ನಿಮ್ಮ ಮೊಬೈಲ್ ಸಂಖ್ಯೆಗಳನ್ನು ರೈಡರ್‌ಗಳೊಂದಿಗೆ ಹಂಚಿಕೊಳ್ಳಬೇಡಿ: ಬಳಕೆದಾರರಿಗೆ ರ‍್ಯಾಪಿಡೋ ಮನವಿ

ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ನಂತರ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರ‍್ಯಾಪಿಡೋ ತನ್ನ ಗ್ರಾಹಕರಿಗೆ ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ವೇಳೆ ತಮ್ಮ ಮೊಬೈಲ್ ಸಂಖ್ಯೆಯನ್ನು ಸವಾರರೊಂದಿಗೆ ಹಂಚಿಕೊಳ್ಳದಂತೆ ಮನವಿ ಮಾಡಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ನಂತರ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರ‍್ಯಾಪಿಡೋ ತನ್ನ ಗ್ರಾಹಕರಿಗೆ ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ವೇಳೆ ತಮ್ಮ ಮೊಬೈಲ್ ಸಂಖ್ಯೆಯನ್ನು ಸವಾರರೊಂದಿಗೆ ಹಂಚಿಕೊಳ್ಳದಂತೆ ಮನವಿ ಮಾಡಿದೆ. 

ಸಂತ್ರಸ್ತೆ, ಅತಿರಾ ಪುರುಷೋತ್ತಮನ್ ಅವರಿಗೆ ಕ್ಷಮೆಯಾಚಿಸಿರುವ ಕಂಪನಿಯ ಪ್ರತಿನಿಧಿಗಳು, ಶುಕ್ರವಾರ ನಡೆದ ಲೈಂಗಿಕ ಕಿರುಕುಳ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿ ಸವಾರನನ್ನು ವೇದಿಕೆಯಿಂದ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.

ಅಲ್ಲದೆ, ತಾವು ಬುಕ್ ಮಾಡಿದ ವಾಹನ ಮತ್ತು ರೈಡರ್ ಆ್ಯಪ್‌ನಲ್ಲಿರುವ ವಿವರಗಳೊಂದಿಗೆ ಹೊಂದಿಕೆಯಾಗದಿದ್ದರೆ, ಅಂತಹ ಬೈಕ್ ಟ್ಯಾಕ್ಸಿಯಲ್ಲಿ ಸವಾರಿ ಮಾಡದಂತೆ ಗ್ರಾಹಕರಿಗೆ ಸಲಹೆ ನೀಡಿರುವ ಪ್ರತಿನಿಧಿಗಳು, 'ಈ ಅಗತ್ಯ ಕ್ರಮದಿಂದಾಗಿ ಗ್ರಾಹಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಕ್ಯಾಪ್ಟನ್ ಮತ್ತು ವಾಹನದ ವಿವರಗಳು ನಿಖರವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನೆರವಾಗುತ್ತದೆ. ಅಂತಹ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ' ಎಂದಿದ್ದಾರೆ.

ಎಲ್ಲಾ ಮಾತುಕತೆಗಳು ಸುರಕ್ಷಿತ ಮೂರನೇ ವ್ಯಕ್ತಿಯ ಕರೆ (ಮಾಸ್ಕಿಂಗ್ ಸೇವೆ) ಮೂಲಕ ಎರಡೂ ಕಡೆ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಹೀಗಾಗಿ, ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಳ್ಳಬೇಕಾಗಿಲ್ಲ ಎಂದು ಪ್ರತಿನಿಧಿ ಹೇಳಿದರು. ಇತ್ತೀಚಿನ ಪ್ರಕರಣದಲ್ಲಿ ಸಂಭವಿಸಿದಂತೆ, ಸವಾರ ಮತ್ತು ಬೈಕ್ ನಡುವೆ ಹೊಂದಾಣಿಕೆಯಾಗದಿದ್ದರೆ ಅಂತಹ ಪ್ರಯಾಣವನ್ನು ಮುಂದುವರಿಸಬೇಡಿ ಎಂದು ಕಂಪನಿಯು ಗ್ರಾಹಕರನ್ನು ಕೇಳಿದೆ.

'ನಮ್ಮ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳುವ ಎಲ್ಲಾ ಬೈಕ್ ರೈಡರ್‌ಗಳಿಗೆ ನಾವು ಕಟ್ಟುನಿಟ್ಟಾದ ಹಿನ್ನೆಲೆ ಪರಿಶೀಲನೆಗಳನ್ನು ನಡೆಸುತ್ತೇವೆ. ಈ ತಪಾಸಣೆಗಳನ್ನು ಯಾವುದೇ ತೊಂದರೆಯಿಲ್ಲವೆಂದು ಖಾತ್ರಿಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಮತ್ತು ಪರಿಶೀಲನೆಯಲ್ಲಿ ನಂಬಲರ್ಹ ವ್ಯಕ್ತಿಗಳು ಮಾತ್ರ ರ‍್ಯಾಪಿಡೋ ಕ್ಯಾಪ್ಟನ್ (ರೈಡರ್‌ಗಳು) ಆಗುತ್ತಾರೆ ಎಂದು ಖಚಿತಪಡಿಸಿಕೊಳ್ಳಲಾಗಿದೆ' ಎಂದು ಪ್ರತಿನಿಧಿ ಹೇಳಿದರು.

ಇದೇ ವೇಳೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸುವ ಮೂಲಕ ಕ್ಷಿಪ್ರ ಕ್ರಮ ಕೈಗೊಂಡಿರುವ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಸಂತ್ರಸ್ಥೆ ಅತಿರಾ, ಇಂತಹ ಘಟನೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಮಹಿಳೆಯರಿಗೆ ಆಶಾದಾಯಕವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com