ರಾಜ್ಯದಿಂದ ರಫ್ತು ಸೇವೆ ಹೆಚ್ಚಿಸಲು ಅಂಚೆ ಕಚೇರಿಯಿಂದ 60 ಡಾಕ್ ಕೇಂದ್ರ ಆರಂಭ

ರಾಜ್ಯದಿಂದ ರಫ್ತು ಹೆಚ್ಚಿಸಲು, ಕರ್ನಾಟಕ ಪೋಸ್ಟಲ್ ಸರ್ಕಲ್ ತನ್ನ ಎಲ್ಲಾ ಕೇಂದ್ರ ಕಚೇರಿಗಳು ಮತ್ತು ಕೆಲವು ಉಪ ಅಂಚೆ ಕಚೇರಿಗಳಲ್ಲಿ ಇನ್ನೂ 60 ರಫ್ತು ಸೌಲಭ್ಯ ಕೇಂದ್ರಗಳನ್ನು (ಡಾಕ್ ನಿರ್ಯತ್ ಕೇಂದ್ರಗಳು) ತೆರೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಿಂದ ರಫ್ತು ಹೆಚ್ಚಿಸಲು, ಕರ್ನಾಟಕ ಪೋಸ್ಟಲ್ ಸರ್ಕಲ್ ತನ್ನ ಎಲ್ಲಾ ಕೇಂದ್ರ ಕಚೇರಿಗಳು ಮತ್ತು ಕೆಲವು ಉಪ ಅಂಚೆ ಕಚೇರಿಗಳಲ್ಲಿ ಇನ್ನೂ 60 ರಫ್ತು ಸೌಲಭ್ಯ ಕೇಂದ್ರಗಳನ್ನು (ಡಾಕ್ ನಿರ್ಯತ್ ಕೇಂದ್ರಗಳು) ತೆರೆಯಲಿದೆ.

ಆಗಸ್ಟ್ 15 ರೊಳಗೆ ಈ ಎಲ್ಲಾ 60 ಕೇಂದ್ರಗಳನ್ನು ಆರಂಭಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಅಂಚೆ ಕಚೇರಿ ಹೊಂದಿದೆ. ಇಂತಹ ಹತ್ತು ಕೇಂದ್ರಗಳು ಪ್ರಸ್ತುತ ಬೆಂಗಳೂರಿನ ಚಾಮರಾಜಪೇಟೆ ಮತ್ತು ದೂರವಾಣಿ ನಗರದಲ್ಲಿ, ಮೈಸೂರಿನ ಸರಸ್ವತಿಪುರಂ, ಚನ್ನಪಟ್ಟಣದಲ್ಲಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಮತ್ತು ಬೀದರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಚಾಮರಾಜಪೇಟೆಯಲ್ಲಿ ರಫ್ತು ಕೇಂದ್ರ
“ಪ್ರತಿ ರಾಜ್ಯದಲ್ಲೂ ಇಂತಹ ಕೇಂದ್ರಗಳನ್ನು ಆರಂಭಿಸುವ ಪ್ರಯತ್ನದ ಭಾಗವಾಗಿ ಈಗ ರಾಜ್ಯದಲ್ಲೂ 60 ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇದು ತಯಾರಕರಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ನಮ್ಮ ಎಲ್ಲಾ 56 ಪ್ರಧಾನ ಅಂಚೆ ಕಚೇರಿಗಳು ಶೀಘ್ರದಲ್ಲೇ ಇಂತಹ ಕೇಂದ್ರವನ್ನು ಹೊಂದಲಿದ್ದು, ಅವುಗಳಲ್ಲಿ ಮೂರು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಕರ್ನಾಟಕದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ) ಎಸ್ ರಾಜೇಂದ್ರ ಕುಮಾರ್ ಅವರು ಬುಧವಾರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರಫ್ತು ಮಾಡಬೇಕಾದ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಮತ್ತು ಯಾವುದೇ ನಿರ್ಯತ್ ಕೇಂದ್ರದಲ್ಲಿ ಪಾರ್ಸೆಲ್‌ಗಳನ್ನು ಬುಕ್ ಮಾಡಬಹುದು. ಅವು 
ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದು ಬೆಂಗಳೂರಿಗೆ ಬರುತ್ತವೆ. "ಈ ಹಿಂದೆ, ವ್ಯಾಪಾರಿಗಳು ಬೆಂಗಳೂರಿಗೆ ಭೌತಿಕವಾಗಿ ಬರಲು ಸಿಬ್ಬಂದಿಯನ್ನು ನಿಯೋಜಿಸಬೇಕಾಗಿತ್ತು ಮತ್ತು ಅವರು ಅಂತರಾಷ್ಟ್ರೀಯ ರವಾನೆಗಳಿಗೆ ಕ್ಲಿಯರೆನ್ಸ್ ಪಡೆಯಬೇಕಾಗಿತ್ತು. ಇನ್ನು ಮುಂದೆ ಈ ರೀತಿ ಮಾಡುವ ಅಗತ್ಯವಿಲ್ಲ'' ಎಂದು ರಾಜೇಂದ್ರ ಕುಮಾರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com