ರಾಜ್ಯದಲ್ಲಿ ಶಿಕ್ಷಕರ ತರಬೇತಿಗೆ ಒತ್ತು ನೀಡಬೇಕು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ

ರಾಜ್ಯದಲ್ಲಿ ಶಿಕ್ಷಕರ ತರಬೇತಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ಮತ್ತು ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.
ನಾರಾಯಣಮೂರ್ತಿ
ನಾರಾಯಣಮೂರ್ತಿ

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ತರಬೇತಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ಮತ್ತು ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.

ಟೀಚ್ ಫಾರ್ ಇಂಡಿಯಾ ಆಯೋಜಿಸಿದ್ದ ಎರಡನೇ ವಾರ್ಷಿಕ ಇನ್ಸ್‌ಪೈರ್ಡ್ ಕಾನ್‌ಕ್ಲೇವ್‌ನಲ್ಲಿ ಶನಿವಾರ ಮಾತನಾಡಿದ ಅವರು, ಮಗುವಿಗೆ ಶಿಕ್ಷಣದ ಕೊಡುಗೆಯೇ ಪ್ರಮುಖ ಕೊಡುಗೆಯಾಗಿದ್ದು, ಶಿಕ್ಷಕರ ಸರಿಯಾದ ತರಬೇತಿಯ ಮೂಲಕ ಅದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಶಿಕ್ಷಕರೂ ವಿನೂತನ ಬೋಧನಾ ವಿಧಾನಗಳನ್ನು ಬಳಸುವಂತಾಗಲು ಶಿಕ್ಷಕರ ತರಬೇತಿಗೆ ಒತ್ತು ನೀಡುವ ಅಗತ್ಯವಿದೆ. ಸರ್ಕಾರಿ ಶಾಲೆಗಳು ‘ಟೀಚ್ ಫಾರ್ ಇಂಡಿಯಾ’ ದಂತಹ ನಾಗರಿಕ ಸಮಾಜ ಸಂಸ್ಥೆಗಳ ಸಹಾಯ ಪಡೆಯಬೇಕು ಎಂದರು.

ಟೀಚ್ ಫಾರ್ ಇಂಡಿಯಾದ ನಗರ ನಿರ್ದೇಶಕಿ ತುಲಿಕಾ ವರ್ಮಾ ಮಾತನಾಡಿ, ತರಗತಿ ಕೊಠಡಿಗಳನ್ನು ಭಾರತದ ನಾಗರಿಕರು ನೋಡಲು ಇಷ್ಟಪಡುವ ಸಣ್ಣ ಆವೃತ್ತಿಗಳಾಗಿ ಅಥವಾ ಸೂಕ್ಷ್ಮರೂಪಗಳಾಗಿ ಪರಿವರ್ತಿಸಬೇಕು, ಅದು ದೇಶವನ್ನು ಬದಲಾಯಿಸಬಹುದು ಎಂದರು.

ಶಿಕ್ಷಣದ ಸಮಸ್ಯೆಯು ಸಂಕೀರ್ಣವಾಗಿದೆ ಮತ್ತು ಸರ್ಕಾರ, ಖಾಸಗಿ ಸಂಸ್ಥೆಗಳು ಮತ್ತು ನಾಗರಿಕ ಸಮಾಜವು ವಿದ್ಯಾರ್ಥಿಗಳ ಜೊತೆಯಲ್ಲಿ ಒಗ್ಗೂಡಿ ಸವಾಲುಗಳನ್ನು ಪರಿಹರಿಸುವ ಅಗತ್ಯವಿದೆ. ನಾವೆಲ್ಲರೂ ಸುರಕ್ಷಿತ, ಸಂತೋಷದಾಯಕ ಮತ್ತು ಅದೇ ಸಮಯದಲ್ಲಿ ಫಲಿತಾಂಶ-ಆಧಾರಿತ ಕಲಿಕೆಯ ವಾತಾವರಣವನ್ನು ನೋಡುವುದು, ಅನುಭವಿಸುವುದು ಮತ್ತು ನಂಬುವುದು ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com