ನಮ್ಮ ಜೀವನವನ್ನೇ ಹಾಳು ಮಾಡಿದೆ, ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಕೈಬಿಡಿ: ರೈತರ ಆಗ್ರಹ

ಕರ್ನಾಟಕದ ಕಾಂಗ್ರೆಸ್ ಸರ್ಕಾರವು 73 ಕಿಮೀ ಪೆರಿಫೆರಲ್ ರಿಂಗ್ ರಸ್ತೆಗೆ (ಪಿಆರ್‌ಆರ್) ಹೆಚ್ಚಿನ ಆದ್ಯತೆ ನೀಡಲಿದೆ ಎಂಬ ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಯೋಜನೆಯನ್ನು ಕೈ ಬಿಡುವಂತೆ ರೈತರು ಆಗ್ರಹಿಸಿದ್ದಾರೆ.
ಫೆರಿಫೆರಲ್ ರಿಂಗ್ ರಸ್ತೆ (ಸಾಂದರ್ಭಿಕ ಚಿತ್ರ)
ಫೆರಿಫೆರಲ್ ರಿಂಗ್ ರಸ್ತೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು 73 ಕಿಮೀ ಪೆರಿಫೆರಲ್ ರಿಂಗ್ ರಸ್ತೆಗೆ (ಪಿಆರ್‌ಆರ್) ಹೆಚ್ಚಿನ ಆದ್ಯತೆ ನೀಡಲಿದೆ ಎಂಬ ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಯೋಜನೆಯನ್ನು ಕೈ ಬಿಡುವಂತೆ ರೈತರು ಆಗ್ರಹಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡಿಎ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಘೋಷಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ರಿಂಗ್ ರಸ್ತೆ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಲ್ಲಿ ಭಿನ್ನಾಭಿಪ್ರಾಯದ ಧ್ವನಿಗಳು ಬಲಗೊಳ್ಳುತ್ತಿವೆ. ಕಳೆದ 18 ವರ್ಷಗಳಿಂದ ಅವರ ಜಮೀನು ಸಮಸ್ಯೆಗಳು ಜಟಿಲಗೊಂಡಿರುವುದರಿಂದ, ಸರ್ಕಾರ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ನಂತರ, ಅವರು ಅದನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಅಥವಾ "ಸರಿಯಾದ" ಪರಿಹಾರದ ಕುರಿತು ಅವರೊಂದಿಗೆ ಒಮ್ಮತಕ್ಕೆ ಬರಲು ಬಿಡಿಎಗೆ ಸಾಧ್ಯವಾಗಿಲ್ಲ.

ಹೊಸೂರು ರಸ್ತೆಯಿಂದ ಆರಂಭಗೊಂಡು ತುಮಕೂರು ರಸ್ತೆ ಮತ್ತು ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಯೋಜನೆಯು ನಗರದ ಸುತ್ತಲೂ ವೃತ್ತವನ್ನು ರೂಪಿಸುತ್ತದೆ. ಇದೇ ಯೋಜನೆಯಲ್ಲಿ ರೈತರು ತಮ್ಮ ಭೂಮಿ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದು, ಇದು ರೈತರನ್ನು ತೀವ್ರವಾಗಿ ವಿಭಜಿಸಿದ್ದು, ಅದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಬಿಡಿಎ ಸೆಪ್ಟೆಂಬರ್ 2005 ರಲ್ಲಿ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿತ್ತು, ಆದರೆ 67 ಹಳ್ಳಿಗಳಲ್ಲಿ ಹರಡಿರುವ 1,810 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಯನ್ನು 2007 ರಲ್ಲಿ ಹೊರಡಿಸಲಾಯಿತು. ಎಂಜಿನಿಯರ್ ಆಗಿರುವ ಗೋಪಾಲ್ ಎಸ್ ರೆಡ್ಡಿ ಅವರು ತಮ್ಮ ತಂದೆಯ ಒಡೆತನದ ನಾಲ್ಕು ಎಕರೆ ಜಮೀನು ಕಳೆದುಕೊಳ್ವು ಭೀತಿಯಲ್ಲಿದ್ದು, ಅವರೇ ಹೇಳಿರುವಂತೆ ಸೂಲಿಕುಂಟೆ ಗ್ರಾಮಕ್ಕೆ ಭೂಮಿ ಸ್ವಾಧೀನ ಸೂಚನೆ ನೀಡಲಾಗಿದೆ. “ನಾವು ಇಲ್ಲಿ ಪುಷ್ಪ ಕೃಷಿಯಲ್ಲಿ ತೊಡಗಿದ್ದೇವೆ. ಆದಾಗ್ಯೂ, ನಮ್ಮ ಜಮೀನುಗಳನ್ನು PRR ಗಾಗಿ ಕಸಿದುಕೊಳ್ಳಲಾಗುವುದು ಎಂದು ಎಲ್ಲರಿಗೂ ತಿಳಿದಿರುವುದರಿಂದ ನಾವು ಅದನ್ನು ಕೃಷಿ ಸಾಲಗಳ ಮೂಲಕ ಪ್ರಮುಖ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಅಂತೆಯೇ ಪರಿಹಾರದ ತುರ್ತು ಕುರಿತು ವಿವರಿಸಿದ ರೆಡ್ಡಿ, ತನ್ನ ತಾಯಿ ಮಧುಮೇಹಿಯಾಗಿದ್ದು, ತುರ್ತಾಗಿ ಯಕೃತ್ತಿನ ಕಸಿ ಅಗತ್ಯವಿದೆ. ಬಿಡಿಎ ಕಾಯಿದೆಯ ಪ್ರಕಾರ ಐದು ವರ್ಷಗಳೊಳಗೆ ಯೋಜನೆ ಪೂರ್ಣಗೊಳಿಸದ ಕಾರಣ ಅದನ್ನು ಲ್ಯಾಪ್ಸ್ಡ್ (ತಪ್ಪಿದ ಯೋಜನೆ) ಎಂದು ಪರಿಗಣಿಸಬೇಕು ಎಂದು ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಾರುತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ರಾಜನ್ ಈ ಬಗ್ಗೆ ಮಾತನಾಡಿ, ‘ಯಲಹಂಕದ ವೆಂಕಟಾಲ ಗ್ರಾಮದಲ್ಲಿ ಒಟ್ಟು 105 ಮಂದಿ ಜಮೀನು ಕಳೆದುಕೊಂಡವರು ತಮ್ಮ ಜಮೀನನ್ನು ಪಿಆರ್‌ಆರ್‌ನಿಂದ ಹೊರಗಿಡುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು, ಏಕೆಂದರೆ ಪ್ರಾಥಮಿಕ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಹೇಳಿದ್ದಾರೆ.

PRR ಮೂಲಕ ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶವು ಈಗ ಅನಗತ್ಯವಾಗಿದೆ ಎಂದು ರಾಜನ್ ಅಭಿಪ್ರಾಯಪಟ್ಟಿದ್ದು, “ಎಸ್‌ಟಿಆರ್‌ಆರ್ ಯೋಜನೆಯು ಶೇಕಡಾ 60 ರಷ್ಟು ಪೂರ್ಣಗೊಂಡಿದೆ. ಕೋಗಿಲು ರಸ್ತೆ, ಜಕ್ಕೂರು ರಸ್ತೆ, ಬಾಗಲೂರು ರಸ್ತೆ ಮತ್ತು ರಾಜನಕುಂಟೆ ರಸ್ತೆಯನ್ನು ಅಗಲೀಕರಣಗೊಳಿಸಲಾಗಿದ್ದು, ಎರಡೂ ದಿಕ್ಕುಗಳಲ್ಲಿ ಟ್ರಾಫಿಕ್ ಪ್ರತ್ಯೇಕಿಸಿ, ಟ್ರಾಫಿಕ್ ಹೊರೆಯನ್ನು ಕಡಿಮೆ ಮಾಡಲಾಗಿದೆ. PRR ವೆಚ್ಚವೂ ಹಲವು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. 

ಅಂತೆಯೇ “ಪ್ರಾಥಮಿಕ ಅಧಿಸೂಚನೆಯ ಮೂಲಕ ನಮ್ಮ ಮನೆಯನ್ನು PRR ಗಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ತಿಳಿದಾಗ ನನ್ನ ತಾಯಿ ತುಂಬಾ ಅಸಮಾಧಾನಗೊಂಡರು ಮತ್ತು ಒಂದು ವರ್ಷದ ನಂತರ ನಿಧನರಾದರು. ಅದೇ ರೀತಿ ಅನೇಕ ಹಿರಿಯ ನಾಗರಿಕರು ಪರಿಹಾರಕ್ಕಾಗಿ ಕಾದು ಸಾವನ್ನಪ್ಪಿದ್ದಾರೆ' ಎಂದು ಹೇಳಿದರು. 

ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಬಿಡಿಎ
ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದು, PRR ಭೂಮಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದು KRRS (ಕರ್ನಾಟಕ ರಾಜ್ಯ ರೈತ ಸಂಘ) ನಾಯಕರು ಹೇಳಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಎನ್.ರಘು ಮಾತನಾಡಿ, ತಾವು ಮತ್ತು ಇತರ ಹಲವು ರೈತರು ಯೋಜನೆಯಿಂದ ತಮ್ಮ ಭೂಮಿ ಮೌಲ್ಯವನ್ನು ಹೆಚ್ಚಿಸಿರುವುದರಿಂದ ಸಂತೋಷವಾಗಿದೆ. "ನಾವು ಹೆಚ್ಚಿನ ಪರಿಹಾರವನ್ನು ಬಯಸುತ್ತೇವೆ. ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಕೇವಲ 3 ಕಿಮೀ ದೂರದಲ್ಲಿರುವ ನನ್ನ 2.1 ಎಕರೆ ಆಸ್ತಿಗೆ ಕಡಿಮೆ ಹಣ ಬಿಡಿಎ ಬಯಸಿದೆ. ಭೂಸ್ವಾಧೀನ ಕಾಯಿದೆ 2013 ಅನ್ನು ಅನುಸರಿಸಿದರೆ, ನಾನು ಹೆಚ್ಚಿನ ಹಣ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಜನವರಿ 20, 2022 ರಂದು ಸುಪ್ರೀಂ ಕೋರ್ಟ್ ಆದೇಶವು ಬಿಡಿಎಗೆ ಅಪಾರ ಪರಿಹಾರವನ್ನು ನೀಡಿತು ಮತ್ತು ಹಳೆಯ ಪರಿಹಾರ ಯೋಜನೆಯನ್ನು ಅನುಸರಿಸಲು ನಿರ್ದೇಶಿಸಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com