ವಿದ್ಯುತ್ ದರ ಏರಿಕೆ: ಮುಂದಿನ ತಿಂಗಳಿನಿಂದ ಒಂದೇ ಬಿಲ್, ಸಮಸ್ಯೆ ಪರಿಹಾರ- ಸಿಎಂ ಸಿದ್ದರಾಮಯ್ಯ 

ವಿದ್ಯುತ್ ದರ ಏರಿಕೆ ಕುರಿತು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಜೂನ್​​ 22 ರಂದು ಒಂದು ದಿನ ಕರ್ನಾಟಕ ಬಂದ್​​ಗೆ ಕರೆ ನೀಡಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ವಿದ್ಯುತ್ ದರ ಏರಿಕೆ ಕುರಿತು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಜೂನ್​​ 22 ರಂದು ಒಂದು ದಿನ ಕರ್ನಾಟಕ ಬಂದ್​​ಗೆ ಕರೆ ನೀಡಿದೆ.

ಈ ಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡು ತಿಂಗಳ ಹೆಚ್ಚುವರಿ ದರ ಸೇರಿ ಒಂದೇ ಬಿಲ್ ಬಂದಿದ್ದರಿಂದ ಈ ತಿಂಗಳು ವಿದ್ಯುತ್ ಶುಲ್ಕದಲ್ಲಿ ಹೆಚ್ಚಳವಾಗಿದೆ ಎಂದರು.

ಮುಂದಿನ ತಿಂಗಳಿನಿಂದ ಒಂದೇ ತಿಂಗಳ ಬಿಲ್ ಬರುವುದರಿಂದ ಎಲ್ಲವೂ ಸರಿಯಾಗಲಿದೆ. ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ಎಫ್ ಕೆಸಿಸಿಯವರ ಜೊತೆಗೆ ಸಂಬಂಧಿಸಿದ ಸಚಿವರು ಮಾತನಾಡಿ ಮನವೊಲಿಸಲಿದ್ದಾರೆ ಎಂದು ಅವರು ತಿಳಿಸಿದರು.

ಇದೇ ವೇಳೆ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಕ್ಕಿ ಕೊಡಿಸುವ ಕೆಲಸ ಮಾಡಲಿ, ಬಡವರ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಏಕೆ ಅಡ್ಡಿಪಡಿಸಬೇಕು, ದ್ವೇಷ ರಾಜಕಾರಣ ಯಾಕೆ ಮಾಡುತ್ತಿದೆ ಎಂದು ಪ್ರಶ್ನಿಸಿದರು. 

ಅಕ್ಕಿ ಖರೀದಿ ಸಂಬಂಧ ನೆರೆಯ ಆಂಧ್ರ ಪ್ರದೇ ಶ, ತೆಲಂಗಾಣ ರಾಜ್ಯಗಳ ಜೊತೆಗೆ ಮಾತನಾಡುತ್ತಿದ್ದೇವೆ, ಛತ್ತೀಸ್ ಗಢದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ. ಆದರೆ  ಅದರ ದರ ಹಾಗೂ ಸಾಗಣೆ ವೆಚ್ಚ ಹೆಚ್ಚಿದೆ. ರಾಯಚೂರಿನ ಸೋನ ಮಸೂರಿ ಅಕ್ಕಿ ದರವೂ ಹೆಚ್ಚಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com