ಕಾನೂನು ಹೋರಾಟದಲ್ಲಿ ಗೆದ್ದ ಮಹಿಳೆಗೆ ದಂತ ವೈದ್ಯನಿಂದ 1 ಲಕ್ಷ ರೂಪಾಯಿ ಪರಿಹಾರ!

ವಿಸ್ಡಮ್ ಹಲ್ಲು ಹೊರತೆಗೆಸಲು ಹೋದಾಗ ದಂತವೈದ್ಯರ ಸೇವೆಯಲ್ಲಾದ ಲೋಪ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮತ್ತೊಂದು ಹಾಳು ಹಾಳಾಗಿದೆ ಎಂದು ಗ್ರಾಹಕರ ಆಯೋಗದ ಮುಂದೆ ವಾದಿಸಿದ ಎಚ್ ಎಸ್ ಆರ್ ಲೇಔಟ್ ನ ಮಹಿಳೆಯೊಬ್ಬರು ಯಾವುದೇ ಕಾನೂನು ನೆರವಿಲ್ಲದೆ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಸ್ಡಮ್ ಹಲ್ಲು ಹೊರತೆಗೆಸಲು ಹೋದಾಗ ದಂತವೈದ್ಯರ ಸೇವೆಯಲ್ಲಾದ ಲೋಪ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮತ್ತೊಂದು ಹಾಳು ಹಾಳಾಗಿದೆ ಎಂದು ಗ್ರಾಹಕರ ಆಯೋಗದ ಮುಂದೆ ವಾದಿಸಿದ ಎಚ್ ಎಸ್ ಆರ್ ಲೇಔಟ್ ನ ಮಹಿಳೆಯೊಬ್ಬರು ಯಾವುದೇ ಕಾನೂನು ನೆರವಿಲ್ಲದೆ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. 

ದೂರುದಾರರ ಮಹಿಳೆಗೆ ಇಂದಿರಾನಗರದ 1 ಲಕ್ಷ ರೂ. ಪರಿಹಾರ ಮತ್ತು ರೂ. 5,000 ಕಾನೂನು ಹೋರಾಟದ ವೆಚ್ಚ ಭರಿಸುವಂತೆ ಇಂದಿರಾನಗರದ ಸ್ಮೈಲ್ ಲೌಂಜ್ ಡೆಂಟಲ್ ಕೇರ್‌ನ ಡಾ.ಎ.ರಹೀಮ್ ಖಾನ್ ಅವರಿಗೆ ಬೆಂಗಳೂರಿನ ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ನಿರ್ದೇಶಿಸಿದೆ. ಜೊತೆಗೆ ವಿಸ್ಡಮ್ ಹಲ್ಲು ತೆಗೆಸಲು ಮಾಡಲಾದ ರೂ. 14,000 ವನ್ನು ಮರು ಪಾವತಿಸುವಂತೆ ಸೂಚಿಸಿದೆ. 

ಕರ್ನಾಟಕ ರಾಜ್ಯ ದಂತ ಪರಿಷತ್ತಿನ ತಜ್ಞರ ಅಭಿಪ್ರಾಯದಂತೆ  ವಿಸ್ಡಮ್ ಹಲ್ಲು ತೆಗೆದಿರುವುದರಿಂದ ಸಮಸ್ಯೆಯಾಗಿರುವುದು ಸ್ಪಷ್ಟವಾಗಿದೆ. ದಂತವೈದ್ಯರ ನಿರ್ಲಕ್ಷ್ಯ ಮತ್ತು ಸೇವೆಯಲ್ಲಿನ ಕೊರತೆಯಿಂದಾಗಿ ಆ ಹಲ್ಲು ತೆಗೆದ ನಂತರ ದೂರುದಾರರು ಸಾಕಷ್ಟು ನೋವು ಅನುಭವಿಸಿದ್ದಾರೆ ಮತ್ತು ವಿಸ್ಡಮ್ ಹಲ್ಲಿನ ಮುಂದಿನ ಹಲ್ಲು ಕೂಡಾ ಹಾನಿಯಾಗಿದೆ. ಇದಕ್ಕಾಗಿ ದಂತವೈದ್ಯರು ಹೊಣೆಗಾರರಾಗಿದ್ದಾರೆ ಎಂದು ಆಯೋಗ ಹೇಳಿದೆ.

ಡಾ.ರಹೀಮ್ ಅವರ ಸಲಹೆಯ ಮೇರೆಗೆ ಇನ್ನೊಬ್ಬ ವೈದ್ಯರು ನಡೆಸಿದ ಕಾರ್ಯಾಚರಣೆಯಲ್ಲಿ ವಿಸ್ಡಮ್ ಹಲ್ಲನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ವಸಡುಗಳಲ್ಲಿ ಕೆಲವು ತುಂಡುಗಳನ್ನು ಬಿಟ್ಟು ಅದರ ಪಕ್ಕದ ಹಲ್ಲಿಗೂ ಹಾನಿಯುಂಟು ಮಾಡಿದ್ದಾರೆ. ಇದರಿಂದಾಗಿ ದೂರುದಾರರು ಸಾಕಷ್ಟು ವಾರ ನೋವು ಅನುಭವಿಸಿದ್ದಾರೆ ಎಂದು ಅಧ್ಯಕ್ಷ ನಾರಾಯಣಪ್ಪ, ಸದಸ್ಯರಾದ ಜ್ಯೋತಿ ಎನ್ ಮತ್ತು ಶರಾವತಿ ಎಸ್‌ಎಂ ಅವರನ್ನೊಳಗೊಂಡ ಆಯೋಗ ಹೇಳಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com