ಸಿದ್ದರಾಮಯ್ಯ 14ನೇ ಬಜೆಟ್‌ಗೆ ವೇದಿಕೆ ಸಜ್ಜು, 3.35 ಲಕ್ಷ ಕೋಟಿ ರೂ ಬಜೆಟ್ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 14ನೇ ರಾಜ್ಯ ಬಜೆಟ್ ಮಂಡಿಸಲು ವೇದಿಕೆ ಸಿದ್ಧವಾಗಿದ್ದು, ಸುಮಾರು  3.35 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಲಿದ್ದಾರೆ.
ಸಿದ್ದರಾಮಯ್ಯ ಬಜೆಟ್
ಸಿದ್ದರಾಮಯ್ಯ ಬಜೆಟ್
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 14ನೇ ರಾಜ್ಯ ಬಜೆಟ್ ಮಂಡಿಸಲು ವೇದಿಕೆ ಸಿದ್ಧವಾಗಿದ್ದು, ಸುಮಾರು  3.35 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಲಿದ್ದಾರೆ.

ಜುಲೈ 7 ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 14ನೇ ಬಜೆಟ್ (Karnataka Budget 2023) ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದು, ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ( Congress ) ಘೋಷಿಸಿದ 'ಗ್ಯಾರಂಟಿ'ಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಇದೆಲ್ಲದರ ಹೊರತಾಗಿ ಬೆಂಗಳೂರು ಮಹಾನಗರದ ಅಭಿವೃದ್ಧಿ ಸಿದ್ದರಾಮಯ್ಯ ಆದ್ಯತೆ ನೀಡುತ್ತಾರೆಂದು ಎಂದು ನಿರೀಕ್ಷೆ ಮಾಡಲಾಗಿದೆ.

ಸಿದ್ದರಾಮಯ್ಯ ಅವರು ಈ ಬಜೆಟ್ ಮಂಡಿಸಿದ ನಂತರ ರಾಜ್ಯದ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 13 ಬಜೆಟ್ ಮಂಡಿಸಿದ್ದರು. ಈ ಬಜೆಟ್ ಸಿದ್ದರಾಮಯ್ಯ ಅವರಿಗೆ ಸವಾಲಿನದ್ದಾಗಿದೆ. ಕಾರಣ, ಕಾಂಗ್ರೆಸ್‌ ಘೋಷಿಸಿದ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಹಲವು ಜನಪರ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸುವ ಅವಶ್ಯಕತೆ ಇದೆ. ಐದು ಯೋಜನೆಗಳಿಗೆ ಸುಮಾರು 59,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರಸ್ತುತ ಬಜೆಟ್‌ನ ವೆಚ್ಚ 3.39 ಲಕ್ಷ ಕೋಟಿ ರೂಪಾಯಿ ಎಂದು ಸಿಎಂ ಹೇಳಿದ್ದಾರೆ.

ಆದರೆ ಮೇ ತಿಂಗಳ ವಿಧಾನಸಭೆ ಚುನಾವಣೆಗೆ ಮುನ್ನ ಅವರ ಕಾಂಗ್ರೆಸ್ ಪಕ್ಷವು ಭರವಸೆ ನೀಡಿದ ಐದು ಭರವಸೆಗಳನ್ನು ಜಾರಿಗೆ ತರಲು ಅವರು ಹೆಚ್ಚುವರಿ ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ.

ಈ ಬಗ್ಗೆ ಮಾತನಾಡಿರುವ ಐಐಎಂನ ಪ್ರೊ.ಸಂಕರ್ಶನ್ ಬಸು ಅವರು, 'ಹಣ ಎಲ್ಲಿಂದ ಬರುತ್ತದೆ ಮತ್ತು ಸರ್ಕಾರವು ಐದು ಖಾತರಿಗಳನ್ನು ಹೇಗೆ ಕಾರ್ಯಗತಗೊಳಿಸುತ್ತದೆ? ತೆರಿಗೆಗಳ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಸೀಮಿತ ಅವಕಾಶವಿದೆ. ಮತ್ತು ಒಂದು ಆಯ್ಕೆಯೆಂದರೆ ಹಿಂದಿನ ಕೆಲವು ಯೋಜನೆಗಳಿಗೆ ಹಣವನ್ನು ಕಡಿತಗೊಳಿಸುವುದು ಮತ್ತು ವೆಚ್ಚವನ್ನು ಮರುಪ್ರಾಧಾನ್ಯತೆ ಮಾಡುವುದು. ಮುಂದಿನ ಸಾಲಗಳಿಗೆ ಸೀಮಿತ ಆಯ್ಕೆ ಇದೆ. .ಕೇಂದ್ರದಿಂದ ಹೆಚ್ಚಿನ ಅನುದಾನಕ್ಕಾಗಿ ರಾಜ್ಯ ಸರಕಾರ ಹೋರಾಟ ನಡೆಸಬೇಕಿದೆ.ಕೇಂದ್ರದಿಂದ ಹಣ ಪಡೆಯುವಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು 1995 ರಲ್ಲಿ ಹಣಕಾಸು ಸಚಿವರಾಗಿ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದರು. ನಂತರ ಅವರು ಹಣಕಾಸು ಮತ್ತು ಬಜೆಟ್ ಜಗತ್ತಿಗೆ ಹೊಸಬರಾಗಿದ್ದರೂ ವಿತ್ತೀಯ ವಿಚಾರದಲ್ಲಿ ಪಳಗಿದ ಅಂದಿನ ಹಣಕಾಸು ಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ ಮತ್ತು ವಾಣಿಜ್ಯ ತೆರಿಗೆ ಆಯುಕ್ತ ಕೆ.ಜೈರಾಜ್ ಅವರನ್ನು ಭೇಟಿಯಾಗುತ್ತಿದ್ದರು. 

ಈ ಬಗ್ಗೆ ಮಾತನಾಡಿರುವ ಜೈರಾಜ್ ಅವರು, 'ನಾವು ಸುಮಾರು 10-11 ಅಧಿವೇಶನಗಳನ್ನು ಹೊಂದಿದ್ದೇವೆ ಮತ್ತು ಸಿದ್ದರಾಮಯ್ಯ ಅವರು ಶೀಘ್ರವಾಗಿ ಕಲಿಯುವವರಾಗಿದ್ದರು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್ ತಯಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ, ಸಮಯ ನೀಡುತ್ತಾರೆ ಮತ್ತು ಪ್ರಯತ್ನ ಮತ್ತು ವಿವರಗಳನ್ನು ಪಡೆಯುತ್ತಾರೆ. ಸಿದ್ದರಾಮಯ್ಯ ಅವರು ಪ್ರಾಮಾಣಿಕರು, ಸಾಂದರ್ಭಿಕ ಘೋಷಣೆಗಳನ್ನು ಇಷ್ಟಪಡುವುದಿಲ್ಲ, ಈ ಬಾರಿಯ ಬಜೆಟ್ ಸವಾಲಾಗಿದ್ದು, ಅದನ್ನು ದಿಟ್ಟತನದಿಂದ ಎದುರಿಸುತ್ತಾರೆ ಎಂದು ಕೆಲವು ದಿನಗಳ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಐಎಸ್ಎನ್ ಪ್ರಸಾದ್ ಹೇಳಿದ್ದಾರೆ. 

ಇದೇ ವೇಳೆ ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿರುವಂತೆ, ''ಸಿದ್ದರಾಮಯ್ಯ ಅವರು ಶ್ರೀ ಬಸವಣ್ಣನವರ ಕಾಯಕ, ದಾಸೋಹಕ್ಕೆ ಒತ್ತು ನೀಡಿದ್ದಾರೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ಕೌಶಲ್ಯಾಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. 85 ರಷ್ಟಿರುವ ಅಹಿಂದ ಮತ್ತು ಶೂದ್ರ ಸಮುದಾಯಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಅವರ ಬಜೆಟ್ ಹಂಚಿಕೆ ಬಸವಣ್ಣನವರ ಸರ್ವರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com