ರಾಜ್ಯದ ರೈಲ್ವೆ ಪೊಲೀಸರಿಗೆ ಬಂತು ಶೋಲ್ಡರ್ ಲೈಟ್!

ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ಗಳನ್ನು ವಿತರಿಸಲಾಗಿದ್ದು, ಇನ್ನು ಮುಂದೆ ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಇದರಿಂದ ಸಹಾಯಕವಾಗಲಿದೆ.
ಶೋಲ್ಡರ್ ಲೈಟ್ ಧರಿಸುತ್ತಿರುವ ರೈಲ್ವೇ ಪೊಲೀಸರು.
ಶೋಲ್ಡರ್ ಲೈಟ್ ಧರಿಸುತ್ತಿರುವ ರೈಲ್ವೇ ಪೊಲೀಸರು.
Updated on

ಬೆಂಗಳೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ಗಳನ್ನು ವಿತರಿಸಲಾಗಿದ್ದು, ಇನ್ನು ಮುಂದೆ ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಇದರಿಂದ ಸಹಾಯಕವಾಗಲಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ (ಜಿಆರ್‌ಪಿ) ಎಸ್‌ಕೆ ಸೌಮ್ಯಲತಾ ಅವರು, ರೈಲ್ವೇ ಪೊಲೀಸರಿಗೆ ಶೋಲ್ಡರ್ ಲೈಟ್ ವಿತರಿಸಲಾಗಿದ್ದು, ಇದರಿಂದ ರೈಲ್ವೇ ನಿಲ್ದಾಣಗಳ ಮತ್ತು ಪ್ಲಾಟ್ ಫಾರ್ಮ್'ಗಳಲ್ಲಿ ಸ್ಪಷ್ಟ ಗೋಚರೆಯನ್ನು ಖಚಿತಪಡಿಸುತ್ತದೆ. 190 ಶೋಲ್ಡರ್ ದೀಪಗಳನ್ನು ಪೊಲೀಸರಿಗೆ ವಿತರಿಸಲಾಗಿದ್ದು, ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರು ಇದನ್ನು ಬಳಕೆ ಮಾಡುತ್ತಾರೆಂದು ಹೇಳಿದ್ದಾರೆ.

ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿರುತ್ತಾರೆ. ಜನರೊಂದಿಗೆ ನಡೆದು ಹೋಗುವಾಗ ಪೊಲೀಸ್ ಸಿಬ್ಬಂದಿಯನ್ನು ಹುಡುಕುವುದು ಕಷ್ಟ. ಅಪಾಯಗಳು ಎದುರಾದಾಗ ಜನರು ಪೊಲೀಸರನ್ನು ಹುಡುಕುವ ಪರಿಸ್ಥಿತಿ ಎಂದುರಾಗುತ್ತದೆ. ಶೋಲ್ಡರ್ ಲೈಟ್ ಗಳು ಜನರಿಗೆ ಪೊಲೀಸ್ ಸಿಬ್ಬಂದಿಗಳ ಹುಡುಕಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ಶೋಲ್ಡರ್ ದೀಪಗಳ ಪರಿಚಯಿಸಿದ ಬಳಿಕ ಪ್ಲಾಟ್‌ಫಾರ್ಮ್‌ಗಳಲ್ಲಿನ ಅಪರಾಧಗಳು ಕಡಿಮೆಯಾಗಿದೆ ಎಂದು ಜಿಆರ್‌ಪಿ ಪೊಲೀಸರು ಹೇಳಿದ್ದಾರೆ.

ತಡರಾತ್ರಿಯಲ್ಲಿ ರೈಲ್ವೇ ಹಳಿಗಳ ಮೇಲೆ ಗಸ್ತು ತಿರುಗುವ ಪೊಲೀಸರಿಗೆ ಶೋಲ್ಡರ್ ಲೈಟ್ ದೊಡ್ಡ ಪ್ರಯೋಜನವನ್ನು ನೀಡಿದೆ. ಈ ಮೊದಲು ಕೈಯಲ್ಲಿ ಟಾರ್ಚ್ ಲೈಟ್ ಹಿಡಿದುಕೊಂಡು ಹಲವಾರು ಕಿಲೋಮೀಟರ್ ಗಳವರೆಗೆ ಗಸ್ತು ತಿರುಗಬೇಕಾಗಿತ್ತು. ಇದೀಗ ಸಮವಸ್ತ್ರದ ಮೇಲಿನ ಲೈಟ್ ಗಳು ಅವರಿಗೆ ಸಹಾಯ ಮಾಡುತ್ತಿವೆ. ಇದು ಪೊಲೀಸರಿಗೂ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com