ಕ್ಯಾಬ್ ಡ್ರೈವರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಮಹಿಳೆ; ಆಕೆಯ ಸ್ನೇಹಿತರು ಧೂಮಪಾನ ಮಾಡುತ್ತಿದ್ದರು ಎಂದ ಚಾಲಕ!

ಖಾಸಗಿ ಕಂಪನಿಯೊಂದರ 25 ವರ್ಷದ ವ್ಯಾಪಾರ ವಿಶ್ಲೇಷಕರೊಬ್ಬರು ಕ್ಯಾಬ್ ಚಾಲಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದು, ಅದೇ ಮಹಿಳೆಯ ವಿರುದ್ಧ ಕ್ಯಾಬ್ ಚಾಲಕ ಕಾರಿನಲ್ಲಿ ಧೂಮಪಾನ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ಕಂಪನಿಯೊಂದರ 25 ವರ್ಷದ ವ್ಯಾಪಾರ ವಿಶ್ಲೇಷಕರೊಬ್ಬರು ಕ್ಯಾಬ್ ಚಾಲಕನ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದು, ಅದೇ ಮಹಿಳೆಯ ವಿರುದ್ಧ ಕ್ಯಾಬ್ ಚಾಲಕ ಕಾರಿನಲ್ಲಿ ಧೂಮಪಾನ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕೋರಮಂಗಲ 1ನೇ ಬ್ಲಾಕ್‌ನ ಕೇಂದ್ರೀಯ ಸದನ ರಸ್ತೆಯಲ್ಲಿ ಚಾಲಕ ತನಗೆ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದು, ಇದಕ್ಕೆ ಉತ್ತರವಾಗಿ ಚಾಲಕ ಕೂಡ ಮಹಿಳೆ ಮತ್ತು ಆಕೆಯ ಮೂವರು ಸ್ನೇಹಿತರು ತನ್ನ ಕಾರಿನೊಳಗೆ ಧೂಮಪಾನ ಮಾಡುತ್ತಿದ್ದರು. ಇದನ್ನು ಆಕ್ಷೇಪಿಸಿದ್ದಕ್ಕಾಗಿ ಅವರು ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಚಾಲಕನನ್ನು ವೈಟ್‌ಫೀಲ್ಡ್‌ನ ಸೀತಾರಾಮಪಾಳ್ಯದ ಎಚ್‌ ರಾಮಾಂಜನೇಯ (34 ವರ್ಷ) ಎಂದು ಗುರುತಿಸಲಾಗಿದ್ದು, ಮಹಿಳೆ ಮತ್ತು ಚಾಲಕನಿಂದ ಮಡಿವಾಳ ಪೊಲೀಸರು ದೂರು ಮತ್ತು ಪ್ರತಿದೂರು ದಾಖಲಿಸಿಕೊಂಡಿದ್ದಾರೆ. ಕಳೆದ ಗುರುವಾರ ನಸುಕಿನ 1 ರಿಂದ 1.15 ರ ನಡುವೆ ಈ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ ಸ್ನೇಹಿತರು ಮಧ್ಯರಾತ್ರಿ 12.44 ರ ಸುಮಾರಿಗೆ ಇಂದಿರಾನಗರದಿಂದ ಬಿಟಿಎಂ ಲೇಔಟ್ 2ನೇ ಸ್ಟೇಜ್ ಗೆ ಕ್ಯಾಬ್ ಬುಕ್ ಮಾಡಿದ್ದರು. ಹೀಗಾಗಿ ಅವರನ್ನು ಕರೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಪ್ರಯಾಣಿಕರು ಕಾರಿನೊಳಗೆ ಧೂಮಪಾನ ಮಾಡಲು ಪ್ರಯತ್ನಿಸಿದರು. ಈ ವೇಳೆ ಚಾಲಕ ರಾಮಾಂಜನೇಯ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಾಗ ಇಬ್ಬರೂ ಚಾಲಕನನ್ನು ಥಳಿಸಿದ್ದಾರೆ ಎಂದು ಚಾಲಕ ಆರೋಪಿಸಿದ್ದಾನೆ.

'ಅವರೆಲ್ಲರೂ ಕುಡಿದು ಸಿಗರೇಟ್ ಸೇದಲು ಬಯಸಿದ್ದರು. ಮುಂದಿನ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ನಾನು ಅವರಿಗೆ ಧೂಮಪಾನ ಮಾಡಲು ಅವಕಾಶ ನೀಡಲಿಲ್ಲ. ಅವರು ನನ್ನನ್ನು ನಿಂದಿಸಲು ಪ್ರಾರಂಭಿಸಿದರು, ನಂತರ ನಾನು ಕಾರನ್ನು ನಿಲ್ಲಿಸಿ ಚಾಲನೆ ಮಾಡಲಿಲ್ಲ. ಆ ಮೂಲಕ ಹೋಗುತ್ತಿದ್ದ ಆಟೋ ಚಾಲಕನೊಬ್ಬ ಅವರನ್ನು ಪ್ರಶ್ನಿಸಲು ಆರಂಭಿಸಿ, ಸರಿಯಾಗಿ ನಡೆದುಕೊಳ್ಳುವಂತೆ ಕೇಳಿದ್ದಾನೆ. ನಿಂದಿಸಲು ಮುಂದಾದಾಗ ಆಟೋ ಚಾಲಕನ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆಟೋ ಚಾಲಕ ಯಾರೆಂದು ನನಗೆ ಗೊತ್ತಿಲ್ಲ. ಮಹಿಳೆ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಅವರಲ್ಲಿ ನಾಲ್ವರು ಇದ್ದರು. ನಾನು ಅವರ ವಿರುದ್ಧ ಪ್ರತಿದೂರು ದಾಖಲಿಸಿದ್ದೇನೆ ಎಂದು ಚಾಲಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇನ್ನು ಇದಕ್ಕೆ ತದ್ವಿರುದ್ಧ ಎಂಬಂತೆ ಮಹಿಳೆ ಕೂಡ ಪ್ರತಿ ದೂರು ಸಲ್ಲಿಕೆ ಮಾಡಿದ್ದು, ಚಾಲಕ ತನಗೆ ಲೈಂಗಿಕ ಕಿರುಕುಳ ನೀಡಿದ ನಂತರ ಸ್ನೇಹಿತರು ಜಗಳವಾಡಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಚಾಲಕ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಆಕೆಯ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ-ಬೀಟ್ ಗಸ್ತು ಪೊಲೀಸರು ಅವರು ಜಗಳವಾಡುವುದನ್ನು ಕಂಡು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಎನ್ನಲಾಗಿದೆ.
 
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಚಾಲಕನ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ಚಾಲಕನ ಪ್ರತಿದೂರಿನ ಆಧಾರದ ಮೇಲೆ, ಪೊಲೀಸರು ಮಹಿಳೆಯ ಸ್ನೇಹಿತರ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು ಮತ್ತು ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ. “ಪ್ರಕರಣವು ತನಿಖೆಯಲ್ಲಿದೆ. ಯಾವುದೇ ಬಂಧನವಾಗಿಲ್ಲ.. ಮಡಿವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ'' ಎಂದು ಅಧಿಕಾರಿಯೊಬ್ಬರು ತಿಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com