ಪಾರ್ಕಿಂಗ್ ಕಿರಿಕಿರಿ: ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ನೆರೆ ಮನೆಯವರ ಅಸಮಾಧಾನ, ಕಾರು ನಿಲ್ಲಿಸಿ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಎದುರು ನಿಂತು ವ್ಯಕ್ತಿಯೋರ್ವರು ಆಕ್ರೋಶ ಹೊರ ಹಾಕಿದ್ದು, ಸಿಎಂ ನಿವಾಸದ ಬಳಿಯ ರಸ್ತೆಗೆ ಬ್ಯಾರಿಕೇಡ್ ಹಾಕಿದ್ದಕ್ಕೆ ಸಿಎಂ ನಿವಾಸ ಎದುರುಗಡೆ ಇರುವ ಮನೆ ಯಜಮಾನ ನರೋತ್ತಮ್ ಎಂಬುವವರು ಸಿಎಂ ಕಾರಿಗೆ ಅಡ್ಡಗಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.
ಸಿದ್ದರಾಮಯ್ಯ ನಿವಾಸದ ಬಳಿ ಹಿರಿಯ ನಾಗರೀಕರ ಅಸಮಾಧಾನ
ಸಿದ್ದರಾಮಯ್ಯ ನಿವಾಸದ ಬಳಿ ಹಿರಿಯ ನಾಗರೀಕರ ಅಸಮಾಧಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಎದುರು ನಿಂತು ವ್ಯಕ್ತಿಯೋರ್ವರು ಆಕ್ರೋಶ ಹೊರ ಹಾಕಿದ್ದು, ಸಿಎಂ ನಿವಾಸದ ಬಳಿಯ ರಸ್ತೆಗೆ ಬ್ಯಾರಿಕೇಡ್ ಹಾಕಿದ್ದಕ್ಕೆ ಸಿಎಂ ನಿವಾಸ ಎದುರುಗಡೆ ಇರುವ ಮನೆ ಯಜಮಾನ ನರೋತ್ತಮ್ ಎಂಬುವವರು ಸಿಎಂ ಕಾರಿಗೆ ಅಡ್ಡಗಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿಗೆ ಬರುವ ವಾಹನಗಳು ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗ್ತಾರೆ. ಹೇಗ ಬೇಕೋ ಹಾಗೇ ಪಾರ್ಕ್ ಮಾಡಿ ಹೋಗ್ತಾರೆ. ನಮ್ಮ ಮನೆಯ ವಾಹನಗಳಿಗೆ ತಿರುಗಾಡಲೂ ಅವಕಾಶ ಇಲ್ಲದಂತೆ ನಿಲ್ಲಿಸಿ ಹೋಗುತ್ತಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದ್ರೂ ಪ್ರಯೋಜನವಾಗಿಲ್ಲ ಎಂದು ಸಿಎಂ ಕಾರಿಗೆ ಅಡ್ಡಗಟ್ಟಿ ಸಿಎಂ ಸಿದ್ದರಾಮಯ್ಯ ಬಳಿ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮನೆಯಿಂದ ಹೊರಗಡೆ ಬರ್ತಿದ್ದ ಹಾಗೇ ಸಿಎಂ ಕಾರು ಅಡ್ಡಗಟ್ಟಿ ಸಿಎಂಗೆ ವ್ಯಕ್ತಿ ದೂರು ನೀಡಿದರು. ಕಳೆದ 5 ವರ್ಷದಿಂದ ಹೀಗೆ ಆಗ್ತಿದೆ. ಇದನ್ನ ಸರಿಪಡಿಸಿ ಎಂದು ಮನವಿ ಮಾಡಿದರು.

ಸಿಎಂ ಅಧಿಕೃತ ನಿವಾಸ ಕುಮಾರಕೃಪಾ ರಸ್ತೆಯಲ್ಲಿ ಮುಖ್ಯಮಂತ್ರಿ ಮನೆ ಇದೆ. ಇದರ ಎದುರಿನ ಮನೆಯಲ್ಲಿ ಕುಟುಂಬ ವಾಸವಿದೆ. ಈ ಮನೆ ಎದುರು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ ಕುಟುಂಬದ ಸದಸ್ಯರಿಗೆ ಓಡಾಡಲು ತೊಂದರೆ ಉಂಟಾಗಿದೆ. ಮುಖ್ಯಮಂತ್ರಿ ಭೇಟಿಗೆ ಬರುವ ಜನ, ಮನೆ ಎದುರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಕುಟುಂಬದ ಸದಸ್ಯರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.

ಇದರಿಂದ ಬೇಸತ್ತ ಮನೆ ಮಾಲೀಕ, ಸಿದ್ದರಾಮಯ್ಯ ಅವರ ಕಾರು ತಡೆದು ದೂರು ನೀಡಿದರು. ‘ಮನೆ ಎದುರು ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ದಯವಿಟ್ಟು ಕ್ರಮ ಕೈಗೊಳ್ಳಿ’ ಎಂದು ಮನೆ ಮಾಲೀಕ ಕೋರಿದ್ದಾರೆ. 

ಹಿರಿಯ ನಾಗರಿಕರ ದೂರು ಆಲಿಸಿದ ಸಿಎಂ ಸಿದ್ದರಾಮಯ್ಯ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಸ್ಥಳದಲ್ಲಿದ್ದ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com