ಹಾಸನ: ಅಕ್ರಮ ಮರಳು ಗಣಿಕಾರಿಕೆ ತಡೆಗೆ ಪೊಲೀಸ್ ಇಲಾಖೆಯಿಂದ 14 ಚೆಕ್ ಪೋಸ್ಟ್ ಸ್ಥಾಪನೆ

ಹಾಸನ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ಜಿಲ್ಲಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮ ಮರಳು ಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆ 14 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ.
ಅಕ್ರಮ ಮರಳು ಗಣಿಗಾರಿಕೆ(ಸಾಂಕೇತಿಕ ಚಿತ್ರ)
ಅಕ್ರಮ ಮರಳು ಗಣಿಗಾರಿಕೆ(ಸಾಂಕೇತಿಕ ಚಿತ್ರ)

ಹಾಸನ: ಹಾಸನ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ಜಿಲ್ಲಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮ ಮರಳು ಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆ 14 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ.
 
ಇದಷ್ಟೇ ಅಲ್ಲದೇ 30 ಲಕ್ಷ ರೂಪಾಯಿ ವೆಚ್ಚದಲ್ಲಿ 52 ಪ್ರದೇಶಗಳಲ್ಲಿ ಸರ್ಕ್ಯೂಟ್ ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
 
ಎಲ್ಲಾ 22 ಮರಳು ಬ್ಲಾಕ್ ಗಳಿಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಹಾಗೂ ಚೆಕ್ ಪೋಸ್ಟ್ ಗಳ ಬಳಿ  24/7 ಅಲರ್ಟ್ ಆಗಿರುವ ವ್ಯವಸ್ಥೆ ಮಾಡಲಾಗುತ್ತದೆ.  ಗೋಪಾಲಪ್ಪುರ, ಹೊಂಕರಹಳ್ಳಿ, ಮಾಗಲು, ಚಂಗಡಿಹಳ್ಳಿ, ಹುಲಗಟ್ಟೂರು, ಸಕಲೇಶಪುರದ ವನಗೂರು ಕೂಡುರಸ್ತೆ, ಕೆ ಹೊಸಕೋಟೆ, ರಾಯರಕೊಪ್ಪಲು, ಗದ್ದೆಕೊಪ್ಪಲು, ಹರಿಹಳ್ಳಿ ದೇವಾಲಯ ಆಲೂರು ತಾಲೂಕಿನಲ್ಲಿ ಅರೇಬಿಕ್ ಶಾಲೆ, ಬೇಲೂರು, ಬೇಲೂರಿನ ಚೀಕನಹಳ್ಳಿ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಹಿರಿಸಾವೆ ಗಳಲ್ಲಿ ಚೆಕ್ ಪೋಸ್ಟ್ ಗಳು ನಿರ್ಮಾಣಗೊಳ್ಳಲಿವೆ. 

ಪೊಲೀಸ್ ಇಲಾಖೆ ಸಾರ್ವಜನಿಕರು ಮರಳು ಗಣಿಗಾರಿಕೆ ಹಾಗೂ ಅಕ್ರಮ ಸಾಗಣೆ ಬಗ್ಗೆ ಮಾಹಿತಿ ನೀಡುವುದಕ್ಕೆ ಮಾಹಿತಿ ಕೇಂದ್ರವನ್ನು ಸ್ಥಾಪಿಸಿದ್ದು, ಈ ಕೇಂದ್ರದಲ್ಲಿ ಸೋಲಾರ್ ಪವರ್ ಹಾಗೂ ರೆಕಾರ್ಡಿಂಗ್ ಸೌಲಭ್ಯಗಳಿವೆ. ಮಾಹಿತಿ ಸ್ವಯಂಚಾಲಿತವಾಗಿ ಘಟನೆ ವರದಿಯಾದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ತಲುಪಲಿದೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಲಭ್ಯವಾಗಲಿದೆ. 

ಅಧಿಕಾರಿಗಳು ಹಾಗೂ ಸಾರಿಗೆ ಗುತ್ತಿಗೆದಾರರ ನಡುವೆ ಇರುವ ನಂಟಿನಿಂದಾಗಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಣೆ ಸಾಧ್ಯವಾಗುತ್ತಿದ್ದು, 

ಮರಳು ಗಣಿಗಾರಿಕೆ ತಡೆಗೆ ಜಿಲ್ಲಾ ಆಡಳಿತ ಮರಳು ಟಾಸ್ಕ್ ಫೋರ್ಸ್ ಸಮಿತಿಯನ್ನು ಕಂದಾಯ, ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ರಚಿಸಿತ್ತು. ಎಸ್ ಪಿ ಹರಿರಾಮ್ ಶಂಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com