ಹುಣಸೂರು: ಬೈಕ್'ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ ನಡೆಸಿದ್ದು, ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ಮಹಿಳೆಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಣಸೂರು ತಾಲೂಕಿನ ಗೊಮ್ಮಟಗಿರಿ ಬೆಟ್ಟದ ರಸ್ತೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಣಸೂರು: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ ನಡೆಸಿದ್ದು, ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ಮಹಿಳೆಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಣಸೂರು ತಾಲೂಕಿನ ಗೊಮ್ಮಟಗಿರಿ ಬೆಟ್ಟದ ರಸ್ತೆಯಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಹಳೆ ಬೀಡು ಗ್ರಾಮದ ಶಿವಕುಮಾರ್ ಪತ್ನಿ ಸವಿತಾ ಗಾಯಗೊಂಡವರು.

ಮೇಗಳಾಪುರದಿಂದ ರಟ್ನಳ್ಳಿ ಮಾರ್ಗವಾಗಿ ಸ್ವಗ್ರಾಮ ಹಳೇಬೀಡು ಗ್ರಾಮಕ್ಕೆ ಶಿವಕುಮಾರ್, ತಮ್ಮ ಬೈಕಿನಲ್ಲಿ ಪತ್ನಿ ಸವಿತಾ ಹಾಗೂ ಮಗಳೊಂದಿಗೆ ಗುರುವಾರ ರಾತ್ರಿ ತೆರಳುತ್ತಿದ್ದರು. ಈ ವೇಳೆ ಗೊಮ್ಮಟಗಿರಿ ಬಳಿಯ ತಿರುವಿನಲ್ಲಿ ಚಿರತೆ ಇದ್ದಕ್ಕಿದ್ದಂತೆ ದಾಳಿ ನಡೆಸಿದೆ.

ಈ ವೇಳೆ ನಿಯಂತ್ರಣ ತಪ್ಪಿದ ಮೂವರೂ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಸವಿತಾ ಅವರಿಗೆ ಗಾಯಗೊಂಡಿದ್ದಾರೆ. ಬಳಿಕ ದಾರಿ ಹೋಕರು ಬಿಳಿಕೆರೆ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com