ಬೆಂಗಳೂರು: BMTC ಗೆ ಮತ್ತೊಂದು ಬಲಿ, ಬಸ್ ಅಡಿ ಸಿಲುಕಿ ಬೈಕ್ ಸವಾರ ಸಾವು
ಬೆಂಗಳೂರು: ಬೆಂಗಳೂರಿನಲ್ಲಿ BMTCಗೆ ಮತ್ತೊಂದು ಬಲಿಯಾಗಿದ್ದು, ಬಸ್ ಅಡಿ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯ ಸಮೀಪ ಸಂಭವಿಸಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸೋಮನಹಳ್ಳಿ ಬ್ರಿಡ್ಜ್ ಬಳಿ ಈ ಘಟನೆ ನಡೆದಿದ್ದು, ಬ್ರಿಡ್ಜ್ ಬಳಿ ಮುಂದೆ ತೆರಳುತ್ತಿದ್ದ, ಬೈಕ್ಗೆ ಬಿಎಂಟಿಎಸ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸವಾರನ್ನು ಪೊಲೀಸರು ಮತ್ತು ಸ್ಥಳಿಯರು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಮೃತ ಬೈಕ್ ಚಾಲಕನನ್ನು ವಿಜಯನಗರ ಕುಲದೀಪ್ ಬಗರೇಚಾ ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಬಸ್ ಚಾಲಕ ಆನಂದ್ ರಾವ್ ಹಾಗು ಬಸ್ನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಕೆಳಗೆ ಬಿಎಂಟಿಸಿ (BMTC) ಬಸ್ ಕೆಳಗೆ ಸಿಲುಕಿ ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಬಳಿಕ ನವೆಂಬರ್ 29 ರಂದು ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನಗರದ ಮಾಗಡಿ ರಸ್ತೆ ಜಂಕ್ಷನ್ ಬಳಿ ನಡೆದಿತ್ತು. ಘಟನೆಯಲ್ಲಿ ಮಂಜುನಾಥ್(25 ವರ್ಷ), ಶಿವರಾಜ್(29 ವರ್ಷ) ಸಾವನ್ನಪ್ಪಿದ್ದರು. ಮೃತರು ಗೊಲ್ಲರಹಟ್ಟಿಯ ಇಂದಿರಾ ಕಾಲೋನಿ ನಿವಾಸಿಗಳು ಎಂದು ತಿಳಿಬಂದಿತ್ತು. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ