ಕೊಪ್ಪಳದಲ್ಲಿ ನೀರು ಕಲುಷಿತಗೊಂಡು ಸಾವು ಸಂಭವಿಸಿಲ್ಲ: ಮರಣೋತ್ತರ ಪರೀಕ್ಷೆ ವರದಿ

ಕೊಪ್ಪಳ ಜಿಲ್ಲೆಯಲ್ಲಿ ಸಂಭವಿಸಿದ್ದ ಮೂವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲ ಎಂಬುದು ಮೃತರ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಸಂಭವಿಸಿದ್ದ ಮೂವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲ ಎಂಬುದು ಮೃತರ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.

ಮೃತಪಟ್ಟಿದ್ದ ಮೂವರ ಪೈಕಿ ಇಬ್ಬರು ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೇ 31ರಂದು ಮೃತಪಟ್ಟ ಬಸರಿಹಾಳ ಗ್ರಾಮದ ಹೊನಮ್ಮ ಎಂಬ ವೃದ್ಧೆಯ ಸಾವಿಗೆ ಹೃದಯ ಮತ್ತು ಕಿಡ್ನಿ ವೈಫಲ್ಯ ಕಾರಣವಾಗಿತ್ತು. ಅದೇ ರೀತಿ ಜೂನ್ 6 ರಂದು ಮೃತಪಟ್ಟಿದ್ದ ಒಂಬತ್ತು ತಿಂಗಳ ಮಗು ಶ್ರುತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ಮೂರು ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ 4,000 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕೆಲವು ಮೂಲಗಳು ಕಲುಷಿತಗೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಬೋರ್‌ವೆಲ್‌ಗಳು ಕಲುಷಿತಗೊಂಡಿವೆಯೋ, ಅವುಗಳನ್ನು ಮುಚ್ಚಲಾಗಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರಿಂದ ರಾಸಾಯನಿಕ ಮಾಲಿನ್ಯ ಉಂಟಾಗಿದೆ. ಕೆಲ ನೀರಿನ ಮೂಲದಲ್ಲಿ ಬ್ಯಾಕ್ಟೀರಿಯಾದ ಮಾಲಿನ್ಯವೂ ಕಂಡುಬಂದಿದೆ. ಈ ಎಲ್ಲಾ ಬೋರ್‌ವೆಲ್‌ಗಳನ್ನು ಮುಚ್ಚಲಾಗಿದೆ. ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿ ಪರೀಕ್ಷೆಗಳ ನಡೆಸುವ ಸಲುವಾಗಿ ಕಳೆದ ಎರಡು ತಿಂಗಳಲ್ಲಿ ಎಲ್ಲಾ 153 ಗ್ರಾಮ ಪಂಚಾಯಿತಿಗಳಲ್ಲಿ ಸ್ವಸಹಾಯ ಗುಂಪುಗಳ ಐದು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಕಳೆದ ಎರಡು ತಿಂಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, 902 ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಗ್ರಾಮ ಪಂಚಾಯಿತಿಗಳು, ತಗ್ಗು ಪ್ರದೇಶದಲ್ಲಿದ್ದ ಬೋರ್‌ವೆಲ್‌ಗಳನ್ನು ಎತ್ತರಿಸಿ, ಬೋರ್‌ವೆಲ್‌ಗಳ ಬಳಿ ಕಲುಷಿತ ನೀರು ಸಂಗ್ರಹವಾಗದಂತೆ ಸಿಮೆಂಟ್ ಗಳನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com