ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಫಲಶ್ರುತಿ: ಕೊನೆಗೂ ಎಂಎಂ ಹಿಲ್ಸ್ ಹಳ್ಳಿಗಳಿಗೆ ಧಾವಿಸಿದ 'ಅನ್ನಭಾಗ್ಯ'!

ಚಾಮರಾಜನಗರ ಜಿಲ್ಲೆಯ ನಾಗಮಲೆ ಹಾಗೂ ಎಂ.ಎಂ. ಹಿಲ್ಸ್‌ ಸಮೀಪದ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಶುಕ್ರವಾರ ಆಹಾರಧಾನ್ಯ ಮತ್ತು ಇತರ ಅಗತ್ಯ ವಸ್ತುಗಳನ್ನು ರವಾನಿಸಿದರು.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮೈಸೂರು: ಚಾಮರಾಜನಗರ ಜಿಲ್ಲೆಯ ನಾಗಮಲೆ ಹಾಗೂ ಎಂ.ಎಂ. ಹಿಲ್ಸ್‌ ಸಮೀಪದ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಶುಕ್ರವಾರ ಆಹಾರಧಾನ್ಯ ಮತ್ತು ಇತರ ಅಗತ್ಯ ವಸ್ತುಗಳನ್ನು ರವಾನಿಸಿದರು.

ಕಳಪೆ ರಸ್ತೆ ಸಂಪರ್ಕದಿಂದಾಗಿ ಬುಡಕಟ್ಟು ಕುಟುಂಬಗಳಿಗೆ ಅನ್ನ ಭಾಗ್ಯ ಯೋಜನೆಯ ಪ್ರಯೋಜನಗಳು ತಲುಪುತ್ತಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಟಿಸಿದ ಒಂದು ದಿನದ ನಂತರ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

ಅವರು ಸರಕು ವಾಹನವನ್ನು ಬಾಡಿಗೆಗೆ ಪಡೆದು ದೂರದ ಹಳ್ಳಿಗಳಿಗೆ ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಕಳುಹಿಸಿದರು. ಈ ವೇಳೆ 40ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು.

ಗುರುವಾರ ಪ್ರಕಟವಾದ ‘ಎಂಎಂ ಹಿಲ್ಸ್‌ನ ಆದಿವಾಸಿಗಳಿಗೆ ರಸ್ತೆ ಇಲ್ಲ, ಅನ್ನಭಾಗ್ಯ ಇಲ್ಲ’ ಎಂಬ ವರದಿಯು ಎಂಎಂ ಬೆಟ್ಟದ ಮೇಲಿನ ಹಳ್ಳಿಗಳಲ್ಲಿ ವಾಸಿಸುವ ಆದಿವಾಸಿಗಳ ದುಃಸ್ಥಿತಿಯನ್ನು ಎತ್ತಿ ತೋರಿಸಿದೆ. 

ಪುದೂರಿನಿಂದ ನಾಗಮಲೆವರೆಗಿನ ಏಕೈಕ ರಸ್ತೆ ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಡಾಂಬರೀಕರಣಕ್ಕೆ ಅವಕಾಶ ನೀಡದ ಕಾರಣ ದಯನೀಯ ಸ್ಥಿತಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com