ದಾವಣೆಗೆರೆ: ರೌಡಿಶೀಟರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ರೌಡಿಶೀಟರ್ ತಂಡ!

ರೌಡಿಶೀಟರ್​ಗಳ ತಂಡ ಇಬ್ಬರು ರೌಡಿಶೀಟರ್​ಗಳ ಮೇಲೆ ದಾಳಿ ನಡೆಸಿ ಓರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು ಮತ್ತೋರ್ವನ ಪರಿಸ್ಥಿತಿ ಗಂಭೀರವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಾವಣೆಗೆರೆ: ರೌಡಿಶೀಟರ್​ಗಳ ತಂಡ ಇಬ್ಬರು ರೌಡಿಶೀಟರ್​ಗಳ ಮೇಲೆ ದಾಳಿ ನಡೆಸಿ ಓರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು ಮತ್ತೋರ್ವನ ಪರಿಸ್ಥಿತಿ ಗಂಭೀರವಾಗಿದೆ. 

ದಾವಣೆಗೆರೆ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದ ಬಳಿ ಘಟನೆ ನಡೆದಿದೆ. ಘಟನೆಯಲ್ಲಿ 30 ವರ್ಷದ ರೌಡಿಶೀಟರ್ ಆಂಜನೇಯ ಅಲಿಯಾಸ್​​ ಅಂಜನಿ ಹತ್ಯೆಯಾಗಿದ್ದು, 28 ವರ್ಷದ ಮಧು ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಅಂಜನಿ ಮತ್ತು ಮಧು ಜಾಮೀನಿನ ಮೇಲೆ ಹೊರಬಂದಿದ್ದರು. ಇಬ್ಬರು ಬೈಕ್​ನಲ್ಲಿ ತೆರಳುತ್ತಿದ್ದಾಗ ಇತರೆ ರೌಡಿಶೀಟಗಳು ಸ್ಕಾರ್ಪಿಯೊ ಕಾರಿನಲ್ಲಿ ಬಂದು ಅಂಜನಿ, ಮಧುನನ್ನು ಅಡ್ಡಗಟ್ಟಿ ಮಚ್ಚಿನಿಂದ ದಾಳಿ ನಡೆಸಿದ್ದರು.

ಗಂಭೀರವಾಗಿ ಗಾಯಗೊಂಡಿರುವ ಮಧುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ನ್ಯಾಮತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com