ಉಚಿತ ಬಸ್ ಯೋಜನೆ: ಸರ್ಕಾರಿ ಬಸ್ ಗಳಲ್ಲಿ ಫುಲ್ ರಶ್; 50 ಗ್ರಾಂ ಚಿನ್ನ ಕಳೆದುಕೊಂಡ ಮಹಿಳೆ!

ಉಚಿತ ಬಸ್ ಯೋಜನೆಯಿಂದಾಗಿ ಕಳೆದ ಹಲವು ದಿನಗಳಿಂದಲೂ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದ್ದು, ಖದೀಮರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬರ 50 ಗ್ರಾಂ ಚಿನ್ನದ ಆಭರಣಗಳನ್ನು ದೋಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಗಾವಿ: ಉಚಿತ ಬಸ್ ಯೋಜನೆಯಿಂದಾಗಿ ಕಳೆದ ಹಲವು ದಿನಗಳಿಂದಲೂ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದ್ದು, ಖದೀಮರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬರ 50 ಗ್ರಾಂ ಚಿನ್ನದ ಆಭರಣಗಳನ್ನು ದೋಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಸಮೀಪದ ಕಡೋಲಿ ನಿವಾಸಿ, 30 ವರ್ಷದ ಗೃಹಿಣಿ ಆರತಿ ಹನುಮಂತ್ ಕಡೋಲ್ಕರ್ ಚಿನ್ನವನ್ನು ಕಳೆದುಕೊಂಡ ಮಹಿಳೆಯಾಗಿದ್ದಾರೆ.

ಪರ್ಸ್ ನಲ್ಲಿ ಆರತಿಯವರು 50 ಗ್ರಾಂ ಚಿನ್ನವನ್ನು ಇಟ್ಟುಕೊಂಡಿದ್ದರು. ಕಡೋಲಿ ಗ್ರಾಮದಿಂದ ಬೆಳಗಾವಿ ನಗರಕ್ಕೆ ಪೋಷಕರು ಹಾಗೂ ಮಗಳೊಂದಿಗೆ NWKRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗದಲ್ಲಿ ಖದೀಮರು ಪರ್ಸ್ ಕದ್ದಿದ್ದಾರೆ.

ನೆಹರುನಗರ ಬಳಿಯ ಸಂಬಂಧಿಕರ ಮನೆಗೆ ಬಂದು ನೋಡಿದಾಗ ಪರ್ಸ್‌ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಪರ್ಸ್ ನಲ್ಲಿ ಆಭರಣಗಳ ಜೊತೆಗೆ ಆಕೆಯ ಪತಿಯ ಎಟಿಎಂ ಕಾರ್ಡ್‌, ಬಿಎಸ್‌ಎಫ್‌ ಮಿಲಿಟರಿ ಕಾರ್ಡ್‌ ಸೇರಿದಂತೆ ಸುಮಾರು 2.10 ಲಕ್ಷ ರೂ ಕೂಡ ಕಳ್ಳತನವಾಗಿದೆ. ಇದರಿಂದ ಆಘಾತಗೊಂಡ ಮಹಿಳೆ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com