಜನರನ್ನು ವೈಮಾನಿಕ ಕ್ಷೇತ್ರದಲ್ಲಿ ಮಹಾಸಾಧನೆಗೆ ಸಿದ್ಧಪಡಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ರಾಜ್ಯದಲ್ಲಿ ಹೊಸ ಏರೋಸ್ಪೇಸ್‌ ನೀತಿಯನ್ನು ಜಾರಿಗೆ ತಂದು ಸುಮಾರು 45 ಸಾವಿರಕ್ಕೂ ಹೆಚ್ಚು ಯುವಜನರನ್ನು ವೈಮಾನಿಕ ಕ್ಷೇತ್ರದಲ್ಲಿ ಮಹಾಸಾಧನೆಗೆ ಸಿದ್ಧಪಡಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.

ಯಲಹಂಕದಲ್ಲಿ ಆಯೋಜಿಸಲಾಗಿರುವ ಏರೋ ಇಂಡಿಯಾ-2023 ಏರ್‌ ಶೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 14ನೇ ಬಾರಿಗೆ ಏರ್‌ ಶೋ ನಡೆಸಲು ರಾಜ್ಯಕ್ಕೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವೆರಿಗೆ ಅಭಿನಂದನೆ, ಕೃತಜ್ಞತೆ ಸಲ್ಲಿಸಿದರು.

ಇದು ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಏರ್‌ ಶೋ ಆಗಿದ್ದು, ರಕ್ಷಣಾ ವಲಯ ಮತ್ತು ಇಂಥ ಏರ್‌ ಶೋ ನಡೆಸುವಲ್ಲಿ ಕರ್ನಾಟಕ ಮತ್ತು ಭಾರತದ ಶಕ್ತಿ ಇವತ್ತು ಜಗತ್ತಿಗೆ ತಿಳಿದಂತಾಗಿದೆ, ಕೊರೋನಾ ಕಾಲದಲ್ಲಿ ಪ್ಯಾರಿಸ್‌ ಏರ್‌ಶೋವನ್ನು ರದ್ದುಪಡಿಸಿದ ಕಾಲದಲ್ಲೂ ನಾವು ಯಶಸ್ವಿಯಾಗಿ ನಡೆಸಿದ ಹೆಮ್ಮೆ ನಮ್ಮದು.

ಏರೊ ಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ 1940ರಲ್ಲಿ ಎಚ್ ಎ ಎಲ್ ಸ್ಥಾಪನೆಯಾಗಿದ್ದು, ಎನ್ ಎ ಎಲ್ , ಬಿಎಚ್ ಇ ಎಲ್, ಡಿಆರ್‌ಡಿಒ ಎಲ್ಲವೂ ಆರ್ ಆಂಡ್ ಡಿ ಸಾಮರ್ಥ್ಯವನ್ನು ಹೆಚ್ಚಿಸಿವೆ. 1960ರ ದಶಕದಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. 1960ರಲ್ಲಿ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು. ಶೇ.67ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ ಎಂದು ಹೇಳಿದರು.

ಭಾರತವನ್ನು ರಕ್ಷಣೆ ಸೇರಿದಂತೆ ಎಲ್ಲ ವಲಯಗಳಲ್ಲಿ ಜಗತ್ತಿನ ಅತಿ ದೊಡ್ಡ ಶಕ್ತಿಯಾಗಿ ರೂಪಿಸುವ ನಿಮ್ಮ ಮಹತ್ವಾಕಾಂಕ್ಷೆಗೆ ಕರ್ನಾಟಕದ ಸಾಥಿಯಾಗಿ ನಿಲ್ಲಲಿದೆ. ಕರ್ನಾಟಕದಲ್ಲಿ ಹೊಸ ಏರೋಸ್ಪೇಸ್‌ ನೀತಿಯನ್ನು ಘೋಷಿಸಲಾಗುತ್ತಿದ್ದು, ಅದರಲ್ಲಿ ಯುವಜನರಿಗೆ ವೈಮಾನಿಕ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಶಕ್ತಿ ತುಂಬಲಾಗುವುದು ಎಂದು ತಿಳಿಸಿದರು.

ಬಳಿಕ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ ಅವರು, ಮೋದಿ ಅವರು ಮಹಾನ್‌ ಇಂಡಿಯಾದ ಕನಸುಗಾರ ಮಾತ್ರವಲ್ಲ, ಕನಸುಗಳನ್ನು ನನಸು ಮಾಡಬಲ್ಲ ಶಕ್ತಿವಂತ. ಅವರು ಒಬ್ಬ ನಾಯಕನಾಗಿ ನಮ್ಮನ್ನು ಮುನ್ನಡೆಸುವುದು ಮಾತ್ರವಲ್ಲ, ಶಕ್ತಿಶಾಲಿ ಉದಾಹರಣೆಗಳೊಂದಿಗೆ ನಮಗೆ ನಾಯಕರಾಗಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com