ಮೊಬೈಲ್ ಕಳ್ಳತನ ಹೆಚ್ಚಳ: ರಾಜ್ಯ ಪೊಲೀಸರಿಂದ ರಿಜಿಸ್ಟ್ರಿ ಸ್ಥಾಪನೆ; ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು ಹೀಗೆ ಮಾಡಿ...

ರಾಜ್ಯ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಮುಂದಾಗಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಮುಂದಾಗಿದ್ದಾರೆ. ಮೊಬೈಲ್ ಫೋನ್ ಕಳ್ಳತನವು ಅಸಾಧಾರಣವಾಗಿ ಹೆಚ್ಚಾಗುತ್ತಿದ್ದು, ದೂರಸಂಪರ್ಕ ಇಲಾಖೆ (DoT) ಕದ್ದ ಮತ್ತು ಕಳೆದುಹೋದ ಫೋನ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸಲಕರಣೆ ಗುರುತು ನೋಂದಣಿ (CEIR- Central Equipment Identity Registry) ಅನ್ನು ಜಾರಿಗೊಳಿಸುತ್ತಿದೆ.

CEIR ಎಲ್ಲಾ ಮೊಬೈಲ್ ಆಪರೇಟರ್‌ಗಳ ಇಂಟರ್‌ನ್ಯಾಷನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ (IMEI) ಡೇಟಾಬೇಸ್‌ಗೆ ಸಂಪರ್ಕಿಸುತ್ತದೆ. ಕಳೆದುಹೋದ/ಕಳುವಾದ ಮೊಬೈಲ್ ಸಾಧನಗಳ ಮಾಹಿತಿ ಹಂಚಿಕೊಳ್ಳಲು ಎಲ್ಲಾ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (TSPS) ಕೇಂದ್ರೀಯ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಒಂದು ನೆಟ್‌ವರ್ಕ್‌ನಲ್ಲಿ ನಿರ್ಬಂಧಿಸಲಾದ ಮೊಬೈಲ್, ಇತರ ನೆಟ್‌ವರ್ಕ್‌ಗಳಲ್ಲಿ ಸಹ ಕಾರ್ಯನಿರ್ವಹಿಸುವುದಿಲ್ಲ. ಫೋನ್‌ನಲ್ಲಿನ ಚಂದಾದಾರರ ಗುರುತಿನ ಮಾಡ್ಯೂಲ್ (SIM) ಕಾರ್ಡ್ ಅನ್ನು ಬದಲಾಯಿಸಿದರೂ ಸಹ ಅದು ಕೆಲಸ ಮಾಡುವುದಿಲ್ಲ.

'ಸಿಇಐಆರ್ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೊಳಿಸಲಾಗಿದೆ ಮತ್ತು ಎಲ್ಲಾ ಘಟಕಗಳಿಗೆ ಲಾಗಿನ್ ಕ್ರೆಡೆನ್ಶಿಯಲ್ಸ್‌ಗಳನ್ನು ರಚಿಸಲಾಗಿದೆ. 'ಸಿಇಐಆರ್ ಸರಿಯಾಗಿ ಅನುಷ್ಠಾನಗೊಂಡರೆ, ನಕಲಿ ಮೊಬೈಲ್ ಮಾರುಕಟ್ಟೆಯನ್ನು ಮೊಟಕುಗೊಳಿಸಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಜೊತೆಗೆ ಮೊಬೈಲ್ ಫೋನ್ ಕಳ್ಳತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಬೈಲ್ ಕಳ್ಳತನವನ್ನು ಕಡಿಮೆ ಲಾಭದಾಯಕವಾಗಿಸುವುದು ಇದರ ಉದ್ದೇಶವಾಗಿದೆ' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್ ಹೇಳಿದರು. 

ದೆಹಲಿ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕ ಪೊಲೀಸರು ಸಿಇಐಆರ್ ಯೋಜನೆಯನ್ನು ಜಾರಿಗೆ ತಂದ ಮೂರನೇ ಸ್ಥಾನದಲ್ಲಿದ್ದಾರೆ. 

ಸಿಇಐಆರ್‌ನೊಂದಿಗೆ ಕದ್ದ ಮೊಬೈಲ್ ಸೆಟ್ ಅನ್ನು ನಿರ್ಬಂಧಿಸಲು, ಮಾಲೀಕರು/ದೂರುದಾರರು www.ceir.gov.in ಗೆ ಭೇಟಿ ನೀಡಬೇಕು. ಒಂದು ವೇಳೆ ದೂರುದಾರರು/ಬಳಕೆದಾರರು ಮೊಬೈಲ್ ಅನ್ನು ನಿರ್ಬಂಧಿಸದಿದ್ದರೆ, ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) 'ಇ ಲಾಸ್ಟ್' (e lost) ಮೂಲಕ ರಚಿಸಲಾದ ವಿವರಗಳನ್ನು ಅಥವಾ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 392 ರ ಅಡಿಯಲ್ಲಿ ದಾಖಲಾದ ಕದ್ದ ಮೊಬೈಲ್‌ಗಳ ಪ್ರಕರಣಗಳ ವಿವರಗಳನ್ನು ನೋಡಲ್ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಸೈಬರ್, ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಪೊಲೀಸ್ ವಿಭಾಗದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಘಟಕ ಮಟ್ಟದಲ್ಲಿ ನೋಡಲ್ ಅಧಿಕಾರಿಯಾಗಿದ್ದಾರೆ.

ನೋಡಲ್ ಅಧಿಕಾರಿಗಳು ಮೊಬೈಲ್ ಪೋನ್‌ಗಳನ್ನು ನಿರ್ಬಂಧಿಸಲು ಪೊಲೀಸ್ ಠಾಣೆಗಳಿಂದ ಬಂದಿರುವ ವಿನಂತಿಗಳನ್ನು ಮತ್ತು CEIR ಪೋರ್ಟಲ್‌ನಲ್ಲಿ ಘಟಕಗಳಿಗೆ ಒದಗಿಸಲಾದ ಲಾಗಿನ್‌ಗಳ ಮೂಲಕ ನಿರ್ಬಂಧಿಸುವ ವಿನಂತಿಗಳನ್ನು ಪರಿಶೀಲಿಸುತ್ತಾರೆ. ಸಿಇಐಆರ್ ಮೂಲಕ ಪತ್ತೆಹಚ್ಚುವಿಕೆಯ ವರದಿ ನಂತರ, ನೋಡಲ್ ಅಧಿಕಾರಿಗಳು ಪೊಲೀಸ್ ಠಾಣೆಗಳೊಂದಿಗೆ ಮಾತುಕತೆ ನಡೆಸುತ್ತಾರೆ ಮತ್ತು ಬಳಿಕ ಮೊಬೈಲ್ ಸೆಟ್‌ಗಳನ್ನು ಪತ್ತೆಹಚ್ಚಲು ಅವರು ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದರು.

ಕದ್ದ ಅಥವಾ ಕಳೆದುಹೋದ ಮೊಬೈಲ್ ಸೆಟ್ ಪತ್ತೆಯಾದರೆ ಏನಾಗುತ್ತದೆ? ಅಂತಹ ಸಂದರ್ಭದಲ್ಲಿ, ಮೊಬೈಲ್ ಫೋನ್‌ಗಳನ್ನು ಅನ್‌ಬ್ಲಾಕ್ ಮಾಡಲು ಎಲ್ಎಚ್ಒ ಗಳು ನೋಡಲ್ ಅಧಿಕಾರಿಗಳಿಗೆ ವಿನಂತಿಯನ್ನು ಕಳುಹಿಸುತ್ತಾರೆ. ನೋಡಲ್ ಅಧಿಕಾರಿಗಳು ತಮ್ಮ ಗೊತ್ತುಪಡಿಸಿದ ಲಾಗಿನ್‌ಗಳ ಮೂಲಕ ಮೊಬೈಲ್ ಸೆಟ್ ಅನ್ನು ಅನ್‌ಬ್ಲಾಕ್ ಮಾಡಲು ವಿನಂತಿಯನ್ನು ಸಿಇಐಆರ್‌ಗೆ ರವಾನಿಸುತ್ತಾರೆ.

ನೋಡಲ್ ಅಧಿಕಾರಿಗಳು ಘಟಕದ ಮುಖ್ಯಸ್ಥರಿಗೆ ಮಾಸಿಕ ವರದಿಯನ್ನು, ಪ್ರಕರಣದ ವಿವರಗಳೊಂದಿಗೆ ನಿರ್ಬಂಧಿಸಬೇಕಾದ ಮತ್ತು/ಅಥವಾ ಅನ್‌ಬ್ಲಾಕ್ ಮಾಡಬೇಕಾದ ಮೊಬೈಲ್ ಸೆಟ್‌ಗಳ ಪಟ್ಟಿಯನ್ನು ಕಳುಹಿಸಬೇಕಾಗುತ್ತದೆ. ಘಟಕದ ಮುಖ್ಯಸ್ಥರು ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ ಮತ್ತು CEIR ಅನ್ನು ಸರಿಯಾಗಿ ಅಳವಡಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಶ್ಲೇಷಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com