ಹಿರಿಯ ಯಕ್ಷಗಾನ ಕಲಾವಿದ ತೋನ್ಸೆ ಜಯಂತ್ ಕುಮಾರ್ ನಿಧನ

ಹಿರಿಯ ಯಕ್ಷಗಾನ ಕಲಾವಿದ ತೋನ್ಸೆ ಜಯಂತ್ ಕುಮಾರ್  ಸೋಮವಾರ ಮುಂಜಾನೆ ಉಡುಪಿಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು  ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ತೋನ್ಸೆ ಜಯಂತ್ ಕುಮಾರ್
ತೋನ್ಸೆ ಜಯಂತ್ ಕುಮಾರ್
Updated on: 

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ತೋನ್ಸೆ ಜಯಂತ್ ಕುಮಾರ್  ಸೋಮವಾರ ಮುಂಜಾನೆ ಉಡುಪಿಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು  ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

ಕುಮಾರ್ ಅವರು  ಯಕ್ಷಗಾನ ವೇಷಧಾರಿಯಾಗಿ ನಂತರ ಯಕ್ಷಗಾನ ಗುರುಗಳಾಗಿ ಮಿಂಚಿದ್ದು, ಈ  ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ನ ಗುರುಗಳಾಗಿದ್ದ ಅವರು, ಆರಂಭದಿಂದಲೂ ಅದರ ಯಶಸ್ಸಿಗೆ ಕಾರಣರಾಗಿದ್ದರು.

ಯಕ್ಷಗಾನ ಅಕಾಡೆಮಿ, ಶ್ರೀರಾಮ ವಿಠಲ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿರುವ ತೋನ್ಸೆ ಜಯಂತ್ ಕುಮಾರ್ ಅವರು ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರಿಂದ ಗೌರವ ಸ್ವೀಕರಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com