ಮುಂದಿನ ವರ್ಷ ಡಿಸೆಂಬರ್ ವೇಳೆಗೆ 'ಮೆಟ್ರೋ ಪಿಂಕ್ ಲೈನ್' ಉದ್ಘಾಟನೆಗೆ ಸಿದ್ಧ

ನಾಗವಾರ ಮತ್ತು ಕಾಳೇನ ಅಗ್ರಹಾರ ನಡುವಿನ  21.25-ಕಿಮೀ ಉದ್ದದ ಮೆಟ್ರೋ ಗುಲಾಬಿ ಮಾರ್ಗದ ಕಾಮಗಾರಿಯು ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಲಿದೆ.
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಾಗವಾರ ಮತ್ತು ಕಾಳೇನ ಅಗ್ರಹಾರ ನಡುವಿನ  21.25-ಕಿಮೀ ಉದ್ದದ ಮೆಟ್ರೋ ಗುಲಾಬಿ ಮಾರ್ಗದ ಕಾಮಗಾರಿಯು ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಲಿದೆ.ಹೊರ ವರ್ತುಲ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆ ನಡುವಿನ ಮೆಟ್ರೋ ಸಂಪರ್ಕವು ನಗರದ ಟ್ರಾಫಿಕ್ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಬಿಎಂಆರ್ ಸಿಎಲ್ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಎರಡನೇ ಹಂತದಲ್ಲಿ ರೀಚ್‌ 6 ಮಾರ್ಗದಲ್ಲಿ ನಾಗವಾರದಿಂದ ಡೇರಿ ವೃತ್ತದವರೆಗೆ 13.89 ಕಿ.ಮೀ ದೂರ ಸುರಂಗ ಮಾರ್ಗದ ಕಾರಿಡಾರ್ ನಿರ್ಮಾಣವಾಗುತ್ತಿದ್ದು, ಈ ಸ್ಥಳಕ್ಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯನ್ನು ಅಧಿಕಾರಿಗಳು ತಿಳಿಸಿದರು. 

ತಾವರೆಕೆರೆ (ಸ್ವಾಗತ್ ಕ್ರಾಸ್ ನಿಂದ) ಕಾಳೇನ ಅಗ್ರಹಾರ( ಗೊಟ್ಟಿಗೆರೆ)ವರೆಗೆ 7.5 ಕಿ.ಮೀ ದೂರ ಎತ್ತರಿಸಿದ ಮಾರ್ಗ ನಿರ್ಮಾಣವಾಗುತ್ತಿದ್ದು, ಜಿಆರ್ ಇನ್‌ಫ್ರಾ ಲಿಮಿಟೆಡ್‌ಗೆ ಗುತ್ತಿಗೆ ಪಡೆದಿದೆ. ಎತ್ತರಿಸಿದ ಮಾರ್ಗ ಮುಂದಿನ ವರ್ಷದ ಡಿಸೆಂಬರ್‌ ಗೂ ಮೊದಲೇ ಸಿದ್ಧವಾಗಲಿದೆ. 251 ಸೆಗ್ಮೆಂಟಲ್ ಸ್ಪ್ಯಾನ್‌ಗಳಲ್ಲಿ 43 ಇನ್ನೂ ಪೂರ್ಣಗೊಳ್ಳಬೇಕಿದೆ. ಈ ವರ್ಷದ ಅಕ್ಟೋಬರ್‌ ವೇಳೆಗೆ ಹಳಿ ಹಾಕಲು ಎದುರು ನೋಡುತ್ತಿದ್ದೇವೆ. ನಿಲ್ದಾಣ ನಿರ್ಮಾಣ ಕೆಲಸ ಸ್ಥಿರವಾಗಿ ನಡೆಯುತ್ತಿದ್ದು, ಫಿನಿಶಿಂಗ್ ಕೆಲಸಗಳು ಮಾತ್ರ ಉಳಿದಿವೆ ಎಂದು ಅವರು ಮಾಹಿತಿ ನೀಡಿದರು.

ತ್ವರಿತಗತಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ  ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ: ಡೈರಿ ಸರ್ಕಲ್‌ನಿಂದ ವೆಲ್ಲರಾ ಜಂಕ್ಷನ್ (RT-01) ವೆಲ್ಲರಾ ಜಂಕ್ಷನ್‌ನಿಂದ ಶಿವಾಜಿ ನಗರಕ್ಕೆ (RT-02); ಶಿವಾಜಿನಗರದಿಂದ ಪಾಟರಿ ಟೌನ್ (RT-03) ಮತ್ತು ಟ್ಯಾನರಿ ರಸ್ತೆಯಿಂದ ನಾಗವಾರ (RT-04) ಇವುಗಳಲ್ಲಿ RT-03 ಮತ್ತು RT-04 ಅನ್ನು ಲಾರ್ಸನ್ ಮತ್ತು ಟೂಬ್ರೊ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದ್ದು, ಅವರು ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.

ಇತರ ಎರಡು ಸುರಂಗ ಮಾರ್ಗ ನಿರ್ಮಾಣ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ಡೈರಿ ಸರ್ಕಲ್ ಬಳಿಯ ಜಯನಗರ ಅಗ್ನಿಶಾಮಕ ಕೇಂದ್ರದ ಬಳಿ ಒಟ್ಟು ಶೇ.78 ರಷ್ಟು ಸುರಂಗ ನಿರ್ಮಾಣ  ಪೂರ್ಣಗೊಂಡಿದೆ. ಟ್ಯಾನರಿ ರಸ್ತೆಯಿಂದ ಉತ್ತರ ರ‍್ಯಾಂಪ್‌ನಲ್ಲಿ ಶೇ. 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು  ಮುಖ್ಯ ಇಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ ತಿಳಿಸಿದರು. ವೆಂಕಟೇಶಪುರ ಮತ್ತು ಕೆ.ಜಿ.ಹಳ್ಳಿ ನಡುವೆ ತುಂಗಾ ಮತ್ತು ಭದ್ರಾ ಯಂತ್ರಗಳು ಇನ್ನೂ ಸುರಂಗ ಮಾರ್ಗ ಕೊರೆಯುತ್ತಿವೆ ಎಂದು ಮುಖ್ಯ ಎಂಜಿನಿಯರ್ (ಸುರಂಗ ಮಾರ್ಗ 2) ದಯಾನಂದ ಶೆಟ್ಟಿ ತಿಳಿಸಿದರು. 

ಟಿಎನ್‌ಐಇ ಭೇಟಿ ನೀಡಿದ 12 ಸುರಂಗ ನಿಲ್ದಾಣಗಳ ಪೈಕಿ  ಶಿವಾಜಿನಗರದಲ್ಲಿ ಗ್ರಾನೈಟ್ ಹಾಕುವ ಆರಂಭವಾಗಿದ್ದು, ಶೇ.94 ರಷ್ಟು ಕಾಮಗಾರಿಗಳು ಸಿದ್ಧವಾಗಿವೆ.  75 ಅಡಿಗಳಷ್ಟು ಕೆಳಗಿರುವ ಲ್ಯಾಂಗ್‌ಫೋರ್ಡ್ ನಿಲ್ದಾಣ ಕಾಮಗಾರಿ ತ್ವರಿತಗೊಳಿಸಲು ವಿಭಿನ್ನ ನಿರ್ಮಾಣ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com