ಶಬ್-ಎ-ಬರಾತ್ ರಾತ್ರಿ ಬೈಕ್ ಸ್ಟಂಟ್ ಮಾಡಬೇಡಿ; ಯುವಕರಿಗೆ ಮುಸ್ಲಿಂ ಸಮುದಾಯದ ಹಿರಿಯರ ಕಿವಿಮಾತು 

ಮಂಗಳವಾರ ಮುಸ್ಲಿಮರ ಪ್ರಮುಖ ಆಚರಣೆಗಳಲ್ಲಿ ಒಂದಾದ ಶಬ್-ಎ-ಬರಾತ್ ಹಬ್ಬ ಆಗಿರುವುದರಿಂದ ಸಮುದಾಯದ ಹಿರಿಯರು ಮತ್ತು ಇಮಾಮ್‌ಗಳು ಸಾಮೂಹಿಕವಾಗಿ ಯುವಕರು ಸಮುದಾಯದ ಗೌರವವನ್ನು ಉಳಿಸಲು ಮತ್ತು ಬೈಕ್ ಸ್ಟಂಟ್‌ಗಳನ್ನು ಮಾಡುವ ಮೂಲಕ ಕಾನೂನು ತೊಂದರೆಗೆ ಸಿಲುಕದಂತೆ ಸಲಹೆ ನೀಡುತ್ತಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಂಗಳವಾರ ಮುಸ್ಲಿಮರ ಪ್ರಮುಖ ಆಚರಣೆಗಳಲ್ಲಿ ಒಂದಾದ ಶಬ್-ಎ-ಬರಾತ್ ಹಬ್ಬ ಆಗಿರುವುದರಿಂದ ಸಮುದಾಯದ ಹಿರಿಯರು ಮತ್ತು ಇಮಾಮ್‌ಗಳು ಸಾಮೂಹಿಕವಾಗಿ ಯುವಕರು ಸಮುದಾಯದ ಗೌರವವನ್ನು ಉಳಿಸಲು ಮತ್ತು ಬೈಕ್ ಸ್ಟಂಟ್‌ಗಳನ್ನು ಮಾಡುವ ಮೂಲಕ ಕಾನೂನು ತೊಂದರೆಗೆ ಸಿಲುಕದಂತೆ ಸಲಹೆ ನೀಡುತ್ತಿದ್ದಾರೆ. 

ಈ ಹಿಂದೆ ಅಪಘಾತಗಳು ಮತ್ತು ಅಹಿತಕರ ಘಟನೆಗಳು ನಡೆದಿರುವುದರಿಂದ ಮಂಗಳವಾರ ರಾತ್ರಿ ಯುವಕರ ಮೇಲೆ ನಿಗಾ ಇಡುವಂತೆ ಇಮಾಮ್‌ಗಳು ಸಮುದಾಯದ ಮುಖಂಡರು ಮತ್ತು ಹಿರಿಯರಲ್ಲಿ ಮನವಿ ಮಾಡಿದ್ದಾರೆ. ಪವಿತ್ರ ರಂಜಾನ್ ಮಾಸಕ್ಕೆ 15 ದಿನಗಳ ಮೊದಲು ಈ ದಿನ ಆಚರಿಸಲಾಗುತ್ತೆ. 

ಸುಮಾರು ಒಂದು ದಶಕದಿಂದ, ಬೆಂಗಳೂರು ಟ್ರಾಫಿಕ್ ಪೊಲೀಸರು ರಾತ್ರಿ 9 ಗಂಟೆಯ ನಂತರ ನಗರದಲ್ಲಿ ಫ್ಲೈಓವರ್‌ಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 'ಶಬ್-ಎ-ಬರಾತ್ ಪವಿತ್ರ ರಂಜಾನ್ ತಿಂಗಳ ಆಗಮನದ ಸೂಚನೆಯಾಗಿದೆ. ಮಸೀದಿಗಳಿಗೆ ಬಂದು ಪ್ರಾರ್ಥನೆ ಸಲ್ಲಿಸುವಂತೆ ಸಮುದಾಯದವರಿಗೆ ತಿಳಿಸಲಾಗಿದೆ. ನಗರದ ಸುಮಾರು 400ಕ್ಕೂ ಹೆಚ್ಚು ಮಸೀದಿಗಳಿಗೆ ಶುಕ್ರವಾರ ಧರ್ಮ ಪ್ರವಚನವನ್ನು ನೀಡಲು ಮತ್ತು ಶಬ್-ಎ-ಬರಾತ್ ರಾತ್ರಿಯಲ್ಲಿ ಘೋಷಣೆಗಳನ್ನು ಮಾಡಲು ಕೇಳಲಾಗಿದೆ.

'ವ್ಹೀಲಿಂಗ್ ಮತ್ತು ಬೈಕ್ ಸ್ಟಂಟ್‌ಗಳಷ್ಟೇ ಅಲ್ಲ, ಯುವಕರು ಮತ್ತು ಸಮುದಾಯದವರು ಆ ರಾತ್ರಿ ಬೀದಿಗಳಲ್ಲಿ ತಿರುಗಾಡದಂತೆ ಮತ್ತು ಇತರ ಸಮುದಾಯದವರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಪ್ರತಿ ಪ್ರದೇಶದಲ್ಲಿ ಕೆಲವು ಹಿರಿಯರು ಮತ್ತು ಮುಖಂಡರು ಈ ಬಗ್ಗೆ ನಿಗಾ ಇಡುತ್ತಾರೆ ಮತ್ತು ಅಗತ್ಯವಿದ್ದರೆ ಪೊಲೀಸರಿಗೆ ಕರೆ ಮಾಡಿ ಶಾಂತಿ ಕದಡದಂತೆ ನೋಡಿಕೊಳ್ಳುತ್ತಾರೆ' ಎಂದು ಜಾಮಿಯಾ ಮಸೀದಿ ಸಿಟಿ ಮಾರುಕಟ್ಟೆಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾಮ್ ರಶಾದಿ ಹೇಳಿದರು.

ಶಬ್-ಎ-ಬರಾತ್ ಮತ್ತು ಹೊಸ ವರ್ಷದಂತಹ ಹಬ್ಬಗಳ ಸಂದರ್ಭದಲ್ಲಿ, ರಾತ್ರಿ 9 ಗಂಟೆಯ ನಂತರ ಫ್ಲೈಓವರ್‌ಗಳನ್ನು ಮುಚ್ಚಲಾಗುವುದು. ಅಷ್ಟರಲ್ಲಾಗಲೇ ಸಂಚಾರ ಯಥಾಸ್ಥಿತಿಗೆ ತಲುಪಿರುತ್ತದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

'ಜಂಕ್ಷನ್‌ಗಳಲ್ಲಿನ ಎಲ್ಲಾ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅಪಾಯಕಾರಿ ಸಾಹಸಗಳಲ್ಲಿ ತೊಡಗಿಸಿಕೊಂಡರೆ ಅಂತವರನ್ನು ಹಿಡಿಯಲಾಗುತ್ತದೆ' ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com