ಹಿಂದೂಗಳಿಗೆ ಸೇರಿದ ಸ್ಮಶಾನ ಒತ್ತುವರಿ ಮಾಡಿದ ಬಿಬಿಎಂಪಿ; ಅಕ್ರಮವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ; ಜಮೀರ್ ಅಹ್ಮದ್ ಕೈವಾಡ ಶಂಕೆ!

ಜೆಜೆ ನಗರ ವಾರ್ಡ್‌ನ ಗೋರಿಪಾಳ್ಯದಲ್ಲಿದ್ದ ಹಿಂದೂ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಬಿಬಿಎಂಪಿ ಒತ್ತುವರಿ ಮಾಡಿಕೊಂಡಿದ್ದು, ಸ್ಥಳದಲ್ಲಿ ಅಕ್ರಮವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜೆಜೆ ನಗರ ವಾರ್ಡ್‌ನ ಗೋರಿಪಾಳ್ಯದಲ್ಲಿದ್ದ ಹಿಂದೂ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಬಿಬಿಎಂಪಿ ಒತ್ತುವರಿ ಮಾಡಿಕೊಂಡಿದ್ದು, ಸ್ಥಳದಲ್ಲಿ ಅಕ್ರಮವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಮೊದಲು ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಬಿಬಿಎಂಪಿ, ನಂತರ ಸ್ಥಳದಲ್ಲಿ ಕಚೇರಿಯನ್ನು ನಿರ್ಮಿಸಿತ್ತು. ಇದೀಗ ಸ್ಥಳದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುತ್ತಿದೆ ಎಂದು ಹಿಂದೂಪರ ಹೋರಾಟಗಾರರು ಆರೋಪಿಸಿದ್ದಾರೆ.

ಈ ಸಂಬಂಧ ಈಗಾಗಲೇ ಲೋಕಾಯುಕ್ತ ಕಚೇರಿ ತೆರಳಿ ಮಾಹಿತಿ ನೀಡಲಾಗಿತ್ತು. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತ ಎಸ್ ಭಾಸ್ಕರನ್ ಅವರು ಮಾತನಾಡಿ, ಹಿಂದೂಗಳಿಗೆ ಸೇರಿದ ಸ್ಮಶಾನವನ್ನು ಬಿಬಿಎಂಪಿಯೆ ಅತಿಕ್ರಮಣ ಮಾಡಿದೆ. ಆಸ್ತಿ ಗುರುತಿನ ಸಂಖ್ಯೆ 136-10034-115 ರಲ್ಲಿ ಪಾಲಿಕೆ ಕಚೇರಿಯನ್ನು 2018ರಲ್ಲಿ ನಿರ್ಮಿಸಲಾಗಿತ್ತು. ಇದೀಗ ಆಸ್ತಿ ಸಂಖ್ಯೆ 136-10034-117 ರಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಇಚ್ಛೆಯ ಮೇರೆಗೆ ರೂ 1 ಕೋಟಿ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಮಶಾನದಲ್ಲಿದ್ದ ''2500ಕ್ಕೂ ಹೆಚ್ಚು ಗೋರಿಗಳನ್ನು ಧ್ವಂಸಗೊಳಿಸಿ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಪಾಲಿಕೆ ಅಧಿಕಾರಿಗಳೂ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆಯೇ ಲೋಕಾಯುಕ್ತಕ್ಕೆ ದೂರು  ನೀಡಲಾಗಿತ್ತು. ಆದರೆ, ಈ ಬಗ್ಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.

ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸೀಮಾ ಅಲ್ತಾಫ್ ಖಾನ್ ಅವರ ಪತಿ ಅಲ್ತಾಫ್ ಖಾನ್ ಅವರು ಸ್ಮಶಾನವನ್ನು ಧ್ವಂಸ ಮಾಡಿದ್ದು, ಗೋರಿಗಳಿಲ್ಲಿದ್ದ ಪಾರ್ಥೀವ ಶರೀರಗಳು ಹಾಗೂ ಅಸ್ಥಿಪಂಜರಗಳನ್ನು ನಾಪತ್ತೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಸಂಪ್ರದಾಯದಂತೆ ಹಿಂದೂಗಳು ವಾರ್ಶಿಕವಾಗಿ ಸ್ಮಶಾನಕ್ಕೆ ಬಂದು ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಿ, ಗೌರವ ಸಲ್ಲಿಸುತ್ತಾರೆ. ಈ ಮೂಲಕ ತಮ್ಮ ಪ್ರೀತಿಪಾತ್ರರನ್ನು ನೋಡುತ್ತಾರೆ. ಆದರೆ, ಸ್ಮಶಾನವನ್ನು ಧ್ವಂಸ ಮಾಡುವ ಮೂಲಕ ಅಧಿಕಾರಿಗಳು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆಂದು ಭಾಸ್ಕರ್ ಅವರು ಹೇಳಿದ್ದಾರೆ.

ಮಾರ್ಚ್ 6 ರಂದು ಕಚೇರಿಗೆ ಬರುವಂತೆ ಲೋಕಾಯುಕ್ತದ ಅಧಿಕಾರಿಗಳು ಸೂಚಿಸಿದ್ದಾರೆ. ಸ್ಥಳಕ್ಕೆ ಬಂದು ಲೋಕಾಯುಕ್ತರು ಭೇಟಿ ನೀಡಿ, ಪರಿಶೀಲನೆ ಮಾಡದೇ ಹೋದಲ್ಲಿ, ಹಿಂದೂ ಸಂಘಟನೆಗಳೊಂದಿಗೆ ಧರಣಿ ನಡೆಸುತ್ತೇನೆಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com