ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಹಿರಿಯ ಕೆಎಎಸ್‌ ಅಧಿಕಾರಿ ಪುತ್ರ, ಆತನ ಸಹಪಾಠಿಗಳ ಮೇಲೆ ಮಾರಣಾಂತಿಕ ಹಲ್ಲೆ!

ಕ್ಷುಲ್ಲಕ ವಿಚಾರಕ್ಕೆ  ಹಿರಿಯ ಕೆಎಎಸ್‌ ಅಧಿಕಾರಿಯ ಪುತ್ರ ಹಾಗೂ ಆತನ ಇಬ್ಬರು ಸಹಪಾಠಿಗಳ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಫೆ.24ರಂದು ಕ್ಷುಲ್ಲಕ ಕಾರಣಕ್ಕೆ ಹಾಕಿ ಸ್ಟಿಕ್‌ ಮತ್ತು ಆಯುಧಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ  ಹಿರಿಯ ಕೆಎಎಸ್‌ ಅಧಿಕಾರಿಯ ಪುತ್ರ ಹಾಗೂ ಆತನ ಇಬ್ಬರು ಸಹಪಾಠಿಗಳ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಫೆ.24ರಂದು ಕ್ಷುಲ್ಲಕ ಕಾರಣಕ್ಕೆ ಹಾಕಿ ಸ್ಟಿಕ್‌ ಮತ್ತು ಆಯುಧಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.

ಸಹಕಾರ ಇಲಾಖೆಯಲ್ಲಿ ಸಹಕಾರಿ ಲೆಕ್ಕಪರಿಶೋಧನೆ ವಿಭಾಗದ ನಿರ್ದೇಶಕರಾಗಿರುವ ಸರ್ಪರಾಜ್ ಖಾನ್ ಅವರ ಮಗ ಸೆಂಟ್ರಲ್ ಬಿಸಿನೆಸ್‌ ಡಿಸ್ಟ್ರಿಕ್ಟ್ ನಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ ಬಿಎ ಓದುತ್ತಿದ್ದಾನೆ . ಆರೋಪಿಗಳು ಕ್ಯಾಂಪಸ್‌ನ ಬಳಿ ವೀಡಿಯೊ ಚಿತ್ರೀಕರಣ ಮಾಡುವಾಗ ಈ ಘಟನೆ ಸಂಭವಿಸಿದೆ ಮತ್ತು ಸಂತ್ರಸ್ತನ ಕ್ಯಾಮೆರಾ ತಡೆದು  ಆತನನ್ನು ಹಿಂಬಾಲಿಸಿದ್ದಾರೆ.

ಆತನ ಮೇಲೆ ನಡೆದ ಹಲ್ಲೆಯಿಂದಾಗಿ ಆತ ತುಂಬಾ ನೋವಿನಲ್ಲಿದ್ದಾನೆ, ನನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಆತನ ಮೇಲೆ ನಡೆದ ಹಲ್ಲೆಯಿಂದಾಗಿ ದೇಹದ ಕೆಲ ಭಾಗ ಊದಿಕೊಂಡಿವೆ. ನನ್ನ ಮಗಲ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವುದರಿಂದ  ಫಿಟ್ನೆಸ್ ಕಾಪಾಡಿಕೊಂಡಿದ್ದಾನೆ, ಹೀಗಾಗಿ ಆತ ಬದುಕುಳಿದಿದ್ದಾನೆ.

ತಮ್ಮ ಮಗನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಸಂಸ್ಥೆಯ ಡೀನ್ ಜೊತೆ  ಕೆಎಎಸ್ ಅಧಿಕಾರಿ ಮಾತನಾಡಿದ್ದಾರೆ, ಆದರೆ ಡೀನ್‌ನ ನಿಷ್ಕ್ರಿಯತೆಯಿಂದ ಅತೃಪ್ತಿ ಹೊಂದಿದ್ದ ಅವರು ಕೇರಳ ಕೇಡರ್‌ನ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅವರ  ಬಾವ ಮೈದುನನ ಸಲಹೆಯನ್ನು ಕೇಳಿದ್ದಾರೆ.

ನಂತರ ಬೆಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ ಐಪಿಎಸ್ ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ. ಅಶೋಕನಗರ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಮ್ಮ ಮಗ ಕಾಲೇಜಿನ ಡೀನ್‌ಗೆ ವಿಷಯ ತಿಳಿಸಿದ ನಂತರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವ ಬದಲು ಆರೋಪಿಗಳು, ನನ್ನ ಮಗನನ್ನು ರಕ್ಷಿಸಲು ಪ್ರಯತ್ನಿಸಿದ  ಇಬ್ಬರು ಸಹಪಾಠಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಖಾನ್ ಆರೋಪಿಸಿದ್ದಾರೆ.
ಆಂಬ್ಯುಲೆನ್ಸ್‌ನ ಸೈರನ್ ಅನ್ನು  ಪೊಲೀಸರು ಎಂದು ತಪ್ಪಾಗಿ ಭಾವಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು.

ಸಂತ್ರಸ್ತರು ಮತ್ತು ಆರೋಪಿಗಳು  ವಿದ್ಯಾರ್ಥಿಗಳಾಗಿರುವುದರಿಂದ   ಅನರ ಹೆಸರುಗಳನ್ನು ಅವರುಮರೆಮಾಚಲು ವಿನಂತಿಸಿದ ತನಿಖಾ ತಂಡದ ಭಾಗವಾಗಿರುವ ಹಿರಿಯ ಪೊಲೀಸ್ ಅಧಿಕಾರಿ, ಆರೋಪಿ ವಿದ್ಯಾರ್ಥಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ 307) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಿಸಿದ್ದಾರೆ.

ಈ ಹಿಂದೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ (SWM) ಜಂಟಿ ಆಯುಕ್ತರಾಗಿಯೂ ಸೇವೆ ಸಲ್ಲಿಸಿರುವ ಖಾನ್, ಹಲಸೂರಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.   ಪೊಲೀಸರು ಐಪಿಸಿ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಐಪಿಸಿ 506 (ಅಪರಾಧ ಬೆದರಿಕೆ), ಐಪಿಸಿ 149 (ಕಾನೂನುಬಾಹಿರ ಸಭೆ) ಮತ್ತು ಐಪಿಸಿ 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಘಟನೆಯ ನಂತರ, ಪೊಲೀಸರು ಎಲ್ಲಾ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com