ಬೆಂಗಳೂರು: ರೋಬೋಟ್ ನೆರವಿನಿಂದ ಮೃತ ಮಗುವಿನ ಮೂತ್ರಪಿಂಡ ಕಸಿ ಯಶಸ್ವಿ!

ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡವನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ “ರೋಬೋಟಿಕ್‌ ಎನ್‌- ಬ್ಲಾಕ್‌” ವಿಧಾನದ ಮೂಲಕ ಕಸಿ ಮಾಡಲಾಗಿದ್ದು, ಈ ಪ್ರಕರಣ ವಿಶ್ವದಲ್ಲಿಯೇ ಅತೀ ಅಪರೂಪದ್ದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡವನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ “ರೋಬೋಟಿಕ್‌ ಎನ್‌- ಬ್ಲಾಕ್‌” ವಿಧಾನದ ಮೂಲಕ ಕಸಿ ಮಾಡಲಾಗಿದ್ದು, ಈ ಪ್ರಕರಣ ವಿಶ್ವದಲ್ಲಿಯೇ ಅತೀ ಅಪರೂಪದ್ದಾಗಿದೆ.

ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ. ಶ್ರೀಹರ್ಷ ಹರಿನಾಥ ಅವರ ತಂಡವು ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ರಕ್ತಹೀನತೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ರಾಘವ್ (ಹೆಸರು ಬದಲಾಯಿಸಲಾಗಿದೆ) ಅವರು ನಿಯಮಿತವಾಗಿ ಡಯಾಲಿಸಿಸ್​ನಿಂದ ಬಳಲುತ್ತಿದ್ದರು. ಹೀಗಾಗಿ ಇವರಿಗೆ ಮೂತ್ರಪಿಂಡ ಕಸಿ ಮಾಡುವ ಅವಶ್ಯಕವಾಗಿತ್ತು. ಇತ್ತ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ ಮಗುವಿನ ಕಿಡ್ನಿ ದಾನ ಮಾಡಲು ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ.

ಅದರಂತೆ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಡಾ ಮೋಹನ್ ಕೇಶವಮೂರ್ತಿ ಅವರು ನಾಲ್ಕು ಗಂಟೆಗಳಲ್ಲಿ ರೋಬೋಟಿಕ್ ತಂತ್ರಗಳನ್ನು ಬಳಸಿಕೊಂಡು ವ್ಯಕ್ತಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಡಾ. ಮೂರ್ತಿಯವರು ಎರಡೂ ಮೂತ್ರಪಿಂಡಗಳನ್ನು ಒಟ್ಟಿಗೆ ಕಸಿ ಮಾಡುವ ಎನ್-ಬ್ಲಾಕ್ ಪ್ರಕ್ರಿಯೆಯು ಅಪರೂಪವಾಗಿದೆ. ಮೂತ್ರಪಿಂಡಗಳ ಬೆಂಚ್ ಶಸ್ತ್ರಚಿಕಿತ್ಸೆಗೆ ಅತ್ಯಂತ ನಿಖರತೆಯ ಅಗತ್ಯವಿರುತ್ತದೆ. ದಾನಿ ಮತ್ತು ಸ್ವೀಕರಿಸುವವರ ರಕ್ತನಾಳಗಳನ್ನು ಮತ್ತು ಮೂತ್ರಪಿಂಡದ ಮೂತ್ರನಾಳಗಳನ್ನು ದಾನಿಯ ಮೂತ್ರಕೋಶಕ್ಕೆ ಸಂಪರ್ಕಿಸಲು ವೈದ್ಯರು ರೋಬೋಟ್‌ ಸಹಾಯ ಪಡೆದಿದ್ದಾರೆ. ದಾನಿಯ ವಯಸ್ಸು ಮುಖ್ಯವಲ್ಲ. ಏಕೆಂದರೆ ಮೂತ್ರಪಿಂಡದ ಕಾರ್ಯವು ರಕ್ತವನ್ನು ಶುದ್ಧೀಕರಿಸುವುದಾಗಿದೆ ಮತ್ತು ವಯಸ್ಕರ ದೇಹದಲ್ಲಿ ಕಸಿ ಮಾಡಿದ ನಂತರ ಅದು ಕಾರ್ಯಕ್ಕೆ ಸರಿಹೊಂದುತ್ತದೆ. ಸುಮಾರು 300 ಪ್ರತಿಶತದಷ್ಟು ವಿಸ್ತರಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com