ಸುದೀರ್ಘ ಕಾನೂನು ಹೋರಾಟದಲ್ಲಿ ಗೆದ್ದ ಬಿಡಿಎ; ಬಿಟಿಎಂ ಲೇಔಟ್‌ನಲ್ಲಿ 26 ಗುಂಟೆ ಸ್ವಾಧೀನಕ್ಕೆ

ನ್ಯಾಯಾಲಯದಲ್ಲಿ ನಡೆಸಿದ ಸುದೀರ್ಘ ಕಾನೂನು ಹೋರಾಟದಲ್ಲಿ ಬಿಡಿಎ ಗೆಲುವು ಸಾಧಿಸಿದೆ. ಈ ಮೂಲಕ ಬಿಟಿಎಂ ಲೇಔಟ್ 4ನೇ ಹಂತದಲ್ಲಿ 33 ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಳ್ಳಲು ಸೂಚನೆ ನೀಡಿದ್ದ 26 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.  
ಬಿಡಿಎ
ಬಿಡಿಎ
Updated on

ಬೆಂಗಳೂರು: ನ್ಯಾಯಾಲಯದಲ್ಲಿ ನಡೆಸಿದ ಸುದೀರ್ಘ ಕಾನೂನು ಹೋರಾಟದಲ್ಲಿ ಬಿಡಿಎ ಗೆಲುವು ಸಾಧಿಸಿದೆ. ಈ ಮೂಲಕ ಬಿಟಿಎಂ ಲೇಔಟ್ 4ನೇ ಹಂತದಲ್ಲಿ 33 ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಳ್ಳಲು ಸೂಚನೆ ನೀಡಿದ್ದ 26 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಆಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ 32 ಕೋಟಿ ರೂ. ಆಗಿದೆ.

ದೇವರಚಿಕ್ಕನಹಳ್ಳಿಯಲ್ಲಿರುವ ಆಸ್ತಿಯನ್ನು ಶೀಘ್ರದಲ್ಲಿಯೇ ಸ್ವಾಧೀನಪಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಬಿಡಿಎ ಆಯುಕ್ತ ಕುಮಾರ್ ನಾಯಕ್ ತಿಳಿಸಿದ್ದಾರೆ. 

ಬಿಡಿಎ ಒಂದು ಎಕರೆ ಮತ್ತು 12 ಗುಂಟೆಯನ್ನು ಸ್ವಾಧೀನಪಡಿಸಿಕೊಂಡಾಗ 1990 ರ ನವೆಂಬರ್‌ನಿಂದ ಈ ಸಮಸ್ಯೆ ಪ್ರಾರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಇಬ್ಬರು ಪ್ರತ್ಯೇಕ ವ್ಯಕ್ತಿಗಳು 26 ಗುಂಟೆಗಳಿಗೆ ಹಕ್ಕು ಸಲ್ಲಿಸಿದರು ಮತ್ತು ಈ ವಿಷಯವನ್ನು ಹೈಕೋರ್ಟ್‌ಗೆ ಕೊಂಡೊಯ್ದರು. ಇದರಿಂದ ಬಿಡಿಎ ಸ್ವಾಧೀನ ಕೈತಪ್ಪಿತ್ತು. 

2016ರಲ್ಲಿ ಕೃಷ್ಣಾ ರೆಡ್ಡಿ ಎಂಬ ವ್ಯಕ್ತಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಈ ಸಂಬಂಧ ಆಗಸ್ಟ್ 5, 2019 ರಂದು ಹೈಕೋರ್ಟ್ ಪ್ರಕರಣದ ಕುರಿತು ತೀರ್ಪು ನೀಡಿತು. ಆದರೆ, ನ್ಯಾಯಾಲಯವು ಈ ಪ್ರಶ್ನಾರ್ಹ ಭೂಮಿಯನ್ನು ಕೈಬಿಡಲಾಗಿದೆ ಎಂದು ಘೋಷಿಸಿತು ಮತ್ತು ಆದ್ದರಿಂದ ಅದು ಲ್ಯಾಪ್ಸ್ ಆಯಿತು. ಏಕೆಂದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆ ಭೂಮಿಗೆ ಸಂಬಂಧಿಸಿದ ಸಾಕಷ್ಟು ದಾಖಲೆಗಳು ಅಥವಾ ಪುರಾವೆಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ.

ಈ ತೀರ್ಪಿನ ವಿರುದ್ಧ ಬಿಡಿಎ 2021 ರಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಮೇಲ್ಮನವಿ ಸಲ್ಲಿಸಿತು ಮತ್ತು ದಾಖಲೆಗಳನ್ನು ನೀಡಿತು. ಆದರೆ, ಸೆಪ್ಟೆಂಬರ್ 9, 2022 ರಂದು ಹೈಕೋರ್ಟ್ ಈ ಮನವಿಯನ್ನು ವಜಾಗೊಳಿಸಿತು. ಈಮಧ್ಯೆ, ಮತ್ತೋರ್ವ ಹುಚ್ಚಮ್ಮ ಎಂಬುವವರು ಬಿಡಿಎ ಸ್ವಾಧೀನದ ವಿರುದ್ಧ ಸೆಪ್ಟೆಂಬರ್ 2017 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ, ಕೋರ್ಟ್ ಇದೇ ರೀತಿಯ ತೀರ್ಪು ನೀಡಿತು.

'ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಡಿಎ ನವೆಂಬರ್ 11, 2019 ರಂದು ಮೇಲ್ಮನವಿ ಸಲ್ಲಿಸಿತು. ಆದಾಗ್ಯೂ, ನ್ಯಾಯಾಲಯವು ಮೇಲ್ಮನವಿ ಸಲ್ಲಿಸಲು 743 ದಿನಗಳ ವಿಳಂಬ ಮಾಡಲಾಗಿದೆ ಎಂದು ಅದನ್ನು ವಜಾಗೊಳಿಸಿದೆ' ಎಂದು ಅಧಿಕಾರಿ ಹೇಳಿದರು. 

ಬಳಿಕ ಪಟ್ಟು ಬಿಡದ ಬಿಡಿಎ ಈ ಪ್ರಕರಣವನ್ನು ಮುಂದುವರಿಸಿತು ಮತ್ತು ಇತ್ತೀಚೆಗೆ ಎಲ್ಲಾ ದಾಖಲೆಗಳೊಂದಿಗೆ ಹೈಕೋರ್ಟ್‌ಗೆ ಸಲ್ಲಿಕೆಯನ್ನು ಸಲ್ಲಿಸಿತು. ಕಳೆದ ವಾರ ನ್ಯಾಯಾಲಯ ಸ್ವಾಧೀನಕ್ಕೆ ಒಪ್ಪಿಗೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com