'ಶಕ್ತಿ' ಯೋಜನೆ ಉಚಿತ ಪ್ರಯಾಣವನ್ನಷ್ಟೇ ಅಲ್ಲ, ಮಹಿಳೆಯರಿಗೆ ಹೆಚ್ಚಿನ 'ಸ್ವಾತಂತ್ರ್ಯ'ದತ್ತ ದಾರಿ ಮಾಡಿಕೊಟ್ಟಿದೆ!

ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಈ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ 'ಶಕ್ತಿ' ಯೋಜನೆಗೆ ಚಾಲನೆ ನೀಡಿದೆ. ಇತ್ತ ಮಹಿಳೆಯರು ಸಂತಸದೊಂದಿಗೆ ಬಸ್ಸುಗಳನ್ನು ಏರುತ್ತಿದ್ದರೆ, ಅತ್ತ ಕಾಂಗ್ರೆಸ್ ಕೂಡ ತಮ್ಮ ಭರವಸೆಯನ್ನು ಈಡೇರಿಸಿದ ಹರ್ಷದಲ್ಲಿದೆ.
ಬಸ್‌ಗಳ ಕಿಟಕಿಯಿಂದ ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಿದ ಮಹಿಳೆಯರು
ಬಸ್‌ಗಳ ಕಿಟಕಿಯಿಂದ ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಿದ ಮಹಿಳೆಯರು

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಈ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ 'ಶಕ್ತಿ' ಯೋಜನೆಗೆ ಚಾಲನೆ ನೀಡಿದೆ. ಇತ್ತ ಮಹಿಳೆಯರು ಸಂತಸದೊಂದಿಗೆ ಬಸ್ಸುಗಳನ್ನು ಏರುತ್ತಿದ್ದರೆ, ಅತ್ತ ಕಾಂಗ್ರೆಸ್ ಕೂಡ ತಮ್ಮ ಭರವಸೆಯನ್ನು ಈಡೇರಿಸಿದ ಹರ್ಷದಲ್ಲಿದೆ.

ಶಕ್ತಿ ಯೋಜನೆಯ 'ದೊಡ್ಡ ಟಿಕೆಟ್' ಬಿಡುಗಡೆಯಾದಂತಾಗಿದ್ದು, ಇದು ವಿರೋಧ ಪಕ್ಷವು ಎಬ್ಬಿಸುವ ವಿವಾದಕ್ಕೆ ಬ್ರೇಕ್ ಹಾಕುತ್ತದೆ ಎಂದು ಕಾಂಗ್ರೆಸ್ ನಂಬುತ್ತದೆ.

ಯೋಜನೆ ಉದ್ಘಾಟನೆಗೆಂದೇ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್ಸುಗಳು ಅಲಂಕಾರಗೊಂಡಿದ್ದವು. ಕಂಡಕ್ಟರ್‌ಗಳು ಮಹಿಳೆಯರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಇದು ಕೇವಲ ಮಹಿಳಾ ಸಬಲೀಕರಣದ ದಿನವಲ್ಲ. ಆದರೆ, ಇದು ತಮ್ಮ ಉಳಿತಾಯವನ್ನು ವರ್ಧಿಸುವ ಕೆಲಸ ಮಾಡುವ ಮೂಲಕ ಮಹಿಳೆಯರಿಗೆ ದೊಡ್ಡ ಉತ್ತೇಜನವಾಗಿದೆ.

ಯೋಜನೆಯ ಲಾಭ ಪಡೆದ ಇಬ್ಬರು ಮಹಿಳಾ ಪ್ರಯಾಣಿಕರು ಮಾತನಾಡಿ, 'ಶಕ್ತಿಯು ತಮ್ಮ ಸಮುದಾಯದಲ್ಲಿ ದೊಡ್ಡ ಮಟ್ಟದ ಅಲೆಗಳನ್ನು ಸೃಷ್ಟಿಸುತ್ತದೆ. ಈಗ ಮಹಿಳೆಯರು ಎಲ್ಲಿ ಬೇಕಾದರೂ ಪ್ರಯಾಣಿಸಬಹುದು. ಸಾಮಾನ್ಯವಾಗಿ ಗೃಹಿಣಿಯರು ಮತ್ತು ಅವರ ಗಂಡನಿಂದ ಹಣವನ್ನು ಕೇಳಬೇಕಾಗುತ್ತದೆ. ಈಗ, ಅವರು ಕೇವಲ ಬಸ್ ಹತ್ತಿ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು. ಮಹಿಳೆಯರು ಸ್ವತಂತ್ರರಾಗಲು ಒಂದು ಪೂರಕ ಕ್ರಮವಾಗಿದೆ' ಎಂದು ಮೆಜೆಸ್ಟಿಕ್‌ನಿಂದ ಬಸ್ ಹತ್ತಿದ ದುರ್ಗಾ ಹೇಳಿದರು.

ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಮಹಿಳೆಯರು ರಂಗೋಲಿಯಿಂದ ಅಲಂಕರಿಸಿದ್ದರು. ಬೆಳಗಾವಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಮತ್ತೊರ್ವ ಪ್ರಯಾಣಿಕರು ಮಾತನಾಡಿ, ತುಂಬಾ ಸಂತೋಷವಾಗಿದೆ. ತನ್ನ ಮಗಳು ಇನ್ಮುಂದೆ ಉಚಿತವಾಗಿ ಶಾಲೆಗೆ ಹೋಗಬಹುದು ಎಂದರು. 

ಟಿಎನ್ಐಇ ಜೊತೆಗೆ ಮಾತನಾಡಿದ ಕಂಡಕ್ಟರ್‌ಗಳು, ಶಕ್ತಿ ಯೋಜನೆಯನ್ನು ಜಾರಿಗೊಳಿಸಲೆಂದು ತಮಗೆ ಮೂರು ದಿನಗಳ ಮುಂಚಿತವಾಗಿಯೇ ತರಬೇತಿ ನೀಡಲಾಯಿತು ಎಂದು ಹೇಳಿದರು.

ಬಿಎಂಟಿಸಿ ಬಸ್‌ನ ಕಂಡಕ್ಟರ್ ಸುಶೀಲಮ್ಮ ಮಾತನಾಡಿ, ಮಹಿಳಾ ಪ್ರಯಾಣಿಕರು ಏರುವ ನಿರೀಕ್ಷೆಯಲ್ಲಿದ್ದೇವೆ. ಐಡಿ ಪುರಾವೆಗಳನ್ನು ಪರಿಶೀಲಿಸಬೇಕು ಮತ್ತು ಅವರು ಕರ್ನಾಟಕದವರೇ ಎಂದು ಪರಿಶೀಲಿಸಿ ನಂತರ ಟಿಕೆಟ್ ನೀಡಬೇಕೆಂದು ನಿಯಮ ಹೇಳುತ್ತದೆ ಎಂದರು. 

ಯಾವ ದಾಖಲೆ ಸಲ್ಲಿಸಬೇಕು ಎಂಬ ಗೊಂದಲವಿತ್ತು. ಬಸ್ ಹತ್ತಿದ ನಂತರ ಗುರುತಿನ ಚೀಟಿ ನೀಡುತ್ತೇನೆ ಎಂದು ಹುಬ್ಬಳ್ಳಿಗೆ ತೆರಳುತ್ತಿದ್ದ ಸಮೃದ್ಧಿ ಆರ್ ಹೇಳಿದರು.

ಕರ್ನಾಟಕದ ಅನಿವಾಸಿ ಆಯುಷಿ ಪರೇಖ್ ಮಾತನಾಡಿ, 'ನಗರದ ಉದ್ಯೋಗಸ್ಥ ಮಹಿಳೆಯರಿಗೆ ಈ ಯೋಜನೆಯನ್ನು ವಿಸ್ತರಿಸಿದ್ದರೆ ಚೆನ್ನಾಗಿತ್ತು. ನಾನು ಪ್ರತಿದಿನ 60 ರೂ. ನೀಡುತ್ತಿದ್ದೇನೆ. ಸದ್ಯ, ಕರ್ನಾಟಕದಲ್ಲಿ ವಿಳಾಸವನ್ನು ಹೊಂದಿರುವವರು ಮಾತ್ರ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com