ಬೆಂಗಳೂರು ಹೊರವಲಯದಲ್ಲಿ 5 ಹೈಟೆಕ್ ನಗರಗಳ ನಿರ್ಮಾಣ

ಬೆಂಗಳೂರಿನ ಹೊರವಲಯದಲ್ಲಿ ಐದು ಹೈಟೆಕ್ ಉಪಗ್ರಹ ನಗರಗಳ ಅಭಿವೃದ್ಧಿಪಡಿಸಲು  ರಾಜ್ಯ ಸರ್ಕಾರ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಐದು ಹೈಟೆಕ್ ಉಪಗ್ರಹ ನಗರಗಳ ಅಭಿವೃದ್ಧಿಪಡಿಸಲು  ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲು ಹಾಗೂ ಮತ್ತು ಐಷಾರಾಮಿ ವಿಲ್ಲಾಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಗುರುತಿಸುವಂತೆ ಕರ್ನಾಟಕ ರಾಜ್ಯ ಗೃಹ ಮಂಡಳಿಗೆ (ಕೆಎಚ್‌ಬಿ) ವಸತಿ ಸಚಿವ ಜಮೀರ್ ಅಹ್ಮದ್ ಅವರು ಸೂಚನೆ ನೀಡಿದ್ದಾರೆ.

ನಿನ್ನೆಯಷ್ಟೇ ಸಚಿವರು ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ತಲಾ 2,000 ಎಕರೆ ಭೂಮಿಯಲ್ಲಿ ಐದು ವಿಶ್ವ ದರ್ಜೆಯ ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ವಿವರವಾದ ವರದಿ ಸಿದ್ಧಪಡಿಸುವಂತೆ ಹಾಗೂ ವಸತಿ ಬೇಡಿಕೆಯನ್ನು ಪೂರೈಸಲು ಖಾಸಗಿ ವಲಯದ ಮಾದರಿಯಲ್ಲಿ ವಿಲ್ಲಾಗಳನ್ನು ನಿರ್ಮಾಣಕ್ಕೆ ಶೀಘ್ರಗತಿಯಲ್ಲಿ ಭೂಮಿ ಗುರ್ತಿಸುವಂತೆ ಸೂಚಿಸಿದ್ದಾರೆ.

ಯೋಜನೆ ಕುರಿತು ವಿವರಣೆ ನೀಡಿದ ಸಚಿವರು, 30,000 ವಸತಿ ನಿವೇಶನಗಳ ನಿರ್ಮಾಣಕ್ಕೆ ಯೋಜನೆಯನ್ನು ಸಿದ್ಧಪಡಿಸಲು ಮತ್ತು ಪ್ರತಿ ಉಪಗ್ರಹ ನಗರದಲ್ಲಿ 5,000 ಮನೆಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆಯಾಗಿ ಯೋಜನೆಯಡಿಯಲ್ಲಿ 1.5 ಲಕ್ಷ ಸೈಟ್‌ಗಳು ಮತ್ತು 25,000 ಮನೆಗಳನ್ನು ಪ್ರಕೃತಿಯ ನಡುವೆ ನಿರ್ಮಾಣ ಮಾಡಲಾಗುತ್ತದೆ. ಕೆಎಚ್‌ಬಿ ಬಡವರಿಗೆ ವಸತಿ ಯೋಜನೆಗಳನ್ನು ಸಿದ್ಧಪಡಿಸುವಾಗ ಲಾಭವನ್ನು ಹುಡುಕಬಾರದು, ಕೆಲಸದ ಗುಣಮಟ್ಟದಲ್ಲಿ ಯಾವುದೇ ರಾಜಿ ಇರಬಾರದು ಎಂದು ತಿಳಿಸಿದ್ದಾರೆ.

ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಉಪನಗರಗಳ ಅಭಿವೃದ್ಧಿ ಅನಿವಾರ್ಯವಾಗಿದೆ. ಮೆಟ್ರೋ ಸೇರಿದಂತೆ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಉಪ ನಗರಗಳ ನಿರ್ಮಾಣ ಮಾಡಲಾಗುತ್ತದೆ. “ಬೆಂಗಳೂರು ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವುದರಿಂದ, ಇತರ ದೇಶಗಳ ಅನೇಕ ಕೈಗಾರಿಕೋದ್ಯಮಿಗಳು ಮತ್ತು ವಿವಿಐಪಿಗಳು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ನಗರದ ಹೊರವಲಯದಲ್ಲಿ ವಿಲ್ಲಾಗಳಿಗೆ ಸಾಕಷ್ಟು ಬೇಡಿಕೆಯಿದೆ. ಭೂಮಾಲೀಕರೊಂದಿಗೆ 50:50 ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು, ಇದರಿಂದಾಗಿ ಭೂ ಸ್ವಾಧೀನ ವೆಚ್ಚದಿಂದ ಹೊರೆಯಾಗುವುದಿಲ್ಲ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com