ದುರಂತ ಅಂತ್ಯ: ಮೈಸೂರಿನಲ್ಲಿ ಅಪಘಾತಕ್ಕೀಡಾದವರನ್ನು ರಕ್ಷಿಸಲು ಹೋಗಿ ಆಟೋ ಚಾಲಕ ಸೇರಿ ಇಬ್ಬರ ದುರ್ಮರಣ!

ಮೈಸೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲು ಹೋದ ಆಟೋ ಚಾಲಕ ಸೇರಿದಂತೆ ಇಬ್ಬರು ವ್ಯಕ್ತಿಗಳು ಇಂದು ಮಂಡವಾಡಿ ರಸ್ತೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಅಪಘಾತದ ದೃಶ್ಯ
ಅಪಘಾತದ ದೃಶ್ಯ
Updated on: 

ಮೈಸೂರು: ಮೈಸೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲು ಹೋದ ಆಟೋ ಚಾಲಕ ಸೇರಿದಂತೆ ಇಬ್ಬರು ಇಂದು ಮಂಡವಾಡಿ ರಸ್ತೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.

ಮೃತರನ್ನು ಅಶೋಕಪುರಂ ನಿವಾಸಿಗಳಾದ 37 ವರ್ಷದ ಕಿರಣ್ ಮತ್ತು 33 ವರ್ಷದ ರವಿಕುಮಾರ್ ಎಂದು ಗುರುತಿಸಲಾಗಿದೆ. ಮಾನಂದವಾಡಿ ರಸ್ತೆಯಲ್ಲಿ ನಾಚನಹಳ್ಳಿಪಾಳ್ಯದಿಂದ ಬರುತ್ತಿದ್ದ ರವಿ ಎಂಬಾತ ಚಲಾಯಿಸುತ್ತಿದ್ದ ಎಸ್‌ಯುವಿ ಹೈವೋಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಕಂಬ ಮತ್ತು ಕಾಂಪೌಂಡ್ ಗೋಡೆಯ ನಡುವೆ ಸಿಲುಕಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಕಾರಿನಲ್ಲಿದ್ದವರು ಇಳಿದು ಕಾರಿನ ಸೀಟಿನಲ್ಲಿ ಕುಳಿತಿದ್ದ ರವಿಯನ್ನು ರಕ್ಷಿಸುವ ಸಲುವಾಗಿ ಆಟೋದಲ್ಲಿ ಹೋಗುತ್ತಿದ್ದ ಕಿರಣ್ ಮತ್ತು ರವಿಕುಮಾರ್ ಅವರನ್ನು ಸಹಾಯಕ್ಕೆ ಕರೆದಿದ್ದಾರೆ. ಈ ವೇಳೆ ಕಿರಣ್ ಹಾಗೂ ರವಿಕುಮಾರ್ ಕಬ್ಬಿಣದ ಸರಳುಗಳು ಅದರ ಮೂಲಕ ಹಾದುಹೋಗುವ ವಿದ್ಯುತ್ ಅನ್ನು ಗಮನಿಸದೆ, ರಕ್ಷಿಸಲು ಮುಂದಾಗಿದ್ದರು. 

ಈ ವೇಳೆ ರವಿಕುಮಾರ್ ಮತ್ತು ಇತರರಿಗೆ ವಿದ್ಯುತ್ ಪ್ರವಹಿಸಿದೆ. ಇನ್ನು ಕೆಲವರಿಗೆ ಸುಟ್ಟ ಗಾಯಗಳಾಗಿವೆ. ಚಾಲಕ ಸೀಟಿನಲ್ಲಿದ್ದ ರವಿಗೂ ಗಂಭೀರ ಸುಟ್ಟ ಗಾಯಗಳಾಗಿವೆ. ಕೆಆರ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com