ಹೆಚ್ಚುವರಿ ನೀರು ಸರಬರಾಜು; ಬೇಸಿಗೆಯಲ್ಲಿ ನೀರಿನ ಬಿಕ್ಕಟ್ಟು ನಿರ್ವಹಣೆಗೆ 35 ನೋಡಲ್ ಅಧಿಕಾರಿಗಳ ನಿಯೋಜನೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್‌ಬಿ) ಬೇಸಿಗೆಯಲ್ಲಿ ನೀರಿನ ಬಿಕ್ಕಟ್ಟು ನಿರ್ವಹಣೆಗಾಗಿ 35 ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದೆ ಮತ್ತು ಹೆಚ್ಚುವರಿ ನೀರು ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಲು ಸುಮಾರು 15,000 ಬೋರ್‌ವೆಲ್‌ಗಳನ್ನು ಸಿದ್ಧಪಡಿಸುವ ಮೂಲಕ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ವರ್ಷ ಯತೇಚ್ಛವಾಗಿ ಸುರಿದ ಮಳೆಯಿಂದಾಗಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಿದೆ. ಜಲಾಶಯಗಳು ನೀರಿನಿಂದ ತುಂಬಿವೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್‌ಬಿ) ಬೇಸಿಗೆಯಲ್ಲಿ ನೀರಿನ ಬಿಕ್ಕಟ್ಟು ನಿರ್ವಹಣೆಗಾಗಿ 35 ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದೆ ಮತ್ತು ಹೆಚ್ಚುವರಿ ನೀರು ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಲು ಸುಮಾರು 15,000 ಬೋರ್‌ವೆಲ್‌ಗಳನ್ನು ಸಿದ್ಧಪಡಿಸುವ ಮೂಲಕ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ.

ಬೆಂಗಳೂರಿನಿಂದ ಸರಿಸುಮಾರು 95 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ತೊರೈಕಾಡನಹಳ್ಳಿ ಜಲಾಶಯದಿಂದ ದಿನಕ್ಕೆ ಒಟ್ಟು ದಿನಕ್ಕೆ 1,450 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರನ್ನು ನಗರಕ್ಕೆ ಪಂಪ್ ಮಾಡಲಾಗುತ್ತಿದೆ.

ಬಿಡಬ್ಲುಎಸ್ಎಸ್‌ಬಿ ಅಧ್ಯಕ್ಷ ಎನ್ ಜಯರಾಮ್ ಟಿಎನ್ಐಇ ಜೊತೆ ಮಾತನಾಡಿ, ನಗರವು ಬೋರ್‌ವೆಲ್‌ಗಳಿಂದ ಹೆಚ್ಚುವರಿ ದಿನಕ್ಕೆ 500 ಮಿಲಿಯನ್ ಲೀಟರ್ ನೀರನ್ನು ಸಹ ಬಳಸುತ್ತಿದೆ. 'ಬೇಸಿಗೆಗೆ ಸಿದ್ಧವಾಗಲು ನಾವು ಬಿಬಿಎಂಪಿಯಿಂದ ನಮಗೆ ಹಸ್ತಾಂತರಿಸಲ್ಪಟ್ಟ 7,000 ಸೇರಿದಂತೆ ಸುಮಾರು 15,000 ಬೋರ್‌ವೆಲ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದೇವೆ. ಅವುಗಳ ನಿರ್ವಹಣೆ ಹಾಗೂ ಕಾಯಕಲ್ಪ ನೀಡುವ ಕಾರ್ಯ ಪೂರ್ಣಗೊಂಡಿದೆ. ಉತ್ತಮವಾಗಿರುವ ಬೋರ್‌ವೆಲ್ ನೀರನ್ನು ಅಗತ್ಯವಿರುವವರಿಗೆ ಕಳುಹಿಸಲು ನಾವು ಪ್ರತ್ಯೇಕ ಸರಬರಾಜು ಚಾನಲ್ ಅನ್ನು ಸ್ಥಾಪಿಸಿದ್ದೇವೆ. ಅವುಗಳ ನಿರ್ವಹಣೆಗೆ ಪ್ರತಿ ತಿಂಗಳು 3 ಕೋಟಿ ರೂ. ವೆಚ್ಚವಾಗುತ್ತಿದೆ' ಎಂದರು.

ಬಿಡಬ್ಲ್ಯುಎಸ್ಎಸ್‌ಬಿ ಒಡೆತನದ 70 ನೀರಿನ ಟ್ಯಾಂಕರ್‌ಗಳು ನೀರಿನ ಕೊರತೆ ವರದಿಯಾದ ಪ್ರದೇಶಗಳಲ್ಲಿ ಉಚಿತವಾಗಿ ನೀರು ವಿತರಿಸಲು ಸಿದ್ಧವಾಗಿರಲಿವೆ ಎಂದು ಹೇಳಿದರು.

ಬಿಡಬ್ಲ್ಯುಎಸ್‌ಎಸ್‌ಬಿಯ ಮುಖ್ಯ ಎಂಜಿನಿಯರ್ ಬಿ ಸುರೇಶ್ ಮಾತನಾಡಿ, 'ಬೇಸಿಗೆಯಲ್ಲಿ ಪ್ರತಿದಿನ ನೀರಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮಾರ್ಚ್ 1 ರಿಂದ ಅದರ 35 ಉಪವಿಭಾಗಗಳಿಗೆ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ನಿರ್ವಹಣಾ ವಿಭಾಗದ ಭಾಗವಾಗಿರದ ನೌಕರರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಅವರು ಮಾರ್ಚ್‌ನಿಂದ ಮೇವರೆಗೆ ಮಾತ್ರ ಉಪವಿಭಾಗದ ಭಾಗವಾಗಿರುತ್ತಾರೆ ಮತ್ತು ನಿರ್ವಹಣಾ ಸಿಬ್ಬಂದಿಯೊಂದಿಗೆ ನಿಯಮಿತವಾಗಿ ಸಮನ್ವಯ ಸಾಧಿಸುವ ಮೂಲಕ ತಮ್ಮ ವ್ಯಾಪ್ತಿಯಲ್ಲಿ ನೀರಿನ ಬಿಕ್ಕಟ್ಟು ಉಂಟಾಗದಂತೆ ನೋಡಿಕೊಳ್ಳುವುದು ಅವರ ಮುಖ್ಯ ಜವಾಬ್ದಾರಿಯಾಗಿದೆ' ಎಂದು ಅವರು ಹೇಳಿದರು.

ಈ ಬೇಸಿಗೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದ ಸುರೇಶ್, ಕೃಷ್ಣರಾಜ ಸಾಗರ ಜಲಾಶಯದಲ್ಲಿ 33.17 ಟಿಎಂಸಿ ಅಡಿ ನೀರಿದ್ದರೆ, ಕಬಿನಿಯಲ್ಲಿ 11.89 ಟಿಎಂಸಿ ಅಡಿ ನೀರಿದೆ. 'ನಾವು ವಾಸ್ತವದಲ್ಲಿ  ಈ ವರ್ಷ ಉತ್ತಮ ಸ್ಥಾನದಲ್ಲಿದ್ದೇವೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com