ಬೀದಿ ನಾಯಿಗಳ ಸ್ಥಳಾಂತರ: ಆರ್‌ಡಬ್ಲ್ಯೂಎ ವಿರುದ್ಧ ದೂರು ದಾಖಲು

ಅಪಾರ್ಟ್‌ಮೆಂಟ್ ಸಮುಚ್ಚಯವನ್ನು ಸುರಕ್ಷಿತವಾಗಿಡುವ ನೆಪದಲ್ಲಿ ಸಮುದಾಯದ ನಾಯಿಗಳ ಸ್ಥಳಾಂತರಿಸುತ್ತಿದ್ದು, ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬ್ಲ್ಯೂಎ)ದ ವಿರುದ್ಧ ಪ್ರಾಣಿ ಪ್ರಿಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಪಾರ್ಟ್‌ಮೆಂಟ್ ಸಮುಚ್ಚಯವನ್ನು ಸುರಕ್ಷಿತವಾಗಿಡುವ ನೆಪದಲ್ಲಿ ಸಮುದಾಯದ ನಾಯಿಗಳ ಸ್ಥಳಾಂತರಿಸುತ್ತಿದ್ದು, ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬ್ಲ್ಯೂಎ)ದ ವಿರುದ್ಧ ಪ್ರಾಣಿ ಪ್ರಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಗರಿಮಾ ಜುನೇಜಾ ಎಂಬುವವರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ.

ದೂರಿನಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಎಸ್‌ಜೆಆರ್ ಪಾರ್ಕ್ ವಿಸ್ಟಾ ಆವರಣದಲ್ಲಿ ಎರಡು ನಾಯಿಮರಿಗಳು ಸತ್ತು ಬಿದ್ದಿದ್ದವು. ಈ ಸಂಬಂಧವೂ ದೂರು ದಾಖಲಿಸಲಾಗಿದೆ. ಇದೀಗ ಅಪಾರ್ಟ್ ಮೆಂಟ್'ನ ಸೆಕ್ಯೂರಿಟಿ ಗಾರ್ಡ್‌ಗಳು ಬೆಳೆದ ನಾಯಿಗಳನ್ನು ಸ್ಥಳಾಂತರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಈ ಸಂಬಂಧ ಸೆಕ್ಯುರಿಟಿ ಗಾರ್ಡ್ ಗಳನ್ನು ಪ್ರಶ್ನೆ ಮಾಡಲಾಗಿದ್ದು, ನಿರ್ವಹಣಾ ಸಮಿತಿಯ ಸೂಚನೆಗಳನ್ನು ಅನುಸರಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಕಾನೂನಿನ ಪ್ರಕಾರ ಸಮುದಾಯ ಅಥವಾ ಬೀದಿನಾಯಿಗಳನ್ನು ಸ್ಥಳಾಂತರಿಸುವುದಿಲ್ಲ ಜುನೇಜಾ ಹೇಳಿದ್ದಾರೆ.

ಆರೋಪಗಳ ಕುರಿತು ಅಪಾರ್ಟ್ಮೆಂಟ್ ಸೊಸೈಟಿಯು ಸ್ಪಷ್ಟನೆ ನೀಡಿದ್ದು, ನಾವು ಯಾವುದೇ ನಾಯಿಗಳನ್ನು ಸ್ಥಳಾಂತರಿಸಿಲ್ಲ. ನಾಯಿಗಳಿಂದ ನಿವಾಸಿಗಳ ಮೇಲೆ ಯಾವುದೇ ದಾಳಿಯನ್ನು ತಡೆಯುದನ್ನು ತಡೆಯಲು ಮಾತ್ರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹೇಳಿದೆ.

"ನಾಯಿಗಳು ಹತ್ತಿರದ ರಕ್ಷಣಾ ಭೂಮಿ ಅಥವಾ ಕೆರೆಗಳ ಹತ್ತಿರದಿಂದ ಬಂದಿರುವುದಾಗಿದೆ. ಹೀಗಾಗಿ ಈ ನಾಯಿಗಳನ್ನು ಅದರ ಮೂಲ ಆವಾಸಸ್ಥಾನಕ್ಕೆ ಹಿಂತಿರುಗುವುದನ್ನು ನಾವು ಬಯಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಸಲಹೆ ಪಡೆಯಲು ಸಂಘ ಮುಂದಾಗಿತ್ತು. ಇದನ್ನು ತಿಳಿದ ಕೆಲ ಕಾರ್ಯಕರ್ತರು ನಮಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಎಸ್‌ಜೆಆರ್‌ ಪಾರ್ಕ್‌ ವಿಸ್ಟಾ ಕಾರ್ಯದರ್ಶಿ ಶಾಲಿನಿ ಅವರು ಹೇಳಿದ್ದಾರೆ.

ಅತಿಕ್ರಮ ಪ್ರವೇಶ ಮತ್ತು ಕಿರುಕುಳದ ಸಂಬಂಧ ನಾವೂ ಕೂಡ ಕಾರ್ಯಕರ್ತರ ವಿರುದ್ಧ ಪ್ರತಿದೂರು ದಾಖಲಿಸಿದ್ದೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com