ಜುಲೈ 29 ರಂದು ಮೊಹರಂ: ಜನರಿಗೆ ತೊಂದರೆಯಾಗದಂತೆ ಆಚರಿಸಲು ಯುವಕರಿಗೆ ಸಮುದಾಯದ ಮುಖಂಡರ ಕರೆ

ಜುಲೈ 29 ರಂದು ಮೊಹರಂ ಆಚರಿಸಲಾಗುತ್ತಿದ್ದು, ಇತರ ನಾಗರಿಕರಿಗೆ ತೊಂದರೆ ಅಥವಾ ನೋಯಿಸುವ ಯಾವುದೇ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಸಮುದಾಯದ ಸದಸ್ಯರಿಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜುಲೈ 29 ರಂದು ಮೊಹರಂ ಆಚರಿಸಲಾಗುತ್ತಿದ್ದು, ಇತರ ನಾಗರಿಕರಿಗೆ ತೊಂದರೆ ಅಥವಾ ನೋಯಿಸುವ ಯಾವುದೇ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಸಮುದಾಯದ ಸದಸ್ಯರಿಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.

ರಸ್ತೆ ತಡೆ, ಡಿಜೆ ಸೆಟ್‌ ಹಾಕುವುದು, ರ್ಯಾಲಿ, ಸಂಭ್ರಮಾಚರಣೆ ಮಾಡುವುದನ್ನು ತಪ್ಪಿಸಬೇಕು ಎಂದು ಪ್ರಬಲ ಸಂದೇಶ ರವಾನಿಸಿದ್ದಾರೆ,

ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನ ಮಸೀದಿಯ ಕಾಬಾದ ಪ್ರತಿಕೃತಿಗಳನ್ನು ಬಳಸದಂತೆ ಸಮುದಾಯದ ಸದಸ್ಯರಿಗೆ ತಿಳಿಸಲು ಬೆಂಗಳೂರಿನ ಎಲ್ಲಾ ಮಸೀದಿಗಳಿಗೆ ಸಂದೇಶವನ್ನು ಕಳುಹಿಸಲಾಗಿದೆ ಎಂದು ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮುಖ್ಯ ಅರ್ಚಕ (ಸುನ್ನಿ ಪಂಗಡ) ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.

ಡಿಜೆ ಸೆಟ್‌ಗಳ ಬಳಕೆ, ಡ್ರಮ್ ಬಾರಿಸುವುದು, ರ್ಯಾಲಿಗಳು, ನೃತ್ಯ ಮತ್ತು ಘೋಷಣೆಗಳನ್ನು ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ, ಇದರಿಂದ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗುತ್ತದೆ. ಯುವಕರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಮುದಾಯದವರಲ್ಲಿ ಮನವಿ ಮಾಡುತ್ತಿರುವುದಾಗಿ ರಶಾದಿ ಹೇಳಿದ್ದಾರೆ.

ರಿಚ್ಮಂಡ್ ರಸ್ತೆಯ ಜಾನ್ಸನ್ ಮಾರ್ಕೆಟ್ ನಡುವೆ ಹೊಸೂರು ರಸ್ತೆಯ ಸ್ಮಶಾನದವರೆಗೆ ಸಾಂಪ್ರದಾಯಿಕ  ಮೆರವಣಿಗೆಗೆ ಶಿಯಾ ಸಮುದಾಯದ ಮುಖಂಡರು ಈಗಾಗಲೇ ಅನುಮತಿ ಪಡೆದಿದ್ದಾರೆ. ನಾವು ಕರ್ಬಲಾ ಮೈದಾನದಲ್ಲಿ  ಹುತಾತ್ಮ ಹಜರತ್ ಹುಸೇನ್ ಅವರರಿಗೆ ಸಂತಾಪ ಸೂಚಿಸಲು ಸಾಂಪ್ರದಾಯಿಕ ರ್ಯಾಲಿಯನ್ನು ನಡೆಸುತ್ತೇವೆ. ಎಂದಿದ್ದಾರೆ.

ಯುವಕರ ಗಮನ ಶಿಕ್ಷಣ, ಆರೋಗ್ಯ ಮತ್ತು ಶಾಂತಿಯತ್ತ ಗಮನ ಹರಿಸುವುದಾಗಿದೆ ಎಂದು ಅಂಜುಮನ್-ಎ-ಇಮಾಮಿಯಾ (ಶಿಯಾ ಪ್ರತಿನಿಧಿ ಸಂಸ್ಥೆ) ಸದಸ್ಯ ಬಖರ್ ಅಬ್ಬಾಸ್ ಅಬಿದ್ ಹೇಳಿದರು. ಮೆರವಣಿಗೆಯು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಿ ಜುಲೈ 29 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com