ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ ಘಟನೆ ಬಳಿಕ ಎಚ್ಚೆತ್ತ ರ‍್ಯಾಪಿಡೋ ಸಂಸ್ಥೆ: ನೈಟ್ ಚೆಕ್ ಸೇವೆ ಆರಂಭ!

ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರ‍್ಯಾಪಿಡೋ ಸಂಸ್ಥೆಯು, ಪ್ರಯಾಣಿಕರ ಸುರಕ್ಷತೆಗಾಗಿ ಇದೀಗ ನೈಟ್ ರೈಡ್ಸ್ ಚೆಕ್ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರ‍್ಯಾಪಿಡೋ ಸಂಸ್ಥೆಯು, ಪ್ರಯಾಣಿಕರ ಸುರಕ್ಷತೆಗಾಗಿ ಇದೀಗ ನೈಟ್ ರೈಡ್ಸ್ ಚೆಕ್ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ.

ಈ ಹೊಸ ಉಪಕ್ರಮದ ಅಡಿಯಲ್ಲಿ, ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ Rapido ಬಳಸುವ ಎಲ್ಲಾ ಸವಾರರಿಗೂ ಸಂಸ್ಥೆಯಿಂದ ದೂರವಾಣಿ ಕರೆಯೊಂದನ್ನು ಮಾಡಿ, ಸುರಕ್ಷತೆ ಕುರಿತು ಪರಿಶೀಲನೆ ನಡೆಸುವ ಕೆಲಸ ಮಾಡಲಾಗುತ್ತಿದೆ.

"Rapido ಸವಾರರ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡುತ್ತದೆ. ತಡರಾತ್ರಿಯ ಪ್ರಯಾಣದ ಸಮಸ್ಯೆಗಳನ್ನು ಪರಿಹರಿಸಲು, ನಾವು ಅಪ್ಲಿಕೇಶನ್‌ನಲ್ಲಿ ರಾತ್ರಿ ಸವಾರಿ ತಪಾಸಣೆ ಸೇವೆಯನ್ನು ಪರಿಚಯಿಸಿದ್ದೇವೆ. ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾಪಿಡೊ ಸೇವೆಗಳನ್ನು ಬಳಸುವ ರೈಡರ್‌ಗಳು ತಮ್ಮ ಸವಾರಿಯನ್ನು ಪೂರ್ಣಗೊಳಿಸಿದ ನಂತರ ರಾಪಿಡೊ ಕಾಲ್ ಸೆಂಟರ್‌ನಿಂದ ಸುರಕ್ಷತಾ ಚೆಕ್ ಕರೆಯನ್ನು ಸ್ವೀಕರಿಸುತ್ತಾರೆ. ನೈಟ್ ರೈಡ್ಸ್ ಚೆಕ್ ಹೆಚ್ಚುವರಿ ಸುರಕ್ಷತಾ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ.

ಸವಾರರಿಗೆ ತಡರಾತ್ರಿಯ ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆಗಳು, ಆತಂಕಗಳು ಇಲ್ಲದಂತೆ ಮಾಡಲು ಸೇವೆಯನ್ನು ನೀಡಲಾಗುತ್ತಿದೆ. ಈ ಸೇವೆಯು ಎಲ್ಲಾ ಸಮಯದಲ್ಲೂ ಸವಾರರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ Rapido ಬದ್ಧತೆಯನ್ನು ಒತ್ತಿಹೇಳುತ್ತದೆ ”ಎಂದು Rapido ನ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಅವರು ಹೇಳಿದ್ದಾರೆ.

ಆಟೋ ಚಾಲಕರಿಗೆ ಬೆಂಬಲ ನೀಡುವ ಉದ್ದೇಶದಿಂದ ಸೋಮವಾವರಷ್ಟೇ ರ‍್ಯಾಪಿಡೋ ಸಂಸ್ಥೆ ಆಟೋ ದೋಸ್ತ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com